ಹಟ್ಟಿ: ಪಟ್ಟಣ ಸಮೀಪದ ವೀರಾಪೂರು ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬ ಮೊಹರಂ ಮೌಲಾಲಿ, ಖಾಸಿಂಪೀರ, ಹುಸೇನ್ ಪಾಷಾ, ಹಸೇನ್ ಹುಸೇನ್ ದೇವರ ಕತ್ತಲ್ ರಾತ್ರಿ ಜರುಗಿತು.
ಗ್ರಾಮದಲ್ಲಿ ಹಿಂದೂಗಳೇ ಬಹು ಸಂಖ್ಯಾತರಿ ರುವ ಈ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಸೇರಿ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸುವುದು ವಿಶೇಷವಾಗಿದೆ. ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು. ಅಲಾಯಿ ದೇವರಿಗೆ ಸಕ್ಕರೆ ನೈವೇದ್ಯ ಹರಕೆ ತೀರಿಸಿದರು.
ಬೆಳಗ್ಗೆ ದೇವರು ಹೊತ್ತವರು(ಕುದುರೆ) ಅಗ್ನಿ ಕುಂಡ ತುಳಿದು, ಗ್ರಾಮದ ನಾನಾ ಓಣಿಗಳಲ್ಲಿ ಹರಕೆ ಹೊತ್ತವರ ಮನೆಗಳಿಗೆ ಸವಾರಿ ಮಾಡಿ ದರು. ಗ್ರಾಮದ ಯುವಕರು ಎಡಗಾಲು, ಬಲಗಾಲು ಹೆಜ್ಜೆ, ಕರಡಿ ಹೆಜ್ಜೆ, ಸೇರಿದಂತೆ ವಿವಿಧ ಹೆಜ್ಜೆಗಳ ಕುಣಿತ ಗಮನ ಸೆಳೆದವು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ದೌಲಸಾಬ್, ರಂಗಣ್ಣ, ಮಲ್ಲಪ್ಪ, ಗ್ರಾಮ ಪಂಚಾಯ್ತಿ ಸದಸ್ಯರಾದ ರಮೇಶ, ಸಂಜೀವಪ್ಪ, ಗ್ರಾಮಸ್ಥರಾದ ಭಾಷಾ ಸಾಬ್, ಹುಸೇನ್ ಬುಡ್ಡ, ಹುಲಗಯ್ಯ, ಮೌಲಾಸಾಬ್, ಅಡಿವೆಣ್ಣ, ಹನುಮಂತ ರೆಡ್ಡಿ, ಅಶೋಕ್ ದೇಸಾಯಿ, ಮೌನೇಶ್ ತಳವಾರ್, ನಿಂಗಪ್ಪ ಎಂ., ನಿಂಗಯ್ಯಸ್ವಾಮಿ, ಶಿವಪುತ್ರ ಗಣೇಚಾರಿ, ಮಹ್ಮದ್, ಬೆಟ್ಟಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.