ರಾಯಚೂರು. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಿಂದ ಕುಡಿಯುವ ನೀರಿನ ಸಲುವಾಗಿ ನೀರನ್ನು ಹರಿಸುತ್ತಿರುವುದರಿಂದ ಮುಖ್ಯ ಕಾಲುವೆ ಮೈಲ್-47 ರಿಂದ 108 ರವರೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ನಿತೀಶ್ ಕೆ. ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಕುಡಿಯುವ ನೀರು ಪೂರೈಸುವ ಉದ್ದೇಶಕ್ಕಾಗಿ ಕೆಳ ಭಾಗದಲ್ಲಿರುವ ನೀರನ್ನು ಕಾಲುವೆ ಮುಖಾಂತರ ನೀರನ್ನು ಈಗಾಗಲೇ ಮುಖ್ಯ ಕಾಲುವೆ ಮೈಲ್-47 ರಿಂದ 108 ರವರೆಗೆ ಹರಿಸುತ್ತಿರುವುದರಿಂದ ಮುಖ್ಯ ಕಾಲುವೆ ಮೈಲ್-47 ರಿಂದ 108 `ರವರೆಗೆ ನಿಗದಿತ ಗೇಜ್ ಗಳನ್ನು ಸಮರ್ಪಕವಾಗಿ ಕಾಯ್ದಿರಿಸಿಕೊಂಡು, ಜು.31 ರಿಂದ ಆ. 14 ರವರೆಗೆ ನೀರು ಪೋಲಾ ಗುವುದನ್ನು ತಡೆಯಲು ಕುಡಿಯುವ ನೀರನ್ನು ಸಮರ್ಪಕ ಕುಡಿಯುವ ನೀರು ನಿರ್ವಹಣೆಗೆ ಅನುವಾಗುವಂತೆ ಮುಖ್ಯ ಕಾಲುವೆ ಮೈಲ್-47 ರಿಂದ 108 ರವರೆಗೆ ಕುಡಿಯುವ ನೀರನ್ನು ಹರಿಸಿ ಜಲಾಶಯವನ್ನು ತುಂಬಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬಹುದಾಗಿರುತ್ತದೆ.
ವ್ಯಾಪ್ತಿಗೆ ಬರುವ ರಾಯಚೂರು, ಸಿಂಧನೂರು, ಸಿರವಾರ ಮತ್ತು ಮಾನವಿ ತಾಲ್ಲೂಕುಗಳಿಗೆ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಿಂದ ಕುಡಿಯುವ ನೀರನ್ನು ಹರಿಸಲಾಗುತ್ತಿದೆ. ಈ ಕಾಲುವೆಗಳ ಪ್ರದೇಶಗಳಲ್ಲಿ ಕಾನೂನು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ
ಆ. 14 ಮಧ್ಯರಾತ್ರಿಯವರಗೆ ಕಾಲುವೆ ಪ್ರದೇಶದ ಸುತ್ತಮುತ್ತಲು 100 ಮೀಟರ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ರನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಲಾಗಿದೆ.