ರಾಯಚೂರು. ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ವಿಶ್ವ ಬೈಸಿಕಲ್ ದಿನಾಚರಣೆ ಆಚರಿಸಲಾಯಿತು. ಶಾಸಕ ಡಾ. ಶಿವರಾಜ ಪಾಟೀಲ್ ಸೈಕಲ್ ತುಳಿಯುವುದರ ಮೂಲಕ ಜಾಥ ಉದ್ಘಾಟಿಸಿದರು.
ಸೈಕಲ್ ತುಳಿಯುತ್ತಾ ತಮ್ಮ ಆರೋಗ್ಯ ಕಾಪಾ ಡಿಕೊಳ್ಳುವುದಲ್ಲದೇ ಜನರಲ್ಲಿ ಆರೋಗ್ಯದ ಮಹತ್ವ ಸಾರುತ್ತಿರುವ ಸಂಘದ ಸದಸ್ಯರ ಕೆಲಸವನ್ನು ಕೊಂಡಾಡಿದರು.
ಅಲ್ಲದೇ ನಗರದ ಎಲ್ಲಾ ಜನರು ಸೈಕಲ್ ತುಳಿ ಯುತ್ತಾ ಆರೋಗ್ಯ ಕಾಪಾಡಿಕೊಳ್ಳಬೇಕು ಇಂದು ಕರೆ ನೀಡಿದರು.
ನಗರದ ಜನರು ಕಸವನ್ನು ಸರಿಯಾಗಿ ವಿಲೇ ವಾರಿ ಮಾಡಬೇಕು ಮತ್ತು ನಗರವನ್ನು ಸ್ವಚ್ಛ ವಾಗಿಡುವಲ್ಲಿ ಆಡಳಿತದೊಂದಿಗೆ ಕೈಜೋಡಿ ಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಯಚೂರು ಬೈಸಿಕಲ್ ಅಸಿಷಿಯೇಷನ್ ನೋಂದಣಿ ಮಾಡಿಸಿದ ದಾಖ ಲೆ ಅನಾವರಣಗೊಳಿಸಿದರು.
ಜಾಥಾ ಬಸವ ಆಸ್ಪತ್ರೆಯಿಂದ ಮೊದಲುಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸೈಕ್ಲಿಂಗ್ ಬಗ್ಗೆ ಜಾಗೃತಿ ಮೂಡಿಸಿದರು.
ಅಧ್ಯಕ್ಷ ಡಾ. ಬಸವರಾಜ ಪಾಟೀಲ್ ಸ್ವಾಗತಿಸಿದರು. ಕಾರ್ಯದರ್ಶಿ ಸಂದೀಪ್ ಕಲ್ಲೂರು ವಂದಿಸಿದರು. ಉಪಾದ್ಯಕ್ಷರುಗಳಾದ ಡಾ ಜಯಪ್ರಕಾಶ ಬೆಟ್ಟದೂರು, ವಿಶ್ವನಾಥ ಹಿರೇಮಠ ಅಲ್ಲದೇ, ಡಾ. ಸಕಲೇಶ ಬೆಟ್ಟದೂರು, ಡಾ. ಶರಣಗೌಡ , ನಾಗರಾಜ್ ಗದ್ದಾಳೆ, ಡಾ ರವಿ ಪಾಟೀಲ , ರವಿ ಗಣೆಕಲ್, ಪವನ ಮುದೇ ನೂರು, ವಿಜಯ್ ದೊಮಕುಂಟಿ, ಚೂಡಿ ಪ್ರವೀ ಣ, ಚನ್ನಬಸವ ಗೌಡ, ಗುರುರಾಜ ಚಿತ್ರಾಲ್, ರಾಘವೇಂದ್ರ ಚಿತ್ರಾಲ್, ಡಾ. ಪ್ರಶಾಂತ್, ವೆಂಕ ಟೇಶ್ ಗದ್ದೆ,ರಾಘವೇಂದ್ರ ಗುಪ್ತಾ, ಮತ್ತಿತರ ಸದಸ್ಯರು ಪಾಲ್ಗೊಂಡಿದ್ದರು.