ರಾಯಚೂರು,ಜ.೨೭- ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶದ ಆಭಿವೃದ್ದಿಗೆ ನೂರು ಕೋಟಿ ಯೋಜನೆ ರೂಪಿಸಿರುವದಾಗಿ ಅರಣ್ಯ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಅವರಿಂದು ಭೇಟಿಯಾದ ಮಾಧ್ಯಮ ಗಳೊಂದಿಗೆ ಮಾತನಾಡಿ ರಾಜ್ಯದ ೧೬ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶವಿಲ್ಲ.ಗಿಡಗಳನ್ನು ನೆಟ್ಟು ಅಎಣ್ಯಪ್ರದೇಶದ ಬೆಳವಣಿಗೆಗೆ ಬೆಂಗಳೂರು ರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ನೂರು ಕೋಟಿ ರು ಗಳನ್ನು ಇದೇ ಆರ್ಥಿಕ ವರ್ಷದಲ್ಲಿ ಮಂಜೂರು ಮಾಡಲು ಉದ್ದೇಶಸಿಲಾಗಿದೆ ಎಂದರು.
ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷಹೆಚ್ಚುತ್ತಿರುವದನ್ನು ತಡೆಯಲು ನೀಲನಕ್ಷೆ ಸಿದ್ದಪಡಿಸಲಾಗಿದೆ.ಶೀಘ್ರದಲ್ಲೇ ಜಾರಿಗೊಳಿಸಲಾಗುತ್ತದೆ ಎ೦ದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲಾಗುತ್ತಿದೆರೈತರನ್ನು ಒಕ್ಕಲೆಬ್ಬಿಸದೇ ಭೂಮಿ ಉಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಶಿಸ್ತು ಮತ್ತು ಸಿದ್ದಾಂತ,ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಪಕ್ಷಕ್ಕೆ ಬರುವವರೆಗೆ ಸ್ವಾಗತವಿದೆ.ಶ್ರೀರಾಮಲು ಸಹ ಬರಬಹುದು.ಯಾರದೇ ವಿರೋಧವಿಲ್ಲ ಎಂದರು. ಮುಖ್ಯಮಂತ್ರಿಗಳ ಪತ್ನಿ ಇಡಿ ನೋಟಿಸ್ ನೀಡಿರುವದು ರಾಜಕೀಯ ಪ್ರೇರಿತ.ಈಗಾಗಲೇ ಲೋಕಾಯುಕ್ತ ತನಿಖೆ ನಡೆದು ಅರೋಪ ಮುಕ್ತವಾಗಿದ್ದಾರೆ.ಆದರೆ ಕಾಂಗ್ರೆಸ್ ಪಕ್ಷದ ಸಿಎಂಗಳ ವಿರುದ್ದ ಇಡಿ ಕೆಲಸ ಮಾಡುತ್ತಿದೆ. ಅಧಿಕಾರ ದುರುಪಯೋಗ ಬಹಳ ದಿನ ಮಾಡಲು ಆಗುವದಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಸಿಎಂ ಸ್ಥಾನಗಳು ಖಾಲಿಯಿಲ್ಲ.ಪಕ್ಷದ ಹೈಕಮಾಂಡ ನಿರ್ಧಾರವೇ ಅಂತಿಮ ಎಂದರು. ಈ ಸಂದರ್ಭದಲ್ಲಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರು ಸೇರಿ ಅನೇಕರಿದ್ದರು
Megha News > State News > ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅರಣ್ಯ ಅಭಿವೃದ್ದಿಗೆ ನೂರು ಕೋಟಿ ಯೋಜನೆ: ಸಿಎಂ ಪತ್ನಿಗೆ ಇಡಿ ನೋಟಿಸ್ ನೀಡಿರುವದು ರಾಜಕೀಯ ಪ್ರೇರಿತ- ಈಶ್ವರ ಖಂಡ್ರೆ
ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅರಣ್ಯ ಅಭಿವೃದ್ದಿಗೆ ನೂರು ಕೋಟಿ ಯೋಜನೆ: ಸಿಎಂ ಪತ್ನಿಗೆ ಇಡಿ ನೋಟಿಸ್ ನೀಡಿರುವದು ರಾಜಕೀಯ ಪ್ರೇರಿತ- ಈಶ್ವರ ಖಂಡ್ರೆ
Tayappa - Raichur27/01/2025
posted on

Leave a reply