ರಾಯಚೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾ ಹಗರಣದ ರೂವಾರಿಯಾಗಿದ್ದು ಅವರು ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಹೈಕೋರ್ಟ್ ಸಿದ್ದರಾಮಯ್ಯ ಅವರ ಅರ್ಜಿ ವಜಾ ಮಾಡಿದ್ದರಿಂದ ಸತ್ಯಕ್ಕೆ ನ್ಯಾಯ ಸಿಕ್ಕಂತಾಗಿದೆ. ಅವರು ತನಿಖೆ ಎದುರಿಸಿ ಜೈಲಿಗೆ ಹೋಗಲೇಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದರು.
ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಲೇಬೇಕು, ಇದಕ್ಕಾಗಿ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಎನ್ ಶಂಕ್ರಪ್ಪ ಅವರು ಮಾತನಾಡಿ ಹಿಂದೆದೂ ಇಂಥ ಬಂಡ ಮುಖ್ಯಮಂತ್ರಿ ಕಂಡಿಲ್ಲ, ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಕೂಡ ರಾಜ್ಯಪಾಲರು ಪ್ರಾಸುಕ್ಯೂಷನ್ ಗೆ ಅನುಮತಿ ಕೊಟ್ಟಾಗ ಅಧಿಕಾರದಿಂದ ಕೆಳಗೆ ಇಳಿದು ನ್ಯಾಯಾಲಯಕ್ಕೆ ಗೌರವ ಕೊಟ್ಟಿದ್ದರು . ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕೂಡ ನ್ಯಾಯಲಯಕ್ಕೆ ಗೌರವ ಕೊಟ್ಟು ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಬೇಕು ಇಲ್ಲವಾದಲ್ಲಿ ಮುಂದೆ ರಾಜ್ಯಾದ್ಯಂತ ಪಕ್ಷದ ವತಿಯಿಂದ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ರೆಡ್ಡಿ, ರವಿಂದ್ರ ಜಲ್ದಾರ್, ವೀರನಗೌಡ ಲೆಕ್ಕಿಹಾಳ, ಜಿಲ್ಲಾ ವಕ್ತಾರ ಕೆ.ಎಂ.ಪಾಟೀಲ್, ಸಂತೋಷ್ ರಾಜಗುರು, ಮಂಡಲ ಅಧ್ಯಕ್ಷರಾದ ರಾಘವೇಂದ್ರ ಉಟ್ಕುರು, ಜಂಬಣ್ಣ ನೀಲಗಲ್, ಶಂಕರ ಗೌಡ ಮಿರ್ಜಾಪುರ, ಮಲ್ಲಿಕಾರ್ಜುನ ಜೀನೂರು, ಸುಧಕಾರ್.ಜೆ, ದೇವರಾಜಗೌಡ ಸಿರವಾರ, ಹುಲ್ಲೇಶ ಸಾಹುಕಾರ, ಅಯ್ಯಪ್ಪ ಮಾಳೂರು. ಪ್ರಮುಖರಾದ ಕಡಗೋಲು ಅಂಜಿನೆಯ್ಯ, ರಾಜಕುಮಾರ, ನಗರಸಭೆ ಸದಸ್ಯರಾದ ನಾಗರಾಜ, ಈ.ಶಶಿರಾಜ್, ಯು.ನರಸರೆಡ್ಡಿ, ಎನ್. ಶ್ರೀನಿವಾಸ ರೆಡ್ಡಿ, ಪಿ.ಶ್ರೀನಿವಾಸ ರೆಡ್ಡಿ, ಯುವ ಮೋರ್ಚಾ ಅಧ್ಯಕ್ಷ ಎನ್.ವಿನಾಯಕ, ರಾಮಚಂದ್ರ ಕಡಗೋಲು, ಪಲುಗುಲು ನಾಗರಾಜ್, ವಿಜಯ ಕುಮಾರ್ ಸಜ್ಜನ್, ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ನಾಗವೇಣಿ ಸಾಹುಕಾರ ಸೇರಿದಂತೆ ಪ್ರಮುಖ ಮುಖಂಡರು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
Megha News > Local News > ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಆಗ್ರಹ
ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಆಗ್ರಹ
tayappa_editor25/09/2024
posted on
Leave a reply