Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Local NewsPolitics News

ಎಪಿಎಂಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷರಾಗಿ ಬಸೀರ್ ಅಹ್ಮದ ಹಾಗೂ ನಿದೇಶಕರ ನೇಮಕ ರದ್ದು

ಎಪಿಎಂಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷರಾಗಿ ಬಸೀರ್ ಅಹ್ಮದ ಹಾಗೂ ನಿದೇಶಕರ ನೇಮಕ ರದ್ದು

ರಾಯಚೂರು, ಜು.7- ಎಪಿಎಂಸಿ ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ಗೌಡ ತಲಮಾರ ಹಾಗೂ ಉಪಾಧ್ಯಕ್ಷರನ್ನಾಗಿ ಬಸೀರ ಅಹ್ಮದ ರಘುನಾಥನಹಳ್ಳಿ ಹಾಗೂ ನಿರ್ದೇಶಕರನ್ನು ನೇಮಿಸಿ ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಪಿ.ಎನ್.ನಾಗರಾಜ ಆದೇಶಿಸಿರನ್ನು ರದ್ದುಗೊಳಿಸಲಾಗಿದೆ.
ಗ್ರಾಮೀಣ ಶಾಸಕ ದದ್ದಲ ಬಸನಗೌಡ ಇವರ ಶಿಫಾರಸ್ಸಿನ ಮೇರೆಗೆ ಸಮಿತಿ ನಿರ್ದೇಶಕರುಗಳಾಗಿ ನಾರಾಯಣ ಯರಗೇರಾ, ನಿಂಬೆಕಾಯಿ ಭೀಮರೆಡ್ಡಿ ಮಡ್ಡಿಪೇಟೆ, ಗೋವಿಂದಪ್ಪ ಜಂಬಲದಿನ್ನಿ, ರಾಜಶೇಖರ ರಂಗಾ ಕಲ್ಮಾಲ, ನರಸಮ್ಮ ನಲ್ಲಣ್ಣ ಉಡುಮಗಲ್, ತಿಮ್ಮಪ್ಪ ಚಂದ್ರಬAಡಾ, ರಾಮುಲು ಸಿಂಗನೋಡಿ, ರಂಗನಾಥರೆಡ್ಡಿ ಬುರ್ದಿಪಾಡ, ಟಿ.ಈರಣ್ಣ ಅನ್ವರ್, ಮಹಾದೇವಮ್ಮ ಅಪ್ಪನದೊಡ್ಡಿ, ಹನುಮಂತ ಗೋನ್ವಾರ, ಸತ್ಯಮ್ಮ ಆಶಾಪುರು ಇವರನ್ನು ನೇಮಿಸಿ ಆದೇಶಿಸಲಾಗಿತ್ತು. ಆದರೆ ಏಕಪಕ್ಷೀಯವಾಗಿ ನಿರ್ದೇಶಕರನ್ನು ಆಯ್ಕೆ ಮಾಡಿರುವ ದೂರಿನ ಮೇರೆಗೆ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ 14 ನಿರ್ದೇಶಕರ ಆಯ್ಕೆಯನ್ನು ಹಿಂಪಡೆದು ಮುಂದಿನ ಆದೇಶವರೆಗೆ ತಡೆ ಹಿಡಿಸಲಾಗಿದೆ ಎಂದು ಸಹಕಾರ ಇಲಾಖೆ ಅದೀನ ಕಾರ್ಯದರ್ಶಿ ಪಿ.ಎನ್.ನಾಗರಾಜ ಆದೇಶಿಸಿದ್ದಾರೆ.

Megha News