ಗೂಗಲ್. ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಗೂಗಲ್ ಅಲ್ಲಮಪ್ರಭು ದೇವ ಸ್ಥಾನ ಹತ್ತಿರ ಕಾರ್ಯಕ್ರಮಕ್ಕೆ ಜಾಲನೆ ನೀಡಲಾಯಿತು.
2500 ಕಿ.ಮೀ. ಉದ್ದದ ಮಾನವ ಸರಪಳಿ ಯನ್ನು ರಾಜ್ಯಾದ 31 ಜಿಲ್ಲೆಗಳಾದ್ಯಂತ ನಿರ್ಮಿ ಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಸರಕಾರ ಮುಂದಾಗಿದೆ. ರಾಜ್ಯದ ಗಡಿ ಜಿಲ್ಲೆಗಳಾದ ಬೀದರ್ ಜಿಲ್ಲೆಯಿಂದ ರಾಜ್ಯದ ಕೊನೆಯ ಜಿಲ್ಲೆಯಾದ ಚಾಮರಾಜ ನಗರದ ವರೆಗೂ ಸಮಾಜದ ಎಲ್ಲಾ ವರ್ಗದ ಜನರೂ ಸೇರಿದಂತೆ ಸುಮಾರು 25 ಲಕ್ಷ ಜನ ಕೈ ಕೈ ಹಿಡಿದು ರಾಜ್ಯದುದ್ದಕ್ಕೂ ವಿಶ್ವದ ಬೃಹತ್ ಮಾನವ ಸರಪಳಿ ನಿರ್ಮಾಣ ಮಾಡಲಾಯಿತು.
ಸಂವಿಧಾನ ಪೀಠಿಕೆಯನ್ನು ಶ್ರೀ ಜಗದೀಶ್ ಸಂಪಗಾವಿ ಅಪರ ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ಭೋಧಿಸಿದರು ನಂತರ ವೇದಿಕೆಯ ಮೇಲಿನ ಎಲ್ಲಾ ಗಣ್ಯರು ಮುಂಭಾಗದಲ್ಲಿ ಶಾಲಾ ವಿಧ್ಯಾರ್ಥಿಗಳ ಜೊತೆಗೂಡಿ ಕೈ ಕೈ ಗಳನ್ನು ಮೇಲೆ ಎತ್ತಿ ಜೈ ಕರ್ನಾಟಕ ಜೈ ಕರ್ನಾಟಕ ಎಂದು ಘೋಷಣೆಯನ್ನು ಕೂಗಿದರು.ನಂತರ ಸಸಿಗಳಿಗೆ ನೀರನ್ನು ಹಾಕಿ ಗೂಗಲ್ ಬ್ರಿಜ್ ಮೇಲೆ ಯಾದಗಿರಿಯಿಂದ ಮಾನವ ಸರಪಳಿಯನ್ನು ಸ್ವಾಗತ ಮಾಡಿದರು.
ಈ ಸಂದರ್ಭದಲ್ಲಿ ದೇವದುರ್ಗ ಶಾಸಕಿ ಕರೇಮ್ಮ ಜಿ ನಾಯಕ, ಡಿಸಿ ನಿತೀಶ್ ಕುಮಾರ್, ಎಡಿಸಿ
ಜಗದೀಶ್ ಸಂಪಗಾವಿ, ಸಿಇಒ ಪಾಂಡ್ವೆ ರಾಹುಲ್ ತುಕರಾಮ್, ಎಸ್‌ಪಿ ಪುಟ್ಟ ಮಾದಯ್ಯ, ಆದಿ ಜಾಂಬವ್ ಕಲ್ಯಾಣಾಧಿಕಾರಿ ರಾಜೇಂದ್ರ ಜಲ್ದಾರ್, ಚಿದಾನಂದಪ್ಪ ಕುರಿ, ತಹಶಿಲ್ದಾರ್ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ
ಬಸವರಾಜ,ಕ್ಷೇತ್ರ ಶಿಕ್ಷಣಾಧಿಕಾರಿ ಸುಖದೇವ್,
ಗ್ರಾಪಂ ಅಧ್ಯಕ್ಷೆ ಸೋಮಲಿಂಗಮ್ಮ ರಂಗಣ್ಣ,
ಆಶಾ ಅಂಗನವಾಡಿ ಕಾರ್ಯಕರ್ತರು, ಶಾಲಾ ವಿದ್ಯಾರ್ಥಿಗಳು ಹಿರಿಯರು, ಹಿರಿಯರು ಯುವಕರು ಮಹಿಳೆಯರು ಅಪಾರ ಪ್ರಮಾಣದಲ್ಲಿ ಭಾಗವಹಿಸಿದರು.