ರಾಯಚೂರು- ಇತ್ತೀಚಿನ ದಿನಗಳಲ್ಲಿ ರಾಯಚೂರು ನಗರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಾರ್ಡುಗಳು ಹಾಗೂ ಬಡಾವಣೆಗಳಲ್ಲಿ ಬೀದಿ ನಾಯಿಗಳ ಕಡಿತ ಹಾಗೂ ಹಾವಳಿ ಹೆಚ್ಚಾಗಿರುವುದರಿಂದ ನಾಯಿಗಳಿಗೆ ನಗರಸಭೆ ವತಿಯಿಂದ ರಾಯಚೂರು ನಗರದ ಎಲ್ಲಾ ಬೀದಿ ನಾಯಿಗಳಿಗೆ ರೇಬಿಸ್ ರೋಗ ನಿರೋಧಕ ಚುಚ್ಛುಮದ್ಧು ಮತ್ತು ಸಂತಾನ ಹರಣ ಶಸ್ತ್ರಚಿಕಿತ್ಸೆಯ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ತಮ್ಮ ತಮ್ಮ ಸಾಕು ನಾಯಿಗಳಿಗೆ ಕುತ್ತಿಗೆ ಪಟ್ಟಿಯನ್ನು ಹಾಕಿ ಬಿಡತಕ್ಕದ್ದು. ತಪ್ಪಿದಲ್ಲಿ ಹೊರಗಡೆ ಕಂಡ ಕುತ್ತಿಗೆ ಪಟ್ಟಿಯಿರದ ನಾಯಿಗಳನ್ನು ಬೀದಿ ನಾಯಿಗಳೆಂದು ಪರಿಗಣಿಸಿ ಚಿಕಿತ್ಸೆಗೆ ಒಳಪಡಿಸಲಾಗುವುದು. ಕಾರಣ ಈ ಕಾರ್ಯಕ್ಕೆ ಎಲ್ಲಾ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
Megha News > Local News > ಬೀದಿ ನಾಯಿಗಳಿಗೆ ರೇಬಿಸ್ ಚುಚ್ಚುಮದ್ದು, ಶಸ್ತç ಚಿಕಿತ್ಸೆ: ಸಾಕು ನಾಯಿಗಳಿಗೆ ಕುತ್ತಿಗೆ ಪಟ್ಟಿ ಹಾಕಲು ಮನವಿ