ರಾಯಚೂರು.ಶೈಕ್ಷಣಿಕ, ಸಾಮಾಜಿಕ, ರಾಜ ಕೀಯ ಮತ್ತು ಸಾಂಸ್ಕೃತಿಕವಾಗಿ ತೀರಾ ಹಿಂದು ಳಿದಿರುವ ವೇಮನ ರೆಡ್ಡಿ ಸಮಾಜದ ಅಭಿವೃದ್ದಿಗೆ ಪೂರಕವಾಗಿ ಬೇಕಿರುವ ವೇಮನ ರೆಡ್ಡಿ ಅಭಿವೃದ್ದಿ ನಿಗಮ ಮಂಡಳಿ ರಚನೆಗೆ ತಾಲೂಕು ರೆಡ್ಡಿ ಸಮಾಜದ ಉಪಾಧ್ಯಕ್ಷ ಕೆ.ಲಕ್ಷ್ಮೀ ಕಾಂತರೆಡ್ಡಿ ಒತ್ತಾಯಿಸಿದ್ದಾರೆ.
ವೇಮನ ರೆಡ್ಡಿ ಸಮಾಜದವರು ರಾಜ್ಯಾದ್ಯಂತ ನೆಲೆಗೊಂಡಿದ್ದು, ಸಾತ್ವಿಕ ಸಮಾಜ, ಕೃಷಿ ಮೂಲ ವೃತ್ತಿಯಾಗಿದೆ.
ಸಂಘಟನೆ ಕೊರತೆಯಿಂದ ಸರ್ಕಾರದ ಸವಲ ತ್ತುಗಳಿಂದ ವಂಚಿತರಾಗಿದ್ದಾರೆ. ಸಮಾಜವನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಸರ್ಕಾರದ ಮೇಲಿದೆ. ಸಮಾನತೆ ಸಂವಿಧಾನ ಸಾರುತ್ತದೆ. ಅದಕ್ಕಣುಗುಣವಾಗಿ ರೆಡ್ಡಿ ಸಮಾಜದ ಶ್ರೇಯೋ ಭಿವೃದ್ದಿಗೆ ನಿಗಮ ಮಂಡಳಿ ಸ್ಥಾಪನೆಯ ಅಗತ್ಯವಿದೆ.
ಪ್ರಸಕ್ತ ಬಜೆಟಲ್ಲಿ ನಿಗಮ ಮಂಡಳಿ ಘೋಷಣೆ ಮಾಡಿ, 1000 ಕೋಟಿ ರೂ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದ್ದಾರೆ.