ರಾಯಚೂರು. ವಾಲ್ಮೀಕಿ ಅಭಿವೃದ್ದಿ ನಿಗಮದ ಹಣವನ್ನು ಸಿಕ್ಕವರಿಗೆ ಸಿಕ್ಕರ ಖಾತೆ ಹಾಕಿರುವ ಆರೋಪಗಳ ಮಧ್ಯೆ ಜಿಲ್ಲೆಯ ಸಿಂಧನೂರು ತಾಲೂಕಿಗೂ ನಕ್ಕುಂಟಿ ನಾಗರಾಜನ ನಂಟು ವಿಸ್ತರಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಿಂಧನೂರಿನ ನಾಲ್ಕು ಜನರ ಖಾತೆ ೯೮ ಲಕ್ಷ ರೂ ಹಣ ವರ್ಗಾವಣೆ ಮಾಡಿದ್ದು ಪತ್ತೆಯಾಗಿದ್ದು ನಾಲ್ಕು ಜನರ ಬ್ಯಾಂಕ್ ಖಾತೆ ಸೀಜ್ ಮಾಡಲಾಗಿದೆ. ಮಾಜಿ ಸಚಿವ ನಾಗೇಂದ್ರ ಆಪ್ತ ಸಹಾಯಕ ನೆಕ್ಕಂಟಿ ನಾಗರಾಜ್ ಮೂಲಕ ಸಿಂಧನೂರಿನ ಕೋನಮ್ ವೆಂಕಟರೆಡ್ಡಿ ಹಾಗೂ ಮೂವರು ಕುಟುಂಬಸ್ಥರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ವೆಂಕಟರೆಡ್ಡಿ ಖಾತೆಗೆ ೧೨ ಲಕ್ಷ ರೂಪಾಯಿ, ಲಕ್ಷ್ಮೀದೇವಿ ಖಾತೆಗೆ ೨೫ ಲಕ್ಷ, ರತ್ನಕುಮಾರಿ ಖಾತೆಗೆ ೨೫ ಲಕ್ಷ, ಸಂದೀಪ್ ಅನ್ನೋನ ಖಾತೆಗೆ ೨೫ ಲಕ್ಷ ಜಮೆ ಮಾಡಲಾಗಿರುವುದು ತಿಳಿದುಬಂದಿದೆ. ನೆಕ್ಕಂಟಿ ನಾಗರಾಜ ಇವರ ಸಂಬಂಧಿಯಾಗಿರುವ ವೆಂಕಟರೆಡ್ಡಿ ಅವರ ಕುಟುಂಬಕ್ಕೆ ಹಣ ಹಾಕಿ ನಂತರ ಮರುಪಾವತಿಸುವ ಒಪ್ಪಂದ ಮೇಲೆ ಹಣ ಖಾತೆಗೆ ಜಮಾ ಮಾಡಲಾಗಿದೆ. ಖಾತೆಗೆ ಹಣ ಹಾಕಿ ಮರಳಿ ನೀಡಿದರೆ ಇಂತಿಷ್ಟು ಹಣ ನೀಡುವದಾಗಿ ನೆಕ್ಕುಂಟಿ ನಾಗರಾಜ ಭರವಸೆ ನೀಡಿದ್ದ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆ ಸಿಬಿಐ ಸೂಚನೆ ನೀಡಿರುವ ಬೆನ್ನಲ್ಲೇ ಇಮೇಲ್ ಮತ್ತು ಬ್ಯಾಂಕ್ಗೆ ನೋಟಿಸ್ ನೀಡಿ ನಾಲ್ವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲುಹಾಕಿಕೊಳ್ಳಲಾಗಿದೆ. ಖಾತೆ ಹಣಜಮಾಮಾಡಿರುವ ಪ್ರಕರಣ ಈಗಾಗಲೇ ಸಿಬಿಐ, ಇಡಿ ಹಾಗೂ ಎಸ್‌ಐಟಿ ತನಿಖೆ ಪ್ರತ್ಯೇಕವಾಗಿ ನಡೆಯುತ್ತಿದೆ. ನೆಕ್ಕುಂಟಿ ನಾಗರಾಜನೊಂದಿಗೆ ನಂಟು ಹೊಂದಿರುವ ಬ್ಯಾಂಕ್ ಖಾತೆಗಳಪರಿಶೀಲನೆ ಮುಂದುವರೆದಿದೆ.