Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsState News

ದುಗನೂರು ಬಳಿ ವಿದ್ಯುತ್ ಟವರ್ ಗೆ ಲಾರಿ ಢಿಕ್ಕಿ: ೯ ಹಳ್ಳಿಗಳಿಗೆ ವಿದ್ಯುತ್ ಕಡಿತ- ತಪ್ಪಿದ ಭಾರಿ ಅನಾಹುತ

ದುಗನೂರು ಬಳಿ ವಿದ್ಯುತ್ ಟವರ್ ಗೆ ಲಾರಿ ಢಿಕ್ಕಿ: ೯ ಹಳ್ಳಿಗಳಿಗೆ ವಿದ್ಯುತ್ ಕಡಿತ- ತಪ್ಪಿದ ಭಾರಿ ಅನಾಹುತ

ರಾಯಚೂರು,ನ.22-ತಾಲ್ಲೂಕಿನ ದುಗನೂರು ಕ್ರಾಸ್ 167 ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಲಾರಿಯೊಂದು ವಿದ್ಯುತ್ ಫೀಡರ್ ಟವರ್‌ಗೆ ಡಿಕ್ಕಿ ಹೊಡೆದಿದ್ದು, ಭಾರಿ ಅನಾಹುತ ತಪ್ಪಿದೆ.
ಬೆಳಗಿನ ವೇಳೆ ಚಾಲಕನ ನಿಯಂತ್ರಣ ತಪ್ಪಿ ಎನ್‌ಜೆವೈ ಎಫ್1 ಹಾಗೂ ಎಫ್4 ಐಪಿ ಫೀಡರ್‌ಗಳು ಇರುವ ಟವರ್‌ಗೆ ಲಾರಿ ಡಿಕ್ಕಿ ಹೊಡೆದಿದ್ದು, ಟವರ್ ಬಾಟಮ್‌ನಲ್ಲಿ ಮುರಿದು ಹೋಗಿದೆ.
ಇದೇ ಟವರ್‌ನಿಂದ ಸುತ್ತಮುತ್ತಲಿನ 9 ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಕೆರೆಬೂದೂರು, ಹಂಚಿನಾಳ, ದುಗನೂರು, ತುರುಕನಡೋಣಿ, ಮೂಡಲದಿನ್ನಿ, ಬಿಚ್ಚಾಲಿ, ಬಿ.ಯದ್ಲಾಪೂರು, ಚನ್ನವೀರ ನಗರ, ಬಿಚ್ಚಾಲಿ ಕ್ಯಾಂಪ್ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.
ಘಟನಾ ಸ್ಥಳಕ್ಕೆ ಜೆಸ್ಕಾಂ ಇಲಾಖೆ ಸಿಬ್ಬಂಧಿಗಳು ದೌಡಾಯಿಸಿದ್ದು, ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.

Megha News