Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics NewsState News

10 ವರ್ಷದ ಆಡಳಿತದಲ್ಲಿ ಎಲ್ಲಿದೆ ಅಚ್ಚೇದಿನ್, ಇದೀಗ ವಿಕಸತ್ ಭಾರತ, ಬಿಜೆಪಿ ಮುಖಂಡರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ

10 ವರ್ಷದ ಆಡಳಿತದಲ್ಲಿ ಎಲ್ಲಿದೆ ಅಚ್ಚೇದಿನ್, ಇದೀಗ ವಿಕಸತ್ ಭಾರತ, ಬಿಜೆಪಿ ಮುಖಂಡರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ

ರಾಯಚೂರು. ದೇಶದಲ್ಲಿ ಅಚ್ಚೆದಿನ ಎಂದು 10 ವರ್ಷದಲ್ಲಿ ಆಡಳಿತ ನಡೆಸಿದ್ದು, ಎಲ್ಲಿದೆ ಅಚ್ಚೆದಿನ ಎಂದು ತೋರಿಸಲಿ, ಇದೀಗ ಲೋಕಸಭೆ ಚುನಾವಣೆ ಬಂದಿದ್ದು, ಸಣ್ಣಪುಟ್ಟ ವಿಷಯಗ ಳನ್ನು ತಂದು ಜನರನ್ನು ದಾರಿ ತಪ್ಪಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಸಚಿವ ರಹೀಂಖಾನ್ ಹೇಳಿದರು.

ನಗರಸಭೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಆಡಳಿತ ನಡೆಸಿ ಬಿಜೆಪಿ ಸರ್ಕಾರದ ಅಚ್ಚೆದಿನ್ ಆಗಯಾ ಎಂದು ಹೇಳಿ, ಇದೀಗ ವಿಕಾಸತ್ ಭಾರತ ಎಂದು ಹೇಳುತ್ತಿದ್ದಾರೆ, ಅಚ್ಚೆದಿನ ಎಲ್ಲಿ ಬಂದಿದೆ, ಎಂದು ಒಬ್ಬರು ತೊರಿಸಲಿ, ಅವರಿಗೆ ಅಭಿವೃದ್ಧಿ ಬೇಕಾಗಿಲ್ಲ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮಯಕ್ಕೆ ಸಂಭವಿಸಿದಂತೆ ಮದ್ಯಾಹ್ನ ನಮಾಜ್‌ಗೆ ಅನುಕೂಲ ಮಾಡಲು ಸಮಯ ಬದಲಾವಣೆ ಮಾಡಿದೆ ಎಂದು ಬಿಜೆಪಿ ಪ್ರತಿಭಟನೆಗೆ ಮುಂದಾಗಿದ್ದು, ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ನಾವು ಯಾರಿಗೂ ಒಲೈಕೆ ಮಾಡಿಲ್ಲ, ಕಾಂಗ್ರೆಸ್ ಸರ್ಕಾರದ ಎಲ್ಲರಿಗೂ ಸಮಾನವಾಗಿ ಕಾಣಬೇಕು ಎಂದು ಹೇಳಿದೆ ನಾವು ಎಲ್ಲರಿಗೂ ಸಮಾನ ಅವಕಾಶ ನೀಡಲಾಗಿದೆ, ಇದೀಗ ಲೋಕಸಭೆ ಚುನಾವಣೆ ಬರುತ್ತಿದೆ, ಬಿಜೆಪಿಯವರಿಗೆ ಮಾತನಾಡಿಲು ವಿಷಯಗಳಿಲ್ಲ, ಸಣ್ಣಪುಟ್ಟ ವಿಷಯಗಳನ್ನು ಕುರಿತು ಮಾತನಾಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತುದ್ದಾರೆ ಎಂದರು.
ಬಿಜೆಪಿ ಅವರು ನೀಡುವ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ, ಸಣ್ಣಪುಟ್ಟ ವಿಷಯಗಳ ಕುರಿತು ಜನರ ಮನಸ್ಸನ್ನು ಬೇರೆಡೆ ತರಲು ಹೊರಟಿದ್ದಾರೆ ಎಂದರು.

Megha News