Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

State News

ಶ್ರೀರಂಗಂ-ಅಹೋಬಲ ಕ್ಷೇತ್ರದಿಂದ ಶೇಷ ವಸ್ತ್ರ ಗುರುರಾಯರಿಗೆ ಸಮರ್ಪಣೆ

ಶ್ರೀರಂಗಂ-ಅಹೋಬಲ ಕ್ಷೇತ್ರದಿಂದ ಶೇಷ ವಸ್ತ್ರ ಗುರುರಾಯರಿಗೆ ಸಮರ್ಪಣೆ

ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಪೂರ್ವಾ ರಾಧನೆ ಅಂಗವಾಗಿ ತಮಿಳುನಾಡಿನ ಶ್ರೀ ಕ್ಷೇತ್ರ ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನ ಹಾಗೂ ಆಂದ್ರ ಪ್ರದೇಶದ ಅಹೋಬಲ ನರಸಿಂಹಸ್ವಾಮಿ ದೇವಸ್ಥಾನದಿಂದ ಮಂತ್ರಾಲಯಕ್ಕೆ ಆಗಮಿಸಿ ಶೇಷ ವಸ್ತ್ರವನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಅಧಿಕಾರಿಗಳು, ಸಿಬ್ಬಂದಿಗಳು ಸ್ವಾಗತಿಸಿದರು.

ಶ್ರೀ ಮಠದ ಆವರಣದಿಂದ ಸಕಲ ವಾಧ್ಯಗಳ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ರು ಶೇಷ ವಸ್ತ್ರವನ್ನು ಸ್ವೀಕರಿಸಿ ರಾಯರಿಗೆ ಸಮರ್ಪಿಸಿದರು.
ಶ್ರೀಗಳು ಮಾತನಾಡಿ, ಶ್ರೀರಂಗಂ-ಅಹೋಬಲ ಕ್ಷೇತ್ರದಿಂದ ಶೇಷ ವಸ್ತ್ರ ಗುರುರಾಯರಿಗೆ ಸಮರ್ಪಣೆಯಾಗಿದ್ದು, ಎಲ್ಲ ಪುಣ್ಯಕ್ಷೇತ್ರ ಫಲ ಮಂತ್ರಾಲಯಕ್ಕೆ ಬಂದಿದೆ. ಐತಿಹಾಸಿಕ ದೈವಿಕ ಕ್ಷೆತ್ರಗಳಿಂದ ಬಂದಿರುವ ಶೇಷವಸ್ತ್ರದ ಮೂಲಕ ರಾಯರಿಗೆ ಅನುಗ್ರಹಿಸಿದ್ದಾರೆ.
ಅಹೋಬಲ ಕ್ಷೇತ್ರದ ನರಸಿಂಹಸ್ವಾಮಿ ಹಾಗೂ ಶ್ರೀರಂಗಂ ಕ್ಷೇತ್ರದಲ್ಲಿ ಶ್ರೀ ಮಠ ಅನನ್ಯ ಸಂಬಂಧ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಅಹೋಬಲ ನರಸಿಂಹಸ್ವಾ ಮಿ ದೇವಸ್ಥಾನದ ಆಡಳಿತ ಅಧಿಕಾರಿ ಸಂಪತ್, ಅರ್ಚಕ ರಮೇಶ್ ಆರ್ಚಾಯ, ಶ್ರೀ ರಂಗಂ ಕ್ಷೇತ್ರದ ಗೋಪಾಲನ್, ವಿದ್ವಾನ ಸುಧೀಂದ್ರ ಅಚಾರ್ಯ, ಧರಶ್ರೀ ಆಚಾರ್ಯ, ಶ್ರೀ ಮಠದ ಆಡಳಿತಾಧಿಕಾರಿ ಮಾಧವಶೆಟ್ಟಿ, ವ್ಯವಸ್ಥಾಪಕ ಎಸ್.ಕೆ ಶ್ರಿನಿವಾಸರಾವ್, ಗುರುಸಾರಭೌಮ ವಿದ್ಯಾಪೀಠದ ಪ್ರಚಾರ್ಯರಾದ ರಮಣರಾವ, ಶ್ರೀ ಮಠದ ಮಾಧ್ಯಮ ಉಸ್ತುವಾರಿ ಶೀ ನಿಧಿ ಸೇರಿದಂತೆ ಗುರುಸಾರಭೌಮ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Megha News