ರಾಯಚೂರು. ಪಾದಚಾರಿ ರಸ್ತೆಯಲ್ಲಿ ವಾಹನಗಳ ನಿಲುಗಡೆಯಿಂದಾಗಿ ಸಾರ್ವಜನಿ ಕರು ತಿರುಗಾಡಲು ತೊಂದರೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪಾದಚಾರಿ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳಿಗೆ ದಂಡ ಹಾಕಿ ವಾಹನ ಸವಾರಿಗೆ ಸಂಚಾರಿ ಪೋಲಿಸ್ ಠಾಣೆ ಪಿಎಸ್‌ಐ ಮತ್ತು ಸದರ್ ಬಜಾರ ಠಾಣೆಯ ಸಿಪಿಐ ಎಚ್ಚರಿಕೆ ನೀಡಿದರು.
ನಗರದ ಬಸವೇಶ್ವರ ವೃತ್ತದಿಂದ ಗಾಂಧಿ ವೃತ್ತದ ವರೆಗೆ ಎರಡು ಬದಿಯಲ್ಲಿ ಅಂಗಡಿ ಮಾಲೀಕರು ಮತ್ತು ವಾಹನ ಸವಾರರು ಪಾದಚಾರಿ ರಸ್ತೆಯಲ್ಲಿ ನಿಲುಗಡೆ ಮಾಡುತ್ತಿರುವುರಿಂದಾಗಿ ಪಾದಚಾ ರಿಗಳ ತಿರುಗಾಡಲು ತೊಂದರೆ ಅನುಭವಿ ಸುತ್ತಿದ್ದಾರೆ. ರಸ್ತೆಯಲ್ಲಿ ಒಡಾಡುವುದರಿಂದ ಅಪಘಾತಗಳು ಸಹ ಸಂಭವಿಸುತ್ತಿವೆ ಎಂದು ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.
ರಾಯಚೂರು ಹಬ್ ಮುಂಭಾಗದಲ್ಲಿ ವಾಹನ ಗಳು ರಸ್ತೆಯಲ್ಲಿ ನಿಲುಗಡೆ ಮಾಡುವ ಅಂಗಡಿ ಮಾಲೀಕರಿಗೆ ವಾಹನ ಚಾಲಕರಿಗೆ ದಂಡ ಹಾಕಿ ಎಚ್ಚರಿಕೆ ನೀಡಿದರು.
ಇನ್ನ ನಗರದ ವಿವಿಧ ಮಾರುಕಟ್ಟೆ, ಬಸ್ ನಿಲ್ದಾಣ, ನಗರಸಭೆ, ತಹಶಿಲ್ದಾರ್ ಕಚೇರಿ, ಸೇರಿದಂತೆ ವಿವಿಧ ಮುಖ್ಯ ರಸ್ತೆಯಲ್ಲಿ ಪಾದಚಾರಿ ರಸ್ತೆಯಲ್ಲಿ ವಾಹನಗಳು ನಿಲುಗಡೆಯಾಗಂತೆ ಸಂಚರಿಸಿ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಸದರ್ ಬಜಾರ್ ಸಿಪಿಐ ಉಮ್ಮೇಶ ಕಾಂಬ್ಳೆ, ಸಂಚಾರಿ ಪೋಲಿಸ್ ಠಾಣೆ ಪಿಎಸ್‌ಐ ವೆಂಕಟೇಶ ಸೇರಿ ಸಿಬ್ಬಂದಿಗಳು ಇದ್ದರು.