ರಾಯಚೂರು. ಜಲಜೀವನ್ ಮಿಷನ್ ಯೋಜನೆಯಡಿ ಒಂದೇ ಕಾಮಗಾರಿ ಎರಡು ಬಾರಿ ಬಿಲ್ ಪಾವತಿಸಿರುವ ಆರೋಪದ ಮೇಲೆ ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಸೈಯದ್ ಫಜಲ್ ಸೇರಿ ಮೂರು ಜನ ಅಧಿಕಾರಿಗಳನ್ನು ಸೇವೆ ಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.
ಲಿಂಗಸೂರು ತಾಲೂಕಿನ ನಾಗರಬೆಂಚಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿ ನಿರ್ವಹಿಸಲಾಗಿದ್ದ ಒಂದೇ ಕಾಮಗಾರಿಗೆ ಎರಡು ಬಿಲ್ ಪಾವತಿ ಮಾಡಿರುವುದು ಮೇ ಲ್ನೋಟಕ್ಕೆ ಸಾಬೀತಾಗಿರುವುದರಿಂದ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾ ಲಕ ಅಭಿಯಂತರ ಸೈಯದ್ ಫಜಲ್ ಮಹಿಬೂ ಬ್, ಲೆಕ್ಕ ಅಧೀಕ್ಷಕ ಅಬ್ದುಲ್ ರಹೀಮ್ ಜಾಕಿರ್ ಹುಸೇನ್ ಎಂಬುವರನ್ನು ಸೇವೆಯಿಂದ ಅಮಾ ನತುಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂ ಚಾಯತ್ ರಾಜ್ ಇಲಾಖೆ ಆಧೀನ ಕಾರ್ಯ ದರ್ಶಿ, ಚೇತನ್ ಕುಮಾರ್ ಆದೇಶ ನೀಡಿದ್ದಾರೆ.
ನಾಗರಬೆಂಚಿ ಗ್ರಾಮದ ಜಲ್ ಜೀವನ್ ಮಿಷನ್ ಯೋಜನೆಯಡಿ 383 ಮನೆಗಳಿಗೆ ನೀರಿನ ಸಂಪರ್ಕ ಒದಗಿಸಲು 19 ಲಕ್ಷ 66 ಸಾವಿರ
283 ರೂ. ಕಾಮಗಾರಿಯನ್ನು ಕವಿತಾಳದ ನಿಂಗಪ್ಪ ತೋಳದ್ ಎಂಬುವರಿಗೆ ಟೆಂಡರ್ ನೀಡಲಾಗಿತ್ತು, ಕಾಮಗಾರಿ ನಿರ್ವಹಿಸಿದ ಆಧಾರದ ಮೇಲೆ 2022 ಸೆಪ್ಟೆಂಬರ್ 16ರಂದು ಗುತ್ತಿಗೆದಾರರಿಗೆ ಹಣವನ್ನು ಪಾವತಿ ಮಾಡಲಾಯಿತು. ಇದೇ ಕಾಮಗಾರಿಗೆ 2023 ಸೆಪ್ಟೆಂಬರ್ 11 ರಂದು ಮತ್ತೊಮ್ಮೆ ಲೆಕ್ಕ ಶಾಖೆಯಿಂದ ಅನುಮೋದಿಸಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲುರುಜುವಿನೊಂದಿಗೆ ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದೆ, ಬಹುಜನ ದಲಿತ ಸಂಘರ್ಷ ಸಮಿತಿ ಹಾಗೂ ಜಯ ಕರ್ನಾಟಕ ಸಂಘಟನೆಯಿಂದ ನೀಡಲಾಗಿದ್ದ ದೂರಿನ ಮೇರೆಗೆ ಪರಿಶೀಲನೆ ನಡೆಸಿ ದಾಗ ಒಂದೇ ಕಾಮಗಾರಿಗೆ ಎರಡು ಬಾರಿ ಬಿಲ್ ಪಾವತಿ ಮಾಡಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಮೂರು ಜನರನ್ನು ಸೇವೆಯಿಂದ ಅಮಾನತುಗೊಳಿಸಿ, ಕೇಂದ್ರ ಸ್ಥಾನ ಬಿಡದಂತೆ ಸೂಚಿಸಿ ಆದೇಶಿಸಲಾಗಿದೆ.ಸೇವೆಯಿಂದ ಅಮಾನತುಗೊಂಡ ಖಾಲಿಯಾಗಿರುವ ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಹುದ್ದೆಗೆ ಶಿಕಾರಿಪುರದ ವಿನೋದ್ ಕುಮಾರ್ ಗುಪ್ತ ಇವರನ್ನು ನಿಯತ್ತಿ ಗೊಳಿಸಿ ಆಧೀನ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.
ಜಲಜೀವನ್ ಮಿಷನ್ ಯೋಜನೆಯಡಿ ಲಿಂಗಸುಗೂರು ಸೇರಿದಂತೆ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ಅನುದಾನ ದುರ್ಬಳಕೆ ಯಾಗಿರುವ ಆರೋಪ ಕೇಳಿಬಂದಿದೆ.
ಮನೆ ಮನೆಗಳಿಗೆ ನಳಗಳನ್ನು ಅಳವಡಿಸುವುದು ಕಳಪೆ, ಟೆಂಡರ್ ನಿಯಮಗಳ ಉಲ್ಲಂಘನೆಯ ಆರೋಪ ಕೇಳಿ ಬಂದಿದೆ. ಆದರೆ ಜಿಲ್ಲಾ ಪಂಚಾಯತಿಯಿಂದ ಸಮರ್ಪಕ ಮೇಲುಸ್ತುವಾರಿ ನಡೆಯದೆ ಇರುವುದರಿಂದ ತಪ್ಪು ಲೆಕ್ಕ ತೋರಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವ ಆರೋಪ ಕೇಳಿ ಬಂದಿದೆ. ಈಗಾಗಲೇ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿ ಬಾರಿ ಅಕ್ರಮ ಪ್ರಕರಣ ಬಯಲಾಗಿರುವ ಬೆನ್ನ ಹಿಂದೆಯೇ ಜಲಜೀವನ ಮಿಷನ್ ಯೋಜನೆ ಮಾಡಿರುವ ಪ್ರಕರಣ ಬಯಲಾಗಿದೆ ಇನ್ನು ಸಾಕಷ್ಟು ಅಕ್ರಮ ದೂರಗಳಿದ್ದು ಸಮಗ್ರ ತನಿಖೆ ನಡೆಯಬೇಕಾದ ಅವಶ್ಯಕತೆ ಇದೆ.