ರಾಯಚೂರು: ಸಂಜೆ ಸುರಿದ ಭಾರಿ ಪ್ರಮಾಣದಲ್ಲಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ನಗರದಲ್ಲಿ ಸಂಜೆ ಸುರಿದ ದಾಖಲೆ ಪ್ರಮಾಣದಲ್ಲಿ ಮಳೆಯಿಂದ ಕೆಲವು ಬಡಾವಣೆಗಳಿಗೆ ಮಳೆ ನೀರು ಹಾಗೂ ಚರಂಡಿ ನೀರು ಮನೆಗಳಿಗೆ ನುಗ್ಗಿ ಜಲಾವೃತವಾಗಿವೆ. ಬೇಸ್ತವಾರ ಪೇಟೆಯಲ್ಲಿನ ರಾಜ ಕಾಲುವೆ ತುಂಬಿ ಹರಿದು ರಸ್ತೆಯಲ್ಲಿ ನೀರು ಹೆಚ್ಚಾಗಿ ಹರಿದ ಪರಿಣಾಮ ಮನೆಗಳಿಗೆ ನೀರು ನುಗ್ಗಿವೆ, ಮಳೆ ನೀರು ಮನೆಯಿಂದ ತೆಗೆದು ಹಾಕಿದ್ದಾರೆ.
ನಗರದ ಸಿಯಾತಾಲಾಬ್, ಜಲಾಲನಗರ, ಕುಲಸುಂಬಿ ಕಾಲೋನಿ, ಯರಗೇರಾ ಲೇಔಟ್, ಹಾಜಿ ಕಾಲೋನಿ, ಸುಖಾಣಿ ಕಾಲೋನಿ ಕೊಳಗೇರಿಯಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ.
ಮನೆಯಲ್ಲಿದ್ದ ಪಾತ್ರೆಗಳು, ಹೊದಿಕೆಗಳೆಲ್ಲ ಕೊಳಕು ನೀರಿನಿಂದ ಹಾಳಾಗಿದ್ದು, ಅಡುಗೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದೆ ಪರದಾ ಡುವ ಸ್ಥಿತಿ ನಿರ್ಮಾಣವಾಗಿದೆ.
ರಾಜಕಾಲುವೆಯಲ್ಲಿ ಸಮರ್ಪಕವಾಗಿ ಮಳೆನೀರು ಹರಿದು ಹೋಗಲು ವ್ಯವಸ್ಥೆಯಿಲ್ಲದ ಕಾರಣ ಮಳೆನೀರು ಮನೆ ನುಗ್ಗುವ ಸಮಸ್ಯೆ ಪ್ರತಿವರ್ಷವೂ ಮರುಕಳಿಸುತ್ತಿದೆ ರಾಜಕಾಲುವೆ ತಡೆಗೋಡೆಯು ಮಳೆನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕಾರ್ಯವನ್ನು ನಗರಸಭೆಯಿಂದ ಮಾಡುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Megha News > Local News > ಸಂಜೆ ಸುರಿದ ಬಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು ಜನ ಜೀವನ ಅಸ್ತವ್ಯಸ್ತ
ಸಂಜೆ ಸುರಿದ ಬಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು ಜನ ಜೀವನ ಅಸ್ತವ್ಯಸ್ತ
Tayappa - Raichur04/10/2024
posted on
Leave a reply