Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ: ನಾಲ್ಕು ವಾಹನ ಭಸ್ಮ – ನಿವಾಸಿಗಳಲ್ಲಿ ಆತಂಕ

ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ: ನಾಲ್ಕು ವಾಹನ ಭಸ್ಮ – ನಿವಾಸಿಗಳಲ್ಲಿ ಆತಂಕ

ರಾಯಚೂರು,ಜ.೩೧- ನಗರದ ಆಶಾಪುರ ರಸ್ತೆಯ ಗಂಗಾನಗರ ಬಡಾವಣೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಎಲೆಕ್ಟ್ರಿಕಲ್ ಬೈಕ್ ಗೆ ಬೆಂಕಿ ನಾಲ್ಕು ವಾಹನಗಳು ಸುಟ್ಟುಭಸ್ಮವಾದ ಘಟನೆ ಬೆಳಗಿನ ಜಾವ ನಡೆದಿದೆ.

ಗೋವಿಂದ ಎಂಬುವರ ಮನೆ ಬಳಿ ವಾಹನ ಚಾರ್ಜಿಂಗ್ ಇಟ್ಟಿದ್ದಾಗ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ವಿಸ್ತರಿಸಿಕೊಂಡ ಬಡಾವಣೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.ಮನೆಯ ಮೇಲಮಹಡಿಯಲ್ಲಿದ್ದರು ಕೆಳಗೆ ಬಾರದಂತಾಗಿದೆ ಚೀರಾಟ ಮಾಡುವಂತಾಯಿತು. ನೂರಾರು ಸಂಖ್ಯೆ ಜನರು ಜಮಾಗೊಂಡಿದ್ದರು.ಪಶ್ಚಿಮಠಾಣೆ ಪೇದೆ ಸ್ಥಳಕ್ಕೆ ಧಾವಿಸಿ ಜನರು ನಿಯಂತ್ರಿಸಿದ್ದಾರೆ. ಸಕಾಲ ಅಗ್ನಿ ಶಾಮಕ ದಳ ಧಾವಿಸದೇ ಇರುವರಿಂದ ಆತಂಕ ಸೃಷ್ಟಿಯಾಗಿತ್ತು.ನಾಲ್ಕು ವಾಹನ ಸುಟ್ಟು ಲಕ್ಷಾಂತರ ನಷ್ಟವಾಗಿದೆ.

Megha News