ರಾಯಚೂರು.ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ ಅವರು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ವಾಟ್ಸಪ್ ಮೂಲಕ ನಿರಂತ ರವಾಗಿ ಸಂದೇಶ ರವಾನಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಆಯಾ ಇಲಾಖೆಯ ಸಿಬ್ಬಂದಿಯು ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾಗಲು ವ್ಯವಸ್ಥೆ ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ತಹಸೀಲ್ದಾರ ಕಚೇರಿಗಳು ಸೇರಿದಂತೆ ಇನ್ನು ಕೆಲವು ಕಚೇರಿಗಳು ರಜಾ ದಿನವಾದ ರವಿವಾ ರವು ತೆರೆದಿದ್ದವು. ಅಪರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ರಾಯಚೂರು ಜಿಲ್ಲಾಮಟ್ಟದ ಮತ್ತು ರಾಯಚೂರು ತಾಲೂಕು ಮಟ್ಟದ ಅಧಿಕಾರಿಗಳು ಅಥವಾ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಸಿಬ್ಬಂದಿ ನಮೂನೆ 18ನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಚುನಾವಣೆ ಶಾಖೆಗೆ ಮತ್ತು ರಾಯಚೂರು ತಾಲೂಕು ತಹಸೀಲ್ದಾರ ಕಚೇರಿಗೆ ಭಾನುವಾರವು ಸಹ ಸಲ್ಲಿಸಿದರು.
ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅನುಮತಿಯೊಂದಿಗೆ ಮತದಾರರ ನೋಂದಣಿ ಅರ್ಜಿಯನ್ನು ಪೊಲೀಸ್ ಅಧಿಕಾರಿಗಳು ಹಾಗೂ ಅದೀನ ಸಿಬ್ಬಂದಿ ಹಾಗೂ ಇತರೆ ವಿವಿಧ ಸಹಾಯಕ ಸಿಬ್ಬಂದಿಗೆ ಖುದ್ದು ನೀಡಿ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ನೋಂದಣಿ ಅರ್ಜಿಯ ಭರ್ತಿ ಮಾಡುವುದರ ಬಗ್ಗೆ ಸಿಬ್ಬಂದಿಗೆ ತಿಳಿ ಹೇಳಿದರು.
ಇದೆ ವೇಳೆ ಅಪರ ಜಿಲ್ಲಾಧಿಕಾರಿಗಳು ಮಾನವಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪ್ರತಿ ಹೋಬಳಿಯ ಉಪ ತಹಶೀಲ್ದಾರ್, ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಅವರಿಂದ ಬಂದಿದ್ದ ನಮೂನೆ-18 ಅರ್ಜಿಗಳನ್ನು ಅಧಿಕಾರಿ ಸಿಬ್ಬಂದಿಯಿಂದ ಪರಿಶೀಲಿಸಿದರು.
ಇದೆ ವೇಳೆ ಅಪರ ಜಿಲ್ಲಾಧಿಕಾರಿಗಳು ವಿವಿಧೆಡೆ ಸಂಚರಿಸಿ ಮತದಾರರ ನೋಂದಣಿ ಅರ್ಜಿಯನ್ನು ತಹಸೀಲ್ದಾರ್ ಸಿಬ್ಬಂದಿಗೆ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಗೆ ನೀಡಿ ಭರ್ತಿ ಮಾಡುವ ವಿಧಾನ ಮತ್ತು ಇನ್ನೀತರ ಮಾಹಿತಿ ನೀಡಿದರು. ಜೊತೆಗೆ ರಾಯಚೂರು ಥರ್ಮಲ್ ಪವರ್ ಸ್ಟೇಷನ್ ಸಿಬ್ಬಂದಿಗೆ ಸಹ ಅರ್ಜಿ ನಮೂನೆ ನೀಡಿ ಭರ್ತಿ ಮಾಡಿ ಸಲ್ಲಿಸಲು ಸೂಚನೆ ನೀಡಿದರು.
ಈ ನೋಂದಣಿ ಪ್ರಕ್ರಿಯೆಯಲ್ಲಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕ್ರಿಯ ಭಾಗಿಯಾಗಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದರಿಂದ ಅದರಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿದ್ದರಿಂದ ಭಾನುವಾರವು ಸಹ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಚುನಾವಣೆ ಶಾಖೆಗೆ ಹಾಗೂ ತಹಶೀಲ್ದಾರ್ ಕಾರ್ಯಾಲಯ ರಾಯಚೂರ್ ಅವರಿಗೆ ಭರ್ತಿ ಮಾಡಿದ ನಮೂನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಕೆಯಾದವು.
Megha News > Local News > ಪದವೀಧರ ಕ್ಷೇತ್ರದ ಚುನಾವಣಾ ಮತದಾರರ ಹೆಸರು ನೋಂದಣಿ ಪ್ರಕ್ರಿಯೆ ಬಿರುಸು
ಪದವೀಧರ ಕ್ಷೇತ್ರದ ಚುನಾವಣಾ ಮತದಾರರ ಹೆಸರು ನೋಂದಣಿ ಪ್ರಕ್ರಿಯೆ ಬಿರುಸು
Tayappa - Raichur05/11/2023
posted on
Leave a reply