Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಲೋಕೋಪಯೋಗಿ ಇಲಾಖೆ ಕಾರ್ಯಪಾಲನ ಅಭಿಯಂತರ ಚೆನ್ನಬಸಪ್ಪ ಮೆಕಾಲೆ ವರ್ಗಾವಣೆ

ಲೋಕೋಪಯೋಗಿ ಇಲಾಖೆ ಕಾರ್ಯಪಾಲನ ಅಭಿಯಂತರ ಚೆನ್ನಬಸಪ್ಪ ಮೆಕಾಲೆ ವರ್ಗಾವಣೆ

ರಾಯಚೂರು.ಲೋಕೋಪಯೋಗಿ ಇಲಾಖೆ ಯಲ್ಲಿ ಸಾಕಷ್ಟು ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕಾರ್ಯಪಾಲನ ಅಭಿಯಂತರ ಚನ್ನಬಸಪ್ಪ ಮೆಕಾಲೆ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿ ಆದೇಶಿಸಿದೆ.

ಲೋಕೋಪಯೋಗಿ ಇಲಾಖೆಯಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಸಾಕಷ್ಟು ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಈ ಕುರಿತು
ದೂರು ನೀಡಲಾಗಿತ್ತು, ಆದರೆ ರಾಜಕೀಯ ಪ್ರಭಾವದಿಂದ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ, ಇದೀಗ ಅವರ ವಿರುದ್ಧ ಮತ್ತಷ್ಟು ಗಂಭೀರವಾಗಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹಾಗೂ ಜೊತೆಗೆ ದೇವದುರ್ಗ ತಾಲೂಕಿನಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ದಂತೆ ಜೆಡಿಸ್ ತಾಲೂಕ ಅಧ್ಯಕ್ಷ ಬುಡ್ಡನಗೌಡ ದೂರು ನೀಡಿದ್ದರು,
ದೂರಿನ ಅನ್ವಯ ಲೋಕೋಪಯೋಗಿ ಮತ್ತು ರಾಜ್ಯ ಲೆಕ್ಕ ಪರಿಶೋಧಕರ ಇಲಾಖೆ ಅಧಿಕಾರಿ ಗಳ ತಂಡ ನಡೆಸಿದ ತಪಾಸಣೆಯಲ್ಲಿ ಅಕ್ರಮ ಬಯಲಾದ ಹಿನ್ನೆಲೆಯಲ್ಲಿ ಚನ್ನಬಸಪ್ಪ ಮೆಕಾಲೆ ಅವರನ್ನು ಕೊನೆಗೂ ಸರ್ಕಾರ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಘ ವೇಂದ್ರ ಅವರಿಗೆ ಪ್ರಭಾರಿಯಾಗಿ ನೇಮಿಸಲಾ ಗಿದೆ.

Megha News