Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಜಿಲ್ಲಾ ಏಕಗವಾಕ್ಷಿ ಸಮಿತಿ ಸಭೆ; ೬೮.೩೦ ಕೋಟಿ ಬಂಡವಾಳ ಹೂಡಿಕೆಗೆ ಅನುಮೋದನೆ

ಜಿಲ್ಲಾ ಏಕಗವಾಕ್ಷಿ ಸಮಿತಿ ಸಭೆ; ೬೮.೩೦ ಕೋಟಿ ಬಂಡವಾಳ ಹೂಡಿಕೆಗೆ ಅನುಮೋದನೆ

ರಾಯಚೂರು ಜ.9 – ಜಿಲ್ಲಾಮಟ್ಟದ ಏಕಗವಾಂಕ್ಷಿ ಸಮಿತಿ ಸಭೆಯು ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಎಲಾಯಿತು.
100 ಲಕ್ಷ ರೂ ವೆಚ್ಚದಲ್ಲಿ ಕ್ಯಾಟಲ್ ಫೀಡ್ ಹೆಚ್ಚುವರಿಯಾಗಿ ಕ್ಯಾಟಲ್ ಫೀಡ್ ಹಾಗೂ ಆಯಿಲ್ ಮಿಲ್ಲಿಂಗ್ ಚಟುವಟಿಕೆ, 55 ಲಕ್ಷ ರೂ ವೆಚ್ಚದಲ್ಲಿ ವೇರ್‌ಹೌಸ್ ಹೆಚ್ಚುವರಿಯಾಗಿ ಫ್ಲೆಯಾಸ್ ಬ್ರಿಕ್ಸ್ ತಯಾರಿಕೆ ಚಟುವಟಿಕೆ, 540 ಲಕ್ಷ ರೂ. ವೆಚ್ಚದಲ್ಲಿ ಕಾಟನ್ ಜಿನ್ನಿಂಗ್ ಅಂಡ್ ಸೀಡ್ಸ್ ಪ್ರೊಸಸ್ಸಿಂಗ್ ಚಟುವಟಿಕೆ, 1446 ಲಕ್ಷ ರೂ ವೆಚ್ಚದಲ್ಲಿ ರೈಸ್ ಮಿಲ್ಲಿಂಗ್ ಚಟುವಟಿಕೆ, 1481 ಲಕ್ಷ ರೂ. ವೆಚ್ಚದಲ್ಲಿ ಆಯಿಲ್ ರಿಫೈನರಿ ಚಟುವಟಿಕೆ, 1050 ಲಕ್ಷ ರೂ ವೆಚ್ಚದಲ್ಲಿ ರೈಸ್ ಮಿಲ್ಲಿಂಗ್ ಚಟುವಟಿಕೆ, 303 ಲಕ್ಷ ರೂ ವೆಚ್ಚದಲ್ಲಿ ವೇಸ್ಟ್ ಆಯಿಲ್ ರಿಸೈಕ್ಲಿಂಗ್ ಚಟುವಟಿಕೆ, 400 ಲಕ್ಷ ರೂ ವೆಚ್ಚದಲ್ಲಿ ಗ್ರೌನ್ ನೆಟ್ ಡಿಕಾರ್ಟಿಕೇಟಿಂಗ್ ಚಟುವಟಿಕೆ, 1455 ಲಕ್ಷ ರೂ ವೆಚ್ಚದಲ್ಲಿ ರೈಸ್ ಮಿಲ್ಲಿಂಗ್ ಚಟುವಟಿಕೆ ಸೇರಿದಂತೆ ಹೊಸ ಯೋಜನೆಯ ಮಂಜೂರಾತಿಯ ಬಗ್ಗೆ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಆಗಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಸಭೆಗೆ ವಿವರಿಸಿದರು. ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಒಟ್ಟು 68.30 ಕೋಟಿ ರೂ.ಗಳ ಬಂಡವಾಳ ಹೂಡಿಕೆಯ ಹೊಸ ಯೋಜನೆಗಳ ಮಂಜೂರಾತಿಗೆ ಸಭೆಯಲ್ಲಿ ಅನುಮೋದಿಸಲಾಯಿತು.
ಸಭೆಯಲ್ಲಿ ಜಿಲ್ಲೆಯಲ್ಲಿ ಹೊಸ ಕೈಗಾರಿಕಾ ಪ್ರದೇಶಕ್ಕಾಗಿ ಗುರುತಿಸಿರುವ ಜಮೀನು ಸ್ವಾಧೀನಕ್ಕಾಗಿ ಶೀಫಾರಸ್ಸು ಮಾಡುವ ಬಗ್ಗೆ, ಕೆಐಎಡಿಬಿಯಿಂದ ನಿರ್ಮಿಸಲಾದ ವಸತಿ ಗೃಹ ಮತ್ತು ನಿವೇಶನಗಳ ಹಂಚಿಕೆ, ದೇವದುರ್ಗ ವಿಶ್ವ ಮಳಿಗೆಗಳ ಹಂಚಿಕೆ, ರಾಯಚೂರು ಇಂಡಸ್ಟ್ರಿಯಲ್ ಏರಿಯಾ ಮತ್ತು ಗ್ರೋಥ್ ಸೆಂಟರನಲ್ಲಿರುವ ಘಟಕಗಳಿಗೆ ನೀರು ಸರಬರಾಜು ಮಾಡುವ ಬಗ್ಗೆ, ಕೆಎಸ್‌ಎಸ್‌ಐಡಿಸಿ ನಿವೇಶನಗಳ ಹಂಚಿಕೆ, ಮೆಗಾ ಪಾರ್ಕ್ ಸ್ಥಾಪನೆ, ರೈಸ್ ಕ್ಲಸ್ಟರ್ ಸ್ಥಾಪನೆಯ ಸಲುವಾಗಿ ಸುಮಾರು 10 ಎಕರೆ ಜಮೀನು ಒದಗಿಸುವ ಕುರಿತು, ಮೇ:ವಿಕಾಸ್ ಇಂಡಸ್ಟ್ರಿಸ್
