ರಾಯಚೂರು,ಜ.೨೪- ರಾಯಚೂರು ಮಹಾನಗರ ಪಾಲಿಕೆಯ ಅಯುಕ್ತರನ್ನಾಗಿ ಪುತ್ತುರು ಉಪವಿಭಾಗ ಹಿರಿಯ ಸಹಾಯಕ ಆಯುಕ್ತ ಜೋಬಿನ್ ಮಹಾಪಾತ್ರ ಇವರನ್ಬು ವರ್ಗಾಯಿಸಿ ಸಿಬ್ಬಂದಿ ಮತ್ತು ಅಡಳಿತ ಇಲಾಖೆ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.
ರಾಜ್ಯದ ಅನೇಕ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ರಾಯಚೂರು ಮಹಾನಗರ ಪಾಲಿಕೆಗೆ ಮೊದಲ ಐಎಎಸ್ ಆಧಿಕಾರಿಯನ್ನು ನಿಯುಕ್ತಿಗೊಳಿಸಲಾಗಿದೆ.
ಓಡಿಸ್ಸಾ ಮೂಲದ ಜೋಬಿನಮಹಾಪಾತ್ರ ೨೦೨೦ರಲ್ಲಿ ಯುಪಿಎಸ್ ಪರೀಕ್ಷೆಯಲ್ಲಿ ೪೬ ನೇ ರ‌್ಯಾಂಕ್ ಪಡೆದು ತೇರ್ಗಡೆ ಯಾಗಿದ್ದಾರೆ