Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಅಯೋಧ್ಯೆಯ ರಾಮಮಂದಿರದ ಚಿತ್ರ ತಿರುಚಿ ಹಸಿರು ಧ್ವಜ ಅಳವಡಿಸಿ ಪ್ರಕರಣ ಯುವಕನ ಬಂಧನ

ಅಯೋಧ್ಯೆಯ ರಾಮಮಂದಿರದ ಚಿತ್ರ ತಿರುಚಿ ಹಸಿರು ಧ್ವಜ ಅಳವಡಿಸಿ ಪ್ರಕರಣ ಯುವಕನ ಬಂಧನ

ದೇವದುರ್ಗ. ಅಯೋಧ್ಯೆಯ ರಾಮಮಂದಿರದ ಚಿತ್ರ ತಿರುಚಿ ಹಸಿರು ಧ್ವಜ ಅಳವಡಿಸಿ ವಾಟ್ಸ್‌ ಆ್ಯಪ್‌ ಡಿಪಿಯಲ್ಲಿ ಹಾಕಿಕೊಂಡಿದ್ದ ಹಾಗೂ ಇನ್‌ ಸ್ಟ್ರಾಗ್ರಾಂನಲ್ಲೂ ಚಿತ್ರ ಹರಿಯ ಬಿಟ್ಟ ಮಸರಕಲ್ ಗ್ರಾಮದ ಸೈಯದ್ ಪಾಶಾ ಎಂಬಾತನನ್ನು ಗಬ್ಬೂರು ಪೊಲೀಸರು ಬಂಧಿಸಿದ್ದಾರೆ.

ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದಲ್ಲಿ ಜ. 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ದಿನವೇ ರಾಮ ಮಂದಿರದ ಚಿತ್ರವನ್ನು ತಿರುಚಿ ವಾಟ್ಸ್‌ಆ್ಯಪ್‌ ಡಿಪಿಯಲ್ಲಿ ಹಾಕಿಕೊಂಡಿದ್ದ. ಇದೇ ಇಸ್ಲಾಮಿಕ್‌ ಪವರ್‌ ಎಂದು ಬರೆದುಕೊಂಡಿದ್ದ. ಇದನ್ನು ಗಮನಿಸಿದ್ದ ಗ್ರಾಮದ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ನಂತರ ಗಬ್ಬೂರ್ಉ ಪೊಲೀಸ್‌ ಠಾಣೆಯ ಎದುರು ಪ್ರತಿಭಟಿಸಿದ್ದರು, ಬಳಿಕ ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಬಂಧಿಸಿ ವಿಚಾರಣೆ ನಡೆಸಿದ್ದಾರೆ.

 

Megha News