ಕೈಗಾರಿಕಾ ಪ್ರದೇಶ ಮಾನವಿ ಇವರಿಗೆ ರೆಡಿಪ್ಲಾಸ್ಟ್ ತಯಾರಿಕೆಯ ಸಲುವಾಗಿ ಸರ್ಕಾರದ ನಿಯಮಗಳ ಪ್ರಕಾರ ಮರಳು ಹಂಚಿಕೆಯ ಕುರಿತು, ಯೋಜನಾ ಮಂಜೂರಾತಿ ಮತ್ತು ಚಟುವಟಿಕೆಯ ಬದಲಾವಣೆಯ ಬಗ್ಗೆ, ರಾಯಚೂರು ಕಾಟನ್ ಮಿಲ್ರ‍್ಸ ಅಸೋಸಿಯನ್ ರಾಯಚೂರು ಅವರ ಪತ್ರ, ಮೇ:ರಾಜೇಂದ್ರ ಇಂಡಸ್ಟ್ರಿಸ್ ಪ್ಲಾಟ್ ನಂ.6 ಯರಮರಸ್ ಇಂಡಸ್ಟಿçಯಲ್ ಏರಿಯಾ ರಾಯಚೂರು ಅವರ ಪತ್ರ, ಕೆಐಎಡಿಬಿಯಲ್ಲಿ ಖಾಲಿ ಇರುವ ನಿವೇಶನದ ಹಂಚಿಕೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ದೇವದುರ್ಗ ಕೈಗಾರಿಕಾ ಪ್ರದೇಶದ ಬಗ್ಗೆ ಜಮೀನಿನ ಚಕ್‌ಬಂದಿ ಹಾಗೂ ಹಂಚಿಕೆಗೆ ಲಭ್ಯವಾಗುವ ಜಮೀನು ಮತ್ತು ರಾಯಚೂರು ಗ್ರೋಥ್ ಸೆಂಟರನಲ್ಲಿರುವ ಜಮೀನು ಒತ್ತುವರಿಯ ಬಗ್ಗೆ ಸಹ ಸಭೆಯಲ್ಲಿ ಚರ್ಚಿಸಲಾಯಿತು. ಹಂತಹಂತವಾಗಿ ಸರ್ವೆ ಕಾರ್ಯಕೈಗೊಂಡು ಯಾವ ಕಡೆಗಳಲ್ಲಿ ಜಮೀನು ಒತ್ತುವರಿಯಾಗಿದೆ ಎಂಬುದನ್ನು ಸರಿಯಾಗಿ ಗುರುತಿಸಬೇಕು. ಕೆಐಎಡಿಬಿಯಿಂದ ನಿರ್ಮಿಸಲಾದ ನಿವೇಶನಗಳ ಹಂಚಿಕೆ ಪ್ರಕ್ರಿಯೆಗಾಗಿ ಸ್ಕ್ರಿನಿಂಗ್ ಕಮೀಟಿ ರಚಿಸಿ ಅಧಿಸೂಚನೆ ಹೊರಡಿಸಿ ಕೆಐಎಡಿಬಿಯಿಂದ ನಿರ್ಮಿಸಲಾದ ನಿವೇಶನಗಳ ಹಂಚಿಕೆ ಪ್ರಕ್ರಿಯೆಯನ್ನು ತುರ್ತಾಗಿ ನಡೆಸಲು ಜಿಲ್ಲಾಧಿಕಾರಿಗಳು ಇದೆ ವೇಳೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ರಾಯಚೂರು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷರು, ರಾಯಚೂರು ಜಿಲ್ಲಾ ಕಾಟನ್ ಜಿನ್ನರ್ಸ್ ಅಸೋಸಿಯೇಶನ್ ಅಧ್ಯಕ್ಷರು, ರೈಸ್ ಮಿಲ್ಲರ್ಸ ಓನರ್ಸ್ ಅಸೋಶಿಯೇಶನ್ ಅಧ್ಯಕ್ಷರು, ಕೆಐಎಡಿಬಿಯ ಬಳ್ಳಾರಿ ಮತ್ತು ರಾಯಚೂರು ಕಾರ್ಯನಿರ್ವಾಹಕ ಅಭಿಯಂತರರು, ಕೆಎಸ್‌ಎಸ್‌ಐಡಿಸಿಯ ಸಹಾಯಕ ಪ್ರಧಾನ ವ್ಯವಸ್ಥಾಪಕರು, ರಾಯಚೂರು ಜಿಲ್ಲಾ ಕೆಎಸ್‌ಪಿಸಿಬಿಯ ಪರಿಸರ ಅಭಿಯಂತರರು, ರಾಯಚೂರು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು ಸೇರಿದಂತೆ ಅನೇಕ ಇಲಾಖೆ ಅಧಿಕಾರಿಗಲಿದ್ದರು.

Megha News