ರಾಯಚೂರು. ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಅವರು ಇಂದು ಮಧ್ಯಂತರ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದು, ಇದರಲ್ಲಿ ರೈಲ್ವೆಗೆ ಏನೆಲ್ಲ ವಿಶೇಷ ಘೋಷಣೆಗಳನ್ನು ಮಾಡಬಹುದು ಎಂದು ಭಾರತೀಯ ರೈಲ್ವೆ ಇಲಾಖೆ ಕಾಯುತ್ತಿದೆ. ಹಾಗಾದರೆ ರೈಲ್ವೆ ಬಜೆಟ್‌ನಲ್ಲಿ ಜಿಲ್ಲೆಯ ಪ್ರಮುಖ ಮುಖ್ಯ ಅಂಶಗಳೇನು ಬಹು ವರ್ಷಗಳ ರೈಲ್ವೆ ಯೋಜನೆಗಳಿಗೆ ಅನುದಾನ ಸಿಗಲಿದೆಯೇ ಎಂದು ಕಾದು ನೋಡಬೇಕಾಗಿದೆ.
ಮುನಿರಾಬಾದ್ -ಮಹೆಬೂಬ್ ನಗರ ರೈಲ್ವೆ ಯೋಜನೆ ಮಂಜೂರಾಗಿ 25 ವರ್ಷ ಕಳೆದರೂ ಕುಂಟುತ್ತಾ ಸಾಗಿದೆ,
246 ಕಿ.ಮೀ. ಉದ್ದದ ರೈಲ್ವೆ ಮಾರ್ಗ ಇಷ್ಟೊತ್ತಿಗಾಗಲೇ ಮುಗಿದು ಉಭಯ ರಾಜ್ಯಗಳ ಮಧ್ಯೆ ರೈಲುಗಳ ಸುಗಮ ಸಂಚಾರಕ್ಕೆ ಅಣಿಯಾಗಬೇಕಿತ್ತು. ಆದರೆ, ಭೂಸ್ವಾಧೀನ, ರೈಲ್ವೆ ಮಾರ್ಗ ನಿರ್ಮಾಣ ವಿಳಂಬ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ತೀವ್ರ ಹಿನ್ನಡೆ ಅನುಭವಿಸುವಂತಾಗಿದೆ.
ಗದಗ ವಾಡಿ ಮದ್ಯ ರೈಲ್ವೆ ಮಾರ್ಗ:
ಹೈದರಾಬಾದ್ ನಿಜಾಮ ಆಳ್ವಿಕೆ ವೇಳೆ 1909ರಲ್ಲಿ ಗದಗ-ವಾಡಿ ರೈಲ್ವೆ ಮಾರ್ಗದ ಯೋಜನೆ ಮೊಳಕೆ ಒಡೆಯಿತು. 1910ರಲ್ಲಿ ಸರ್ವೆ ಕಾರ್ಯ ನಡೆಸಿ ಅಂದಿನ ಬ್ರಿಟೀಷ್ ಸರಕಾರಕ್ಕೆ 1911 ರಲ್ಲಿ ವರದಿ ಸಲ್ಲಿಸಲಾಗಿತ್ತು.
1997-98ನೇ ಸಾಲಿನಲ್ಲಿ ನಡೆದ ಬಜೆಟ್ ಮಂಡನೆಯಲ್ಲಿ 900 ಕೋಟಿ ರೂ. ವೆಚ್ಚದಲ್ಲಿ 253 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಿಸಲು ಮಾಡಲು ಪ್ರಸ್ತಾವನೆ ಸಿದ್ಧಗೊಂಡಿತು, ಸರ್ಕಾರ ಯೋಜನೆ ಜಾರಿಗೊಳಿಸಿದ್ದು ಅನುದಾನ ಇಲ್ಲದೆ ಇರುವುದರಿಂದ ಕಾಮಗಾರಿ ವಿಳಂಭವಾಗಿದೆ.
ಈ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಯೋಜನೆ ಪೂರ್ಣಗೊಳಿಸಲಿದೆಯೇ ಎಂದು ಕಾದು ನೋಡಬೇಕಿದೆ.