ಜಿಲ್ಲೆಯ ಲಿಂಗಸೂಗುರು ತಾಲೂಕಿನ ಮುದುಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹುನೂರು ಗ್ರಾಮದಲ್ಲಿ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ನಾಗರಾಜ ಮಲ್ಲಪ್ಪ ಹಡಪದ ಎಂಬ ಅರೋಪಿ ಶಿಕ್ಷೆ ವಿಧಿಸಲಾಗಿದೆ.
೨೦೧೯ರಲ್ಲಿ ನಡೆದ ಪ್ರಕರಣದ ತನಿಖೆ ನಡೆಸಿದ್ದ ಅರಕ್ಷಕ ನಿರೀಕ್ಷಕ ಚೆನ್ನಯ್ಯ ಹೀರೆಮಠ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸಿಂಧನೂರಿನ ಮೂರನೇ ಜಿಲ್ಲಾ ಮತ್ತು ಸತ್ರ ಪೋಕ್ಸೋ ನ್ಯಾಯಲಯದ ನ್ಯಾಯಾಧೀಸರಾದ ಬಿ.ಬಿ.ಜಕಾತಿಯವರು ಸಾಕ್ಷಿ ಪುರಾವೆ ಪರಿಶೀಲಿಸಿ ಅರೋಪಿಗೆ ೧೦ ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ೨೦ ಸಾವಿರ ರೂ ದಂಡ ವಿಧಿಸಿದ್ದಾರೆ.ಅಲ್ಲದೇ ನೊಂದ ಬಾಲಕಿಗೆ ಸರಕಾರದ ಸಂತ್ರಸ್ಥರ ಪರಿಹಾರ ನಿಧಿಯಿಂದ ೪ ಲಕ್ಷ ೫೦ ರೂ ಪರಿಹಾರ ನೀಡುವಂತೆ ಸೂಚಿಸಿದ್ದಾರೆ. ಸರ್ಕಾರ ಪರವಾಗಿ ವಿಶೇಷ ಅಭಿಯೋಜಕ ಮಂಜುನಾಥ ವಾದ ಮಂಡಿಸಿದ್ದರು.
Megha News > State News > ಮುದುಗಲ್ ಠಾಣೆಯ ಹುನುರು ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ: ಆರೋಪಿಗೆ ೧೦ ವರ್ಷ ಜೈಲು,ದಂಡ
ಮುದುಗಲ್ ಠಾಣೆಯ ಹುನುರು ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ: ಆರೋಪಿಗೆ ೧೦ ವರ್ಷ ಜೈಲು,ದಂಡ
Tayappa - Raichur12/11/2024
posted on
Leave a reply