Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

State News

ಯಾವುದೇ ಸರ್ಕಾರ ಇರಲಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ, ಇದು ನಮ್ಮ ಸಂವಿಧಾನದ ಪ್ರಜಾಪ್ರಭುತ್ವದ ಮೂಲ ಆಶಯ

ಯಾವುದೇ ಸರ್ಕಾರ ಇರಲಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ, ಇದು ನಮ್ಮ ಸಂವಿಧಾನದ ಪ್ರಜಾಪ್ರಭುತ್ವದ ಮೂಲ ಆಶಯ

ರಾಯಚೂರು.ಯಾವುದೇ ಸರ್ಕಾರ ಇರಲಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು, ಇದು ನಮ್ಮ ಸಂವಿಧಾನದ ಪ್ರಜಾಪ್ರಭುತ್ವದ ಮೂಲ ಆಶಯವಾಗಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಹೇಳಿದರು.

ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಕೇಂದ್ರ ಸರ್ಕಾರ ವಿರುದ್ದ ರಾಜ್ಯ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿರುವ ವಿಚಾರಕ್ಕೆ ಸಂಭವಿಸಿದಂತೆ ಪ್ರತಿಕ್ರಿಯಿಸಿ ಯಾವುದೇ ಸರ್ಕಾರವಿರಲಿ, ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು, ಎಲ್ಲಾ ಶಾಸಕರನ್ನು ಸಮಾನತೆ ಯಿಂದ ನೋಡಿಕೊಳ್ಳುವುದು ನನ್ನ ಕೆಲಸವಾಗಿದೆ,ಸದನವನ್ನು ಸಮರ್ಪಕ ಚರ್ಚೆಗೆ ಅನುಗುಣವಾಗಿ ಒಳ್ಳೆಯ ಕಾನೂನು, ಯೋಜನೆಗಳನ್ನು ರೂಪಿಸಿ, ಉತ್ತಮ ವಾತಾವರಣ ನಿರ್ಮಾಣ ಮಾಡುವುದು ನನ್ನ ಧ್ಯೇಯ,ಅಧಿವೇಶನಕ್ಕೆ ಕೆಲ ಶಾಸಕರು ಗೈರು ಆಗೋ ವಿಚಾರರಕ್ಕೆ ಸಂಬಂಧಿಸಿದಂತೆ,
ಶಾಸಕರಾದ ಮೇಲೆ ಶಾಸಕಾಂಗ ಸಭೆಗೆ ಬರಬೇಕು,ಎಲ್ಲಾ ಶಾಸಕರು ಇದನ್ನ ಅರ್ಥ ಮಾಡಿಕೊಳ್ಳಬೇಕು,ಮತದಾರರು ಅವರನ್ನ ವಿಧಾನಸಭೆಗೆ ಕಳಿಸಿರುವ ಮೊದಲ ಆದ್ಯತೆ ಸಭೆಗೆ ಭಾಗವಹಿಸುವುದು.ಸರಿಯಾದ ಸಮಯಕ್ಕೆ ಹಾಜರಾಗಿ, ಕೊನೆಯವರೆಗೂ ಇರಬೇಕು ಅಂತೇಳಿ ಕ್ಷೇತ್ರದ ಜನರು, ‌ಕಳಿಸಿರುತ್ತಾರೆ, ಬೇರೆ ಯಾವುದೇ ಕೆಲಸಗಳು ‌ಇದ್ರೂ ಬದಿಗೆ ಇಟ್ಟಕೊಳ್ಳಬೇಕು,ಮತದಾರ ಕೊಟ್ಟ ಗೌರವಕ್ಕೆ ಭಾಗವಹಿಸುತ್ತೇನೆ ಎಂಬ ಆತ್ಮವಿಶ್ವಾಸ ಅವರಿಗೆ ಬರಬೇಕು ಎಂದು ತಿಳಿಸಿದರು.
