ರಾಯಚೂರು,ನ.೯-ಶೀಘ್ರದಲ್ಲಿ ಝೀಬ್ರಾ ಚಿತ್ರ ಕನ್ನಡ ಸೇರಿ ಮೂರುಭಾಷೆಗಳಲ್ಲಿ ತೆರೆ ಕಾಣಲಿದೆ ಎಂದು ಖ್ಯಾತ ಬಹುಭಾಷಾ ನಟ ಡಾಲಿ ಧನಂಜಯ ಹೇಳಿದರು
ನಗರದಲ್ಲಿ ಪೈ ಇಂಟರನ್ಯಾಷನಲ್ ಶೋ ರೂಂ ಉದ್ಘಾಟನೆಗೆ ಆಗಮಿಸಿದಾಗ ಭೇಟಿಯಾದ ಮಾಧ್ಯಮ ಗಳೊಂದಿಗೆ ಮಾತನಾಡಿದರು. ಇದೇ ತಿಂಗಳು ೨೨ ರಂದಯ ಝೀಬ್ರಾ ಚಿತ್ರ ತೆರೆ ಕಾಣಲಿದೆ.ಬ್ಯಾಂಕಿಂಗ್ ವಂಚನೆ ಕುರಿತಾದ ಕಥಾ ವಸ್ತು ಹೊಂದಿರುವ ಚಿತ್ರ ಬಿಡುಗಡೆಯಾಗಲಿದೆ. ಅಲ್ಲದೇ ಪುಷ್ಪಾ-೨ ಚಿತ್ರವೂ ಬಿಡುಗಡೆ ಯಾಗುತ್ತದೆ. ಜಿಂಕ್, ಉತ್ತರಕಾಂಡ ಸೇರಿ ಮೂರು ಚಿತ್ರಗಳು ಚಿತ್ರೀಕರಣ ನಡೆಯುತ್ತಿದೆ ಎಂದರು.ಎಲ್ಲರ ನಿರೀಕ್ಷೆಯಂತೆ ಶೀಘ್ರದಲ್ಲಿ ಮದುವೆಯಾಗುವದಾಗಿ ಹೇಳಿದರು. ಕಲ್ಯಾಣ ಕರ್ನಾಟಕ ಭಾಗದ ಜನರ ಪ್ರೀತಿಯೆ ವಿಶೇಷ. ರಫ್ ಅಂಡ್ ಟಫ್ ಇದ್ದರೂ ವಿಶೇಷ ವಾಗಿದೆ. ಈ ಭಾಗಕ್ಕೆ ಮತ್ತೆಮತ್ತೆ ಬರುವದಾಗಿ ಹೇಳಿದರು.