Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Local News

ವಾರ್ಡ್ ನಂ 13 ರಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ

ವಾರ್ಡ್ ನಂ 13 ರಲ್ಲಿ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ

ರಾಯಚೂರು.ನಗರದ ವಾರ್ಡ್ ನಂ 13ರ ಜಹೀರಾಬಾದ್ ಬಡಾವಣೆಯ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ಜಲ್ದಾರ್ ರವರ ಬಡಾವಣೆ ಬಿಜೆಪಿ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಕಾರ್ಯಕ್ರಮ ವನ್ನು ಬರುವ ಬೂತ್ ನಂ : 184 ಮತ್ತು 211ರ ಎಲ್ಲಾ ಬಿಜೆಪಿ ಪದಾದಿಕಾರಿಗಳು ಹಾಗೂ ಬಡಾ ವಣೆ ಜನರ ಜೊತೆಗೆ 112ನೇ ಸಂಚಿಕೆಯನ್ನು ವೀಕ್ಷಿಸಿದರು.

ಈ ಸಂಚಿಕೆ ಬಗ್ಗೆ ಮಾತನಾಡಿ, ಮೋದಿ ನಡೆಸಿದ 112 ಮನ್ ಕಿ ಬಾತ್ ಕಾರ್ಯಕ್ರಮ ಇದಾಗಿದೆ. ಇಂದಿನ ಸಂಚಿಕೆಯಲ್ಲಿ ಪರಿಸರ ಸಂರಕ್ಷಣೆ, ಬುಡಕಟ್ಟ ಜನಾಂಗದ ಹಿರಿಮೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ರವೀಂದ್ರ ಜಲ್ದಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಕಲಾಲ್ ಬಂಡಿ, ಭೀಮಣ್ಣ ಕೆಎಸ್ಆರ್ಟಿಸಿ, ನಾಗೇಶ ಜಗತ್ಕಾರಿ, ವಾಸುದೇವ್, ಭೀಮಣ್ಣ ಮಡಿವಾಳ, ಮುದುಕಪ್ಪ ಯಾದವ್, ಜಂಬಣ್ಣ, ರಾಹುಲ್ ಜಲ್ದಾರ್, ಬಿಜೆಪಿ ಎಸ್ಸಿ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಎನ್.ವೀರೇಶ್ ಭೋವಿ, ರಮೇಶ್, ನಾಗೇಶ್, ಶಾಂತಪ್ಪ, ನರಸಿಂಹಲು ನಾಯಕ್, ಸಾಗರ, ಹನುಮೇಶ್ ಮಡಿವಾಳ, ಲಿಂಗಪ್ಪ, ಎನ್. ನಾಗರಾಜ್ ಭೋವಿ, ಭೀಮೇಶ್, ಮೋಟ ಕಾಶಿಂ, ಲಕ್ಷ್ಮಣ್ ಮತ್ತಿತರು ಭಾಗವಹಿಸಿದರು.

Megha News