Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Local NewsState News

ರಾಯಚೂರು ನಗರ ಸ್ಥಳೀಯ ಯೋಜನೆಗೆ ಹೊಸದಾಗಿ ೨೫ ಗ್ರಾಮಗಳ ಸೇರ್ಪಡೆ: ನಗರಾಭಿವೃದ್ದಿಇಲಾಖೆ ಆದೇಶ

ರಾಯಚೂರು ನಗರ ಸ್ಥಳೀಯ ಯೋಜನೆಗೆ ಹೊಸದಾಗಿ ೨೫ ಗ್ರಾಮಗಳ ಸೇರ್ಪಡೆ: ನಗರಾಭಿವೃದ್ದಿಇಲಾಖೆ ಆದೇಶOplus_131072

ರಾಯಚೂರು, ನ.೧೪- ರಾಯಚೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ ಹೊಸದಾಗಿ ೨೫ ಗ್ರಾಮಗಳನ್ನು ಸೇರ್ಪಡೆ ಮಾಡಿ ನಗರಾಭಿವೃದ್ದಿ ಇಲಾಖೆ ಅಧೀನ ಕಾರ್ಯದರ್ಶಿ ಲತಾ.ಕೆ. ಆದೇಶಿಸಿದ್ದಾರೆ. ಪರಿಷ್ಕೃತ ಸ್ಥಳೀಯ ಯೋಜನಾ ವ್ಯಾಪ್ತಿಗೆ ರಾಯಚೂರು ತಾಲೂಕಿನ ವಡ್ಲೂರು, ಕೂಡ್ಲೂರು,ಶಾಖವಾದಿ, ಕಟ್ಲಟ್ಕೂರು, ಕುರುಬದೊಡ್ಡಿ, ಆಶಾಪುರು, ವಡವಾಟಿ, ಬೀಜನಗೇರಾ, ರಾಜಲಬಂಡಾ, ದೇವನಪಲ್ಲಿ, ತುಂಟಾಪುರು, ಗೋನ್ವಾರ, ಅನವರ, ಕಮಲಾಪುರು, ಉಡಮಗಲ್, ಜಾಲಿಬೆಂಚಿ, ನೆಲಹಾಳ,ಮಮದಾಪುರು, ಹುಣಸಿಹಾಳ ಹುಡಾ, ಗೋನಾಳ, ಪತ್ತೇಪೂರು, ಮರ್ಚಡ್, ಹೊಸಪೇಟೆ, ಜೇಗರಕಲ್ ಗ್ರಾಮಗಳು ನಗರ ಯೋಜನಾ ವ್ಯಾಪ್ತಿಗೆಒಳಪಡಿಸಲಾಗಿದೆ.
ನಗರ ಸ್ಥಳೀಯ ಯೋಜನೆ ವ್ಯಾಪ್ತಿಗೆ ಒಳಪಟ್ಟಿರವ ಗ್ರಾಮಗಳನ್ನು ವ್ಯವಸಾಯ ವಲಯವೆಂದು ಪರಿಗಣಿಸಿ ಮಹಾಯೋಜನೆ ಅವಕಾಶಗಳಂತೆ ಅಭಿವೃದ್ದಿ ಅನುಮೋದಿಸುವದು, ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಟ್ಟ ಜಮೀನಗಳಿಗೆ ಸಂಬAಧಿಸಿದAತೆ ಸರ್ಕಾರ ಹೊರಡಿಸಿರುವ ಆದೇಶಗಳು,ಸ್ಥಳೀಯ ಯೋಜನಾ ಪ್ರದೇಶವೆಂದು ಘೋಷಿಸುವ ಪೂರ್ವದಲ್ಲಿಕಂದಾಯ ಇಲಾಖೆಯಿಂದ ಭೂ ಪರಿವರ್ತನೆಗೆ ಹೊರಡಿಸಿರುವ ಚಾಲ್ತಿ ಆದೇಶಗಳು,ವಿನ್ಯಾಸ ಅನುಮೋದನೆಗೆ ಕಟ್ಟಡ ಕಟ್ಟಲು ಪ್ರಾರಂಬಿಕ ಪ್ರಮಾಣಪತ್ರ ನೀಡಲು ಪರಿಗಣಿಸತಕ್ಕದ್ದು, ಪರಿಷ್ಕೃತ ಸ್ಥಳೀಯ ಯೋಜನೆ ಒಳಪಟ್ಟ ಪ್ರದೇಶದಲ್ಲಿ ಸರ್ಕಾರ ಮಹಾ ಯೋಜನೆ ಅಂತಿಮ ಅನುಮೋದನೆ ನೀಡುವವರೆಗೆ ಭೂ ಪರಿವರ್ತನಾ ಅಭಿಪ್ರಾಯ ನೀಡತಕ್ಕದಲ್ಲ. ಭೂ ಉಪಯೋಗ ಬದಲಾವಣೆಯನ್ನು ಪಾರದರ್ಶಕ ಕಾಯ್ದೆ ೧೯೬೧ ಕಲಂ ೧೪ಎ ಪ್ರಸ್ತಾವನೆ ಸಲ್ಲಿಸುವಂತಿಲ್ಲ, ಸ್ಥಳೀಯ ಯೋಜನೆ ಘೋಷಣೆಯಾದ ದಿನಾಂಕದಿAದ ೨ ವರ್ಷ ಒಳಗಾಗಿ ಮಹಾಯೋಜನೆ ಸಿದ್ದಪಡಿಸಿ ಸರ್ಕಾರ ತಾತ್ಕಾಲಿಕ ಅನುಮೋದನೆ ಪಡೆಯಬೇಕು ಇಲ್ಲದೇ ಹೋದಲ್ಲಿ ಅವಕಾಶ ಸರ್ಕಾರ ಹಿಂಪಡೆಯುವದಾಗಿ ಷರತ್ತುಗಳನ್ನು ವಿಧಿಸಿ ಆದೇಶಿಸಲಾಗಿದೆ.
ಹೊಸದಾಗಿ ಸೇರ್ಪಡೆಗೊಂಡ ಗ್ರಾಮಗಳ ಅಭಿವೃದ್ದಿ ಸವಾಲು ಎದುರಿಸಬೇಕಿದೆ. ನಗರಾಭಿವೃದ್ದಿ ಪ್ರಾಧಿಕಾರದ ಮಹಾಯೋಜನೆಗೆ ಸಕಾಲದಲ್ಲಿ ಅನುಮೋದನೆದೊರೆಯದೇ ಇರುವದರಿಂದ ಗ್ರಾಮೀಣ ಕೆಲಸ ಕಾರ್ಯಗಳಿಗೆ ವಿಳಂಬವಾಗುವ ಸಮಸ್ಯೆ ಎದುರಾಗಿದೆ. ಜೊತೆಯಲ್ಲಿ ಹೊಸದಾಗಿ ಗ್ರಾಮಗಳಲ್ಲಿ ಹೊಸ ವಿನ್ಯಾಸ, ಅಸ್ತಿ ವರ್ಗಾವಣೆ ಸಮಸ್ಯೆಗಳು ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳನ್ನು ಗ್ರಾಮಸ್ಥರ ವ್ಯಕ್ತಪಡಿಸುತ್ತಿದ್ದಾರೆ.

Megha News