Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Local News

ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಅಕ್ರಮ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಭಾಗಿ ವಾಟ್ಸಾಪ್ ಚಾಟಿಂಗ್ ಈಗ ಮುಳುವಾಗಿವುದೇ ?

ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಅಕ್ರಮ, ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಭಾಗಿ ವಾಟ್ಸಾಪ್ ಚಾಟಿಂಗ್ ಈಗ ಮುಳುವಾಗಿವುದೇ ?

ರಾಯಚೂರು. ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ವ್ಯವಹಾರದ ಕುರಿತಂತೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಸಹ ಭಾಗಿಯಾಗಿರುವ ಆರೋಪ ಕೇಳಿಬಂದಿದ್ದು, ಪ್ರಕರಣದಲ್ಲಿ ೮ ನೇ ಆರೋಪಿಯಾಗಿರುವ ಪರಶುರಾಮ್‌ರೊಂದಿಗೆ ವಾಟ್ಸಾಪ್ ಚಾಟಿಂಗ್ ಈಗ ಮುಳುವಾಗಿ ಪರಿಣಮಿಸಿದೆ.

ನಿಗಮದ ಅಧೀಕ್ಷಕ ಚಂದ್ರಶೇಖರ ಡೆತ್‌ನೋಟ್‌ನಲ್ಲಿ ಸಚಿವರ ಸೂಚನೆ ಮೇರೆಗೆ ಎಂದಷ್ಟೇ ಉಲ್ಲೇಖಿಸಿದ್ದರಿಂದ ಪರಿಶಿಷ್ಟ ಪಂಗಡ ಸಚಿವ ಬಿ.ನಾಗೇಂದ್ರ ಸ್ವಯಂಪ್ರೇರಿತರಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೀಗ ನಿಗಮ ಅಧ್ಯಕ್ಷರಾಗಿದ್ದ ಬಸನಗೌಡ ದದ್ದಲ್ ನಿಗಮದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಂತರ ಒಂದು ಬಾರಿ ಮಾತ್ರ ಸಭೆ ನಡೆಸಿದ್ದು ಲೋಕಸಭಾ ಚುನಾವಣೆ ನೀತಿ ಸಂಹಿತೆಯಿAದ ನಿಗಮದ ಕಚೇರಿಗೂ ಹೋಗಿಲ್ಲ. ಸಭೆಯೂ ನಡೆಸಿಲ್ಲ. ನಿಗಮದಲ್ಲಿ ನಡೆದಿರುವ ವ್ಯವಹಾರ ಕುರಿತು ನನ್ನದೇನೂ ಪಾತ್ರöವಿಲ್ಲ ಎಂದು ಹೇಳಿಕೊಂಡು ಬಂದಿದ್ದರು. ಆದರೆ ಪರಶುರಾಮ ಎಂಬುವವರು ನ್ಯಾಯಾಲಯಕ್ಕೆ ಅರ್ಜಿ ಹಾಕಿ ಬಸನಗೌಡ ದದ್ದಲ ಇವರ ಮೊಬೈಲ್‌ನಿಂದ ನಡೆದಿರುವ ವಾಟ್ಸ್ ಅಪ್ ಚಾಟಿಂಗ್ ಸಾಕ್ಷಿಯಾಗಿ ಪರಿಗಣಿಸಲು ಕೋರಿರುವದು ಬಸನಗೌಡ ದದ್ದಲ್ ಸುತ್ತಲೂ ಆವರಿಸಿಕೊಂಡAತಾಗಿದೆ.
ನಿಗಮದಿAದ ನಡೆದಿರುವ ಹಣ ವ್ಯವಹಾರ, ಹಲವು ಖಾತೆಗಳ ನಿರ್ವಹಣೆಯ ಕುರಿತಾಗಿ ಅಧ್ಯಕ್ಷರಾಗಿರುವ ದದ್ದಲಬಸನಗೌಡ ಇವರಿಗೂ ಮಾಹಿತಿಯಿರುವದು ದೂರಿನಿಂದ ಆರೋಪ ಕೇಳಿಬಂದಿದೆ. ಪ್ರಕರಣ ಸತ್ಯಾಸತ್ಯತೆ ತನಿಖೆಯಿಂದ ಮಾತ್ರ ಖಚಿತವಾಗಬೇಕಿದೆ. ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆವಹಿಸಿದ್ದು, ಮತ್ತೊಂದು ಕಡೆ ಯೂನಿಯನ್ ಬ್ಯಾಂಕ್‌ನ ಅಧಿಕಾರಿಗಳು ಸಿಬಿಐಗೆ ದೂರು ನೀಡಿದ್ದು ಅಲ್ಲಿಯೂ ನಾಲ್ಕು ಜನ ಅಧಿಕಾರಿಗಳ ವಿರುದ್ದ ಕೇಸ್ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ನಿಗಮದ ಅಧ್ಯಕ್ಷರು ವ್ಯವಹಾರಕ್ಕೆ ಸಂಬAಧಿಸಿದAತೆ ಯಾವುದೇ ಪಾತ್ರ ಇದೆಯೋ ಇಲ್ಲವೋ ಎಂಬುದು ಸಹ ನಿಗಮ ಕಚೇರಿ ಹಾಗೂ ಇತರೆ ಸಚಿವ ಕಚೇರಿಗಳಲ್ಲಿ ನಡೆದಿರುವ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಲ್ಲಿ ನಿಗಮದ ಅಧ್ಯಕ್ಷರ ಪಾತ್ರ ಇದೆಯೋ ಇಲ್ಲವೋ ಎಂಬದು ಬಹಿರಂಗವಾಗಲಿದೆ. ಅಲ್ಲದೇ ನಿಗಮದ ಅಧ್ಯಕ್ಷರಾದ ನಂತರದಿAದಲೂ ನಡೆದಿರುವ ಆರ್ಥಿಕ ವ್ಯವಹಾರದ ಕುರಿತು ಸಹ ತನಿಖಾ ಸಂಸ್ಥೆಗಳು ಪರಿಶೀಲನೆ ನಡೆಸಲಿವೆ. ನಿಗಮ ಅಧ್ಯಕ್ಷರ ನೇಮಕಾತಿ ನಂತರ ನಡೆದಿರುವ ಸಭೆಗಳಲ್ಲಿ ತೆಗೆದುಕೊಂಡ ನಿರ್ಧಾರಗಳ ಮೇಲೂ ಬೆಳಕು ಚೆಲ್ಲುವ ಕೆಲಸ ನಡೆಯಬೇಕಿದೆ. ನಿಗಮದ ಅಧ್ಯಕ್ಷ ಸ್ಥಾನಕ್ಕೂ ಕುತ್ತು ಬರುವ ಲಕ್ಷಣಗಳು ಗೋಚರಿಸುತ್ತಿವೆ. ತನಿಖೆಯ ತೀವ್ರತೆ ಮೇಲೆ ಅವಲಂಬಿತವಾಗಿದೆ ಎಂದು ಹೇಳಲಾಗುತ್ತಿದೆ.

Megha News