ಸಿಂಧನೂರು.ಸರಕಾರಕ್ಕೆ ರಾಜಧನ ಪಾವತಿಸದೆ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಎರಡು ಟಿಪ್ಪರ್‌ಗಳನ್ನು ಗ್ರಾಮೀಣ ಠಾಣೆಯ ಪೊಲೀಸರು ವಶಕ್ಕೆ ಪಡೆದು ಮಾಲೀಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.ಗುರುವಾರ ಮಧ್ಯಾಹ್ನ ಮಾನ್ವಿಯಿಂದ ಸಿಂಧನೂರು ನಗರಕ್ಕೆ ಮರಳು ಹೊತ್ತು ಬರುತ್ತಿದ್ದ ಎರಡು ಟಿಪ್ಪರ್ಗಳನ್ನು ಖಚಿತ ಮಾಹಿತಿ ಮೇರೆಗೆ ತಾಲೂಕಿನ ಅರಗಿನಮರ ಕ್ಯಾಂಪ್ ಹತ್ತಿರ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಸರಕಾರಕ್ಕೆ ರಾಜಧನ ಪಾವತಿಸದೇ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿರುವದು ದೃಢಪಟ್ಟ ಹಿನ್ನಲೆಯಲ್ಲಿ ಕೆ.ಎ 36, ಸಿ 2952 ಹಾಗೂ ಕೆ.ಎ 36 ಸಿ – 5472 ಟಿಪ್ಪರ್‌ಗಳನ್ನು ಠಾಣೆಗೆ ತರಲಾಗಿದೆ. ಟಿಪ್ಪರ್‌ಗಳ ಮಾಲೀಕರಾದ ಹೊಸಗೇರಪ್ಪ ಹಾಗೂ ಆನಂದ ಕನಸಾವಿ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
Megha News > Crime News > ಅಕ್ರಮ ಮರಳು ಸಾಗಾಣಿಕೆ: : ಎರಡು ಟಿಪ್ಪರ್ ವಶ