ರಾಯಚೂರು: ನ.1೪ ರಾಯಚೂರು ತಾಲೂಕಿನ ವ್ಯಾಪ್ತಿಯ ಮಮದಾಪೂರ ಹಾಗೂ ಕಮಲಾಪೂರು ಗ್ರಾಮ ಪಂಚಾಯತಿಗಳಿಗೆ ರಾಯಚೂರು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ಪಾಂಡ್ವೆ ರಾಹುಲ್ ತುಕಾರಾಮ ರವರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ಬುಧುವಾರ ರಾಯಚೂರು ತಾಲೂಕಿನ ಮಮದಾಪೂರ ಗ್ರಾಮ ಪಂಚಾಯತಿಯ ಅಶಾಪೂರು ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಿಸಿರುವ ಸಾಮಾಗ್ರಿ ಆಧಾರಿತ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಅಂದಾಜು ಪಟ್ಟಿಯಂತೆ ಅನುಷ್ಠಾನ ಮಾಡಲಾಗಿದೆಯೇ ಎಂದು ಪರಿಶೀಲನೆ ಮಾಡಿದರು. ನಂತರ ಕಮಲಾಪೂರು ಗ್ರಾಮ ಪಂಚಾಯತಿಯ ಗೋನ್ವಾರ ಗ್ರಾಮದಲ್ಲಿ ಮುಕ್ತಾಯ ಹಂತದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ವೀಕ್ಷಿಸಿ ಕಾಮಗಾರಿ ಉತ್ತಮವಾಗಿ ಅನುಷ್ಟಾನಿಸಿದೆ ಈ ಕಾಮಗಾರಿಗೆ ನಾಮ ಫಲಕ ಹಾಗೂ ಮುಕ್ತಾಯಗೊಳಿಸುವ ಸಂದರ್ಭದಲ್ಲಿ ಉತ್ತಮವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್, ಸಹಾಯಕ ನಿರ್ದೇಶಕರು (ಗ್ರಾ.ಉ) ಹನುಮಂತ, ಪಿಡಿಒ, ಎಡಿಪಿಸಿ, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಹಾಗೂ ಗ್ರಾ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.