Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Crime NewsLocal News

ಅಂಬಾನಿ ಹುಟ್ಟು ಹಬ್ಬಕ್ಕೆ ಜಿಯೊ ಕಂಪೆನಿಯಿಂದ ಉಚಿತ ರಿಚಾರ್ಜ್,  ನಿಜವಾದ ಮಾಹಿತಿಯಲ್ಲ ಕಿಡಿಗೇಡಿಗಳ ಮೋಸ

ಅಂಬಾನಿ ಹುಟ್ಟು ಹಬ್ಬಕ್ಕೆ ಜಿಯೊ ಕಂಪೆನಿಯಿಂದ ಉಚಿತ ರಿಚಾರ್ಜ್,  ನಿಜವಾದ ಮಾಹಿತಿಯಲ್ಲ ಕಿಡಿಗೇಡಿಗಳ ಮೋಸ

ರಾಯಚೂರು. ಅಂಬಾನಿ ಅವರ ಹುಟ್ಟು ಹಬ್ಬಕ್ಕೆ ಜಿಯೊ ಕಂಪೆನಿಯು ಎಲ್ಲಾ ಬಳಕೆದಾರರಿಗೆ 239 ಮೌಲ್ಯದ 28 ದಿನಗಳ ಅವಧಿಯ ರೀಚಾರ್ಜ್‌ ಅನ್ನು ಉಚಿತವಾಗಿ ನೀಡುತ್ತಿದೆ ಎಂಬ ಸಂದೇಶ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾ ಡುತ್ತಿದ್ದು, ಇದು ನಿಜವಾದ ಮಾಹಿತಿಯಲ್ಲ, ಬದಲಿಗೆ ಕಿಡಿಗೇಡಿಗಳ ಮೋಸವಾಗಿದೆ.

ಈ ಕುರಿತು ರಾಯಚೂರು ಜಿಲ್ಲಾ  ಸೈಬರ್ ಪೊಲೀಸ್‌ ಠಾಣೆ ಪ್ರಕಟಣೆ ಹೊರಡಿಸಿದ್ದು,
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪಕ್ಕದ ಚಿತ್ರದಲ್ಲಿ ತೋರಿಸಿದಂತ ಜಿಯೋ ಕಂಪೆನಿಯ ಮಾಲಕರಾದ ಅಂಬಾನಿಯವರ ಹುಟ್ಟುಹಬ್ಬದ ಭಾಗವಾಗಿ ಜಿಯೋ ಕಂಪೆನಿಯು ಎಲ್ಲಾ ಭಾರತದ ಬಳಕೆದಾರರಿಗೆ 28 ದಿನಗಳ ಉಚಿತ ರಿಚಾರ್ಜ್ ಕೊಡಗೆ ನೀಡಿದ್ದಾರೆ, ಅದನ್ನು ಪಡೆಯಲು ಮೇಸೇಜ್‌ನಲ್ಲಿ ಕಂಡ ಲಿಂಕನ್ನು ಕ್ಲಿಕ್ ಮಾಡಿ ಎಂಬ ಮಾಹಿತಿ ಹರಿದಾಡುತ್ತಿದ್ದು, ಇದು ನೈಜವಾದ ಮಾಹಿತಿಯಲ್ಲಾ ಬದಲಿಗೆ ಮೋಸಗಾರರ ಮೋಸದ ಜಾಲವಾಗಿದೆʼ ಎಂದು ಹೇಳಿದೆ.

ಲಿಂಕ್‌ ಮೇಲೆ ಕ್ಲಿಕ್ ಮಾಡಬೇಡಿ

ನೀವು myphoneoffer. com ಎಂಬ ಲಿಂಕ್‌ ಮೇಲೆ ಕ್ಲಿಕ್ ಮಾಡಿದ ನಂತರ ಅವರು ಸದರಿ ಮೆಸೇಜ್ ಅನ್ನು 10 ಜನರಿಗೆ ಪಾರ್ವಡ್ ಮಾಡ ಲು ತಿಳಿಸಿ ನಂತರ ಒಂದು ಆಪ್‌ನ್ನು ಇನ್ಸ್ಟಾಲ್ ಮಾಡಲು ತಿಳಿಸಿರುತ್ತಾರೆ. ಅದರಿಂದ ನಿಮ್ಮ ಮಾಹಿತಿ ಹಾಗೂ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ದೂರುಗಳಿಗಾಗಿ www.cybercrime.gov.in ಭೇಟಿ ನೀಡಿ ಅಥವಾ 1930 ಗೆ ಕರೆ ಮಾಡಿ‌ʼ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Megha News