ರಾಯಚೂರು- ನಗರದ ಆಶಾಪುರ ರಸ್ತೆಯ ಲಕ್ಷ್ಮೀ ನರಸಿಂಹ ಲೇ ಔಟ್ ಮನೆಯೊಂದರ ದರೋಡೆ ನಡೆದ ಘಟನೆ ವರದಿಯಾಗಿದೆ
ಬಡಾವಣೆ ನಿವಾಸಿ ಬಸನಗೌಡ ಮಟಮಾರಿ ಎಂಬುವವರ ಮನೆಗೆ ನುಗ್ಗಿದ ಮುಸುಕುದಾರಿಗಳು ಚಿನ್ನಾಭರಣ,ನಗದು ದೋಚಿ ಪರಾರಿಯಾಗಿದ್ದಾರೆ.
ನಾಲ್ಕೈದು ಜನರು ಮುಸುಕು ಧರಿಸಿ ಮನೆಯೊಳಗೆ ನುಗ್ಗಿ ಮನೆಯವರಿಗೆ ಚಾಕು ತೋರಿಸಿ ದರೋಡೆ ಮಾಡಿದ್ದಾರೆ. ಮನೆಯಲ್ಲಿದ್ದ ೨೨ ತೊಲೆ ಬಂಗಾರ,ಎರಡು ಲಕ್ಷ ನಗದು ಹಣ ಮತ್ತು ಎರಡು ಕೆಜಿ ಬೆಳ್ಳಿ ಸಾಮಾನು ಕಳ್ಳತನವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.ಪಶ್ಚಿಮ ಠಾಣೆ ಪೊಲೀಸರು ಶ್ವಾನ ಹಾಗೂ ಬೆರಳಚ್ಚು ತಜ್ಞರೊಂದಿಗೆ ತೆರಳಿ ತನಿಖೆ ಪ್ರಾರಂಭಿಸಿದ್ದಾರೆ.ಜಿಲ್ಲಾಪೊಲೀಸ ವರಿಷ್ಟಾಧಿಕಾರಿ ಪುಟ್ಟಮಾದಯ್ಯ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಮೂರು ದಿನಗಳ ಹಿಂದೆಯಷ್ಟೆ ವ್ಯಾಪಾರಿಯೊಬ್ಬರ ಅಪಹರಣ ಘಟನೆ ನಡೆದಿತ್ತು.ಈಗ ಮನೆ ದರೋಡೆ ಘಟನೆ ನಿವಾಸಿಗಳಲ್ಲಿ ಆತಂಕಮೂಡಿಸಿದೆ.
Megha News > Crime News > ನಗರದಲ್ಲಿ ಮನೆ ದರೋಡೆ: ಚಾಕು ತೋರಿಸಿ ಚಿನ್ನಾಭರಣ ಕಳ್ಳತನ
ನಗರದಲ್ಲಿ ಮನೆ ದರೋಡೆ: ಚಾಕು ತೋರಿಸಿ ಚಿನ್ನಾಭರಣ ಕಳ್ಳತನ
tayappa_editor15/09/2024
posted on
Leave a reply