ರಾಯಚೂರು. ಸರ್ಕಾರ ಜಾಗದಲ್ಲಿದ್ದ ದೇವಸ್ಥಾನವನ್ನು ಜಿಲ್ಲಾಡಳಿತ ತೆರವುಗೊಳಿ ಸಿದನ್ನು ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದ್ದು ಪೋಲಿಸರು ಬಂಧಿಸಿ ಬಿಡುಗಡೆಗೊಳಿಸಿದರು.
ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇವಸ್ಥಾನ ತೆರವುಗೊಳಿಸಿದನ್ನು ಖಂಡಿಸಿ ದೇವಸ್ಥಾನವು ಅದೇ ಸ್ಥಳದಲ್ಲಿಯೇ ನಿರ್ಮಿಸಬೇಲು, ಶಾಲೆಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಶಾಸಕ ಶಿವರಾಜ ಪಾಟೀಲ್ ಮಾತನಾಡಿ ಸಂತೋಷ ನಗರದಲ್ಲಿರುವ ಶಾಲೆಗಾಗಿ ಮೀಸಲಿಟ್ಟ ಜಾಗ ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು, ತಿಳಿಸಿದರೂ ಕೂಡ ಜಿಲ್ಲಾಡಳಿತ ತೆರವು ಮಾಡಿದ್ದು ಜಿಲ್ಲಾಡಳಿತ ಹಿಂದೆ ಯಾರು ಇದ್ದಾರೆ ಎಂದು ಬಹಿರಂಗ ಪಡಿಸಬೇಕು ಎಂದರು.
ಸರ್ಕಾರ ಸಮಾಜದ ಮೇಲೆ ದಬ್ಬಾಳಿಕೆ ಮಾಡುತ್ತಿದ್ದು, ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದು ಪುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
ಸರ್ಕಾರ ಮತ್ತು ಸರ್ಕಾರದ ಅಧಿಕಾರಿಗಳು ಎಲ್ಲರಿಗೂ ಒಂದೇ ಕಾನೂನು ಇರಬೇಕು, ಎಲ್ಲರ ಜೊತೆಯಲ್ಲಿ ನಾವಿದ್ದೇವೆ, ಅದೇ ಸ್ಥಳದಲ್ಲಿಯೇ ದೇವಸ್ಥಾನವನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಎನ್ ಶಂಕ್ರಪ್ಪ ಮಾತನಾಡಿ, ಹಿಂದೂ ದೇವತೆಗಳಿಗೆ ಅವಮಾನ ಮಾಡಿದ್ದು ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿ ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿ ಕಲಿಸಬೇಕು ಎಂದರು.
ರಾಜ್ಯದಲ್ಲಿ ಹಿಂದೂಗಳ ಮತ್ತು ರೈತರ ಜಮೀನುಗಳನ್ನು ವಕ್ಫ್ ಆಸ್ತಿಯೆಂದು ಹೇಳಿ ತೆರವಿಗೆ ಮುಂದಾಗಿದ್ದಾರೆ, ಸಂತೋಷ ನಗರದಲ್ಲಿ ದೇವಸ್ಥಾನ ತೆರವುಗೊಳಿಸಲು ಬಂದೋಬಸ್ತ್ ಮಾಡಿ ತೆರವು ಮಾಡಿದ್ದಾರೆ, ಜಿಲ್ಲೆಯಲ್ಲಿ ಸಾಕಷ್ಟು ಒತ್ತುವರಿ ಮಾಡಲಾಗಿದೆ, ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು, ಜಿಲ್ಲಾಡಳಿತ, ಕೋಟೆ ಕೊತ್ತಲಗಳು, ಒತ್ತುವರಿ ಮಾಡಲಾಗಿದೆ ಎಂದರು ದೂರಿದರು.
ಕಾನೂನು ಪ್ರಕಾರ ಕೆಲಸ ಮಾಡಿದ್ದು ಸಂತೋಷ ಆದರೆ ಎಲ್ಲವೂ ಸಹ ಅದೇ ರೀತಿ ಕಾನೂನು ಪಾಲನೆ ಮಾಡಬೇಕು, ಒಂದು ವಾರದಲ್ಲಿ ಜನರಿಗೆ ಜಾಗೃತಿ ಮೂಡಿಸುತ್ತೇವೆ, ನಗರದಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸುವ ಕೆಲಸ ಜಿಲ್ಲಾಡಳಿತ ಮಾಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ಸಂತೋಷ ನಗರದಲ್ಲಿನ ದೇವಸ್ಥಾನ ತೆರವು ಕಳ್ಳತನದಿಂದ ತೆರವು ಮಾಡಲಾಗಿದೆ, ನಗರದಲ್ಲಿ ಸಾಕಷ್ಟು ಒತ್ತುವರಿಯಾಗಿವೆ, ತೆರವು ಮಾಡ ಬೇಕು, ಕಾಟೆ ದರ್ವಾಜಾ ಕೊಟೆ ಒತ್ತುವರಿಯಾ ಗಿದೆ ತೆರವು ಮಾಡಿಲ್ಲ, ಹೋರಾಟ ಮಾಡಿದರೂ ಕ್ರಮಕ್ಕೆ ಮುಂದಾಗಿಲ್ಲ, ದೇವಸ್ಥಾನ ನಿರ್ಮಿಸಬೇಕು, ಹೋರಾ ಮುಂದುವರೆಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಶಿವ ಬಸಪ್ಪ ಮಾಲೀ ಪಾಟೀಲ್, ರಾಘವೇಂದ್ರ ಊಟ್ಕೂರು, ಆಂಜನೇಯ ಕಡಗೋಲ್, ಶಂಕರ್ ರೆಡ್ಡಿ, ರವೀಂದ್ರ ಜಲ್ದಾರ್, ನರಸರೆಡ್ಡಿ, ಶ್ರೀನಿವಾಸ ರೆಡ್ಡಿ, ನಾಗರಾಜ ಬಾಲ್ಕಿ, ಮೌನೇಶ, ಪಿ.ಯಲ್ಲಪ್ಪ, ನರಸಿಂಹಲು, ಸೇರಿದಂತೆ ಅನೇಕರು ಇದ್ದರು.