ರಾಯಚೂರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳಾಗಿದ್ದು, ಆದರೆ ನೀಡಿದ ಭರವಸೆಗಳೆಲ್ಲ ಈಡೇರಿವೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.ಜಾರಿಯಾದ ಯಾವ ಭರವಸೆಯ ಯೋಜನೆಗಳು ಜನರಿಗೆ ತಲುಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ಮಾತಿನಂತೆ ಗ್ಯಾರಂಟಿ ಜಾರಿ ಮಾಡಿದ್ದೇವೆ ಎಂದು ಬಿಟ್ಟಿ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ, ಆದರೆ ಯಾವುದೇ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಿಲ್ಲ, ಕೇವಲ ಜಾಹಿರಾತು ಕೊಟ್ಟು ಪ್ರಚಾರ ಮಾಡಿ ಜನರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಉಚಿತ ಗ್ಯಾರಂಟಿ ಎಂದು ಹೇಳಿ, ಉಚಿತ ಬಸ್ ನೀಡಿ, ಶಾಲೆಗೆ ಹೋಗಲು ವಿದ್ಯಾರ್ಥಿಗಳಿಗೆ ಬಸ್ಸಿಲ್ಲ, ಯುವ ನಿಧಿ ಗ್ಯಾರಂಟಿ ಕೇವಲ 65 ಸಾವಿರ ನೊಂದಾಣಿ ಯಾಗಿದೆ, ಗ್ಯಾರಂಟಿ ಯೋಜನೆ ಹೆಸರಿನಲ್ಲಿ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.
ರೈತರಿಗೆ ಬರ ಪರಿಹಾರ ನೀಡಲಿಲ್ಲವೆಂದು ಕೇಂದ್ರದತ್ತ ತೊರಿಸುತ್ತಿದ್ದಾರೆ, ಹಿಂದೆ ಬಿ.ಎಸ್.ಯಡಿಯೂರಪ್ಪ ಕೆಂದ್ರದ ಅನುದಾನಕ್ಕೆ ಕಾಯದೆ ಬರಪರಿಹಾರ ಕೊಟ್ಟಿದ್ದಾರೆ, ನ
ಮೊದಲು ನೀಡಬೇಕಾದ ನೀವು ಪರಿಹಾರ ಕೊಡಿ, ತಮ್ಮ ಹೊಣೆಗಾರಿಕೆಯಿಂದ ನುಣಿಸಿಕೊಳ್ಳುತ್ತಿದೆ ಎಂದರು.