Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Local News

ಲೋಕಸಭೆ ಚುನಾವಣೆ, ರಾಜಕೀಯ ಪಕ್ಷಗಳೊಂದಿಗೆ ಸಭೆ: ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ- ಎಡಿಸಿ

ಲೋಕಸಭೆ ಚುನಾವಣೆ, ರಾಜಕೀಯ ಪಕ್ಷಗಳೊಂದಿಗೆ ಸಭೆ: ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ- ಎಡಿಸಿ

ರಾಯಚೂರು: ಲೋಕಸಭೆ ಚುನಾವಣೆ ಘೋಷ ಣೆಯಾಗಿದ್ದು, ನಿಯಮಾನುಸಾರ ಹಾಗೂ ಪಾರ ದರ್ಶಕವಾಗಿ ಚುನಾವಣೆ ನಡೆಸಲು ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡದಂತೆ ಚುನಾವ ಣಾ ನಿಯಮಗಳನ್ನು ಪಾಲಿಸುವಂತೆ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜೀಕಯ ಪಕ್ಷಗಳೊಂದಿಗೆ ಸಭೆಯನ್ನುದ್ದೇಶಿಸಿ ಮಾತನಾಡಿ, ಈಗಾಗಲೇ ಭಾರತ ಚುನಾವಣಾ ಆಯೋಗದಿಂದ ಲೋಕ ಸಭೆ ಚುನಾವಣೆಯ ವೇಳಾಪಟ್ಟಿಯನ್ನು ಬಿಡು ಗಡೆ ಮಾಡಲಾಗಿದ್ದು, ಏ.4ರಂದು ನಾಮಪತ್ರ ಅಧೀಸೂಚನೆ ಹೊರಡಿಸಲಾಗುವುದು, ಏ.19 ರಂದು ನಾಮ ಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಏ.20ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ.22ರಂದು ನಾಮ ಪತ್ರಗಳನ್ನು ವಾಪಸ್ಸು ಪಡೆಯಬಹುದಾಗಿದೆ. ಉಳಿದಂತೆ ಮೇ.7ರಂದು ಜಿಲ್ಲೆಯಲ್ಲಿ ಮತದಾನ ನಡೆಯಲಿದ್ದು, ಜೂ.4ರಂದು ದೇಶದಾದ್ಯಂತ ಮತ ಎಣ ಕೆ ಪ್ರಕ್ರಿಯೆ ಜರುಗಲಿದೆ ಎಂದು ತಿಳಿ ಸಿದರು.
ನಾಮ ಪತ್ರ ಸಲ್ಲಿಸಲು ಏ.4ರಂದು ಅಧಿಸೂಚನೆ ಹೊರಡಿಸಲಾಗುವುದು ನಂತರ ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 3:00ಗಂಟೆಯವರೆಗೆ ನಾಮಪತ್ರಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾ ಲಯದ ನಾಮಪತ್ರ ಸ್ವೀಕೃತಿ ಕೊಠಡಿಯಲ್ಲಿ ಸ್ವೀಕರಿಸಲಾಗುವುದು. ನಾಮಪತ್ರಗಳನ್ನು ಸಲ್ಲಿಸಲು ಅಭ್ಯರ್ತಿಯನ್ನು ಒಳಗೊಂಡು ಐದು ಜನರಿಗೆ ಮಾತ್ರ ಅವಕಾಶವಿದ್ದು, ಒಬ್ಬ ಅಭ್ಯರ್ಥಿ ನಾಲ್ಕು ನಾಮಪತ್ರಗಳನ್ನು ಸಲ್ಲಿಸಲು ಅವಕಾ ಶವಿದೆ. ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿ ಕಾರಿಗಳ ಕಾರ್ಯಾಲಯದಿಂದ 100 ಮೀಟರ್ ಅಂತರದಲ್ಲಿ 3 ವಾಹನಗಳನ್ನು ಮಾತ್ರ ಒಳಗಡೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ತಿಳಿಸಿದರು.
ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸಂಬಧ ಪಟ್ಟಂತೆ 8 ಕ್ಷೇತ್ರಗಳಿದ್ದು, ಶೋರಪುರ, ಶಾಹ ಪುರ, ಯಾದಗಿರಿ, ರಾಯಚೂರು ಗ್ರಾಮೀಣ, ರಾಯಚೂರು ನಗರ ಕ್ಷೇತ್ರ, ಮಾನವಿ, ದೇವ ದುರ್ಗ ಮತ್ತು ಲಿಂಗಸುಗೂರು ಕ್ಷೇತ್ರಗಳು ರಾಯ ಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿವೆ. ಈ ಎಲ್ಲಾ ಕ್ಷೇತ್ರಗಳ ಕ್ಷೇತ್ರಗಳಲ್ಲಿ ಒಟ್ಟು 2203 ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ ಒಟ್ಟು 19,93,755 ಮತದಾರರಿದ್ದು, 9,85,675 ಪುರುಷ ಮತದಾ ರರು, 10,05,246 ಮಹಿಳಾ ಮತದಾರರಿದ್ದು, 297 ಲಿಂಗತ್ವ ಅಲ್ಪಸಂಖ್ಯಾತರು ಹಾಗೂ 334 ಸೇವಾ ಮತದಾರರಿದ್ದಾರೆ. ಇದರಲ್ಲಿ 42,394 ಯುವ ಮತದಾರರಿದ್ದು, 22,857 ವಿಕಲಚೇತನ ಮತದಾರರಿದ್ದಾರೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಯ ಉಲ್ಲಂಘನೆಗಾಘಿ ಮತ್ತು ವಿವಿಧ ವಿಷಯಗಳಿಗಾಗಿ ದೂರುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, 1950ಗೆ ಕರೆ ಮಾಡುವ ಮೂಲಕ, ಸಿವಿಜಿಲ್ ಆ್ಯಪ್ ಅಥವಾ ಇತರೆ ಮಾಧ್ಯಮದ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದರು.
ಲೋಕಸಭಾ ಚುನಾವಣೆಗೆ 4006 ಬಿಯು, 2736 ಸಿಯು ಹಾಗೂ 2869 ವಿವಿಪ್ಯಾಟ್‌ಗಳು ಸ್ವೀಕೃತಿಯಾಗಿದ್ದು, ಈ ಎಲ್ಲಾ ಯಂತ್ರಗಳ ಪ್ರಥಮ ಹಂತದ ತಪಾಸಣೆ ಕಾರ್ಯವು ಪೂರ್ಣಗೊಂಡಿದೆ. ರಾಯಚೂರು ಜಿಲ್ಲೆಯಲ್ಲಿ 5 ಅಂತರಾಜ್ಯ , 9 ಅಂತರ ಜಿಲ್ಲೆ ಹಾಗೂ 9 ಚೆಕ್‌ಪೋಸ್ಟ್ಗಳನ್ನು ಜಿಲ್ಲೆಯ ಒಳಗೆ ಸ್ಥಾಪಿಸಲಾಗಿದ್ದು, ಇದರ ನಿರ್ವಹಣೆಯನ್ನು 24/7 ಸಿಎಪಿಎಫ್ ಹಾಗೂ ಜಾರಿ ಸಂಸ್ಥೆಗಳು ನಿಗವಹಿಸಲಾಗುವುದು. ಎಂದರು.
ಒಟ್ಟಾರೆಯಾಗಿ ಲೋಕಸಭೆ ಚುನಾಚಣೆಯನ್ನು ನ್ಯಾಸಮ್ಮತ ಹಾಗೂ ಮುಕ್ತವಾಗಿ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳ ಸಹಕಾರ ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿಗಳ ಕಾರ್ಯಾಲಯದಿಂದ ನೀಡಲಾಗುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣಾ ಶಾಖೆಯ ಶಿರಸ್ತೆದಾರ ರಿಷಿಕೇಶ, ವಿಷಯ ನಿರ್ವಾಹಕ ರಮೇಶ, ತಾಂತ್ರಿಕ ಆಧಿಕಾರಿ ಶಿವಕುಮಾರ, ರಾಜಕೀಯ ಪಕ್ಷಗಳ ಮುಖಂಡರಾದ ಕೆ.ತಿರುಮಲರೆಡ್ಡಿ, ಶಂಕರ ಕಲ್ಲೂರು, ರವಿಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Megha News