ರಾಯಚೂರು-ಧರ್ವೇಶ್ ಗ್ರೂಪ್ ಕಂಪನಿಯು ಜನರ ಹಣ ವಂಚನೆ ಪ್ರಕರಣ ಸಂಬಂಧಿಸಿ ಧರ್ವೇಶ್ ಗ್ರೂಪ್ ಸೇರಿ ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲೆಯಾಗಿದೆ.
ಹಣ ಹೂಡಿಕೆದಾರರು ಆಕ್ರೋಶಗೊಂಡು ಮೊನ್ನೆ ರಾತ್ರಿ ಧರ್ವೇಶ್ ಗ್ರೂಪ್ ಕಂಪನಿ ಕಚೇರಿ ಧ್ವಂಸಗೊಳಿಸಿದ ಘಟನೆ ನಡೆಯಿತು. ಬಾರಿ ಸಂಖ್ಯೆಯಲ್ಲಿ ಜನರು ಕಚೇರಿಯಲ್ಲಿ ಸೇರಿ ನ್ಯಾಯವಾದಿ ತಾರಾನಾಥ ಅವರೊಂದಿಗೆ ತೀವ್ರ ವಾದ ವಿವಾದ ನಡೆಯಿತು. ಹೂಡಿಕೆದಾರರಿಗೆ ಹಣ ಹಿಂತಿರುಗಿಸುವ ಧರ್ವೇಶ್ ಗ್ರೂಪ್ ಕಂಪನಿಯ ಭರವಸೆ ಸಹಕಾರಗೊಳ್ಳದೆ ಹಿನ್ನಲೆ ಆಕ್ರೋಶಗೊಂಡ ಜನ ಗಲಾಟೆ ಮಾಡಿದ ಘಟನೆ ನಡೆಯಿತು.ತೀವ್ರ ವಾಗ್ವಾದಲ್ಲಿ ವಂಚಿತ ಜನರು ಕಾವಲುಗಾರ ಸಲಿಂ ತಂದೆ ಹುಸೇನ್ ಎಂಬುವರ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಸಿ ಹೈದರಲಿ ತಂದೆ ಎಂ ಡಿ ಸಿರಾಜ್ ಅವರು ಭಾರತೀಯ ದಂಡ ಸಂಹಿತೆ ಕಲಂ 324, 329 ಅಡಿಯಲ್ಲಿ ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಗಲಾಟೆ ಮಾಡಿದ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಷ ಸೇವೆಸಿ ಆತ್ಮಹತ್ಯೆ ಯತ್ನಸಿದ ತಾಲೂಕಿನ ಸಗಮಕುಂಟಾ ಗ್ರಾಮದ ವೆಂಕಟೇಶ್ ಅವರ ಸಂಬಂಧಿ ಚಂದ್ರು ಬಾಬು ಅವರು ಸೈಬರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 406.420 34 ರಲ್ಲಿ ಪ್ರಕರಣ ದಾಖಲಿಸಿದ್ದಾರೆ.