ರಾಜಕೀಯ ಪ್ರತಿನಿಧಿ ಆಗೋದು ಎರಡನೇ ಕರ್ತವ್ಯ, ಜನರ ಕಷ್ಟಗಳನ್ನ ವಿಧಾನಸಭೆಯಲ್ಲಿ ಪ್ರತಿಪಾದಿಸಬೇಕು, ಹಿರಿಯ ನಾಯಕರ ‌ಮಾತನಾಡೋದನ್ನ ಗಮನಿಸಿ,ಚರ್ಚೆಯಲ್ಲಿ ಭಾಗವಹಿಸಬೇಕು, ಆಗ ಮಾತ್ರ ಅವರು ದೊಡ್ಡ ನಾಯಕರು ಆಗಲು ಸಾಧ್ಯ, ಎಷ್ಟೋ ಜನ ಬಂದಿದ್ದಾರೆ, ಎಷ್ಟೋ ಜನ ಹೋಗಿದ್ದಾರೆ
ಚರ್ಚೆಯಲ್ಲಿ ಭಾಗವಹಿಸೋರು,ಸಭೆಯಲ್ಲಿ ಕುಳಿತುಕೊಳ್ಳೋರು ಮಾತ್ರ ಯಶಸ್ವಿಯಾಗಿದ್ದಾರೆ ಎಂದರು.
ಅಧಿವೇಶನಕ್ಕೆ ಶಾಸಕರು ಸರಿಯಾಗಿ ಬರಲು ಶಾಸಕರಿಗೆ ಉತ್ತೇಜನ ನೀಡುತ್ತೇವೆ, ಕಳೆದ ಬಾರಿ ವಿಧಾನಸಭೆಗೆ ಒಂದು ಬಾರಿ ಬಂದೋರಿಗೆ ಒಂದು ಬಹುಮಾನ ನೀಡಲಾಗಿದೆ, ಹತ್ತು ಬಾರಿ ಬಂದೋರಿಗೆ ಹತ್ತು ಬಹುಮಾನ ನೀಡಲಾಗಿದೆ,
ಕೆಲವರಿಗೆ ಯಾಕೆ ಸರಿಯಾಗಿ ಕ್ಲಾಸ್ ಗೆ ಹಾಜರಾಗಿಲ್ಲ ಅಂತ,ಮನೆಯಲ್ಲಿ ಬೈದಿದ್ದಾರೆ,
ಕಂಟಿನ್ಯೂ ಆಗಿ ಬಂದೋರಿಗೆ ಅದೇ ಬಹುಮಾನ ಕೊಡ್ತಿವಿ, ಈ ಬಾರಿಯೂ ಬಹಮಾನ ಕೊಡ್ತಿವಿ, ನೆಕ್ಷ್ಟ್ ಟೈಮ್ ಬದಲಾವಣೆ ಮಾಡ್ತೀವಿ ಎಂದರು.
ವಿಧಾನಸಭೆಯನ್ನ ಜನರ ಹತ್ತಿರ ತೆಗೆದುಕೊಂಡು ಹೋಗಬೇಕು, ಜನರಿಂದ ನಾವು ದೂರ ಆಗಬಾರದು, ಕಟ್ಟಕಡೆಯ ಮನುಷ್ಯನಿಗೆ ವಿಧಾನಸೌಧ ನಾನು ನೋಡುವಂತದ್ದು ಅಲ್ಲ ಎನಿಸಬಾರದು,ಅವರಿಗೆ ಬರುವಂತಹ ವ್ಯವಸ್ಥೆ ನಾವು ಮಾಡ್ತೀವಿ, ನಮ್ಮಲ್ಲಿ ಯಾರೂ ಎಷ್ಟು ಗಂಟೆಗೆ ಬರ್ತಾರೆ,ಹೋಗ್ತಾರೆ ಅನ್ನೋದು ಡೇಟಾ ಎಂಟ್ರಿ, ಸಿಸಿ ಕ್ಯಾಮರಾ ಆಳವಡಿಕೆಗೆ ಸೂಚಿಸಲಾಗಿದೆ, ಒಂದು ದಿವಸ ತಳಮಟ್ಟದ ಕೂಲಿ ಕಾರ್ಮಿಕರು, ಒಂದು ದಿವಸ ಮಹಿಳೆಯರು, ಒಂದು ದಿನ ಯುವಕರು, ಪೌರ ಕಾರ್ಮಿಕರಿಗೆ ಅವಕಾಶ ಮಾಡಲಾಗುವುದು, ಸಮಾಜದ ಎಲ್ಲಾ ವರ್ಗದ ಜನರಿಗೂ ಅಧಿವೇಶನ ನೋಡಲು ಈ ಬಾರಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಬಾರಿ ವಿಶೇಷವಾಗಿ ಅಧಿವೇಶನ ನೋಡಲು ಬರುವ ವಿದ್ಯಾರ್ಥಿಗಳಿಗೆ ಇಸ್ರೋ, ಕಿದ್ವಾಯ್, ನಿಮಾನ್ಸ್, ಭೇಟಿ ನೀಡಲು ಅವಕಾಶ ‌ಕಲ್ಪಿಸುತ್ತೇವೆ ಎಂದು ತಿಳಿಸಿದರು.

Megha News