Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

Local News

ಮಾವಿನ ಕೆರೆ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ-ಸಚಿವ ಎನ್ಎಸ್ ಬೋಸರಾಜು

ಮಾವಿನ ಕೆರೆ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ-ಸಚಿವ ಎನ್ಎಸ್ ಬೋಸರಾಜು

ರಾಯಚೂರು. ಸಣ್ಣ ನೀರಾವರಿ ಇಲಾಖೆ ಸಂಯೋಜನೆಯೊಂದಿಗೆ 700 ವರ್ಷಗಳ ರಾಯಚೂರಿನ ಐತಿಹಾಸಿಕ ಮಾವಿನ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ಜಿಲ್ಲಾಧಿಕಾರಿ ನಿತೀಶ ಕೆ, ಸಹಾಯಕ ಆಯುಕ್ತರಾದ ಗಜಾನನ ಬಾಳೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾವಿನಕೆರೆಗೆ ತೆರಳಿ ಪರಿಶೀಲನೆ ನಡೆಸಿದರು.
ನಗರದ ನಾಗರಿಕರಿಗೆ ವಾಯುವಿಹಾರ ಜೊತೆಗೆ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದರು.
ಸ್ವಚ್ಚ ಮತ್ತು ಸುಂದರ ನಗರ ಹಾಗೂ ಅಂತರ್ಜಲ ವೃದ್ಧಿಗಾಗಿ ರಾಯಚೂರಿನ ಹೃದಯ ಭಾಗದಲ್ಲಿರುವ ಐತಿಹಾಸಿಕ ಮಾವಿನ ಕೆರೆ ಅಭಿವೃದ್ಧಿಗೊಳಿಸಲಾಗುತ್ತಿದೆ‌. ಈ ಐತಿಹಾಸಿಕ ಮಾವಿನ ಕೆರೆ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮಾವಿನ ಕೆರೆ ಸಮಗ್ರ ಅಭಿವೃದ್ಧಿಗೆ ಎಲ್ಲರು ಕೈಜೋಡಿಸಿ ಸಹಕರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ‌ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಗುರುಸಿದ್ದಯ್ಯ ಹಿರೇಮಠ, ಮುಖಂಡರಾದ ಮೊಹ್ಮದ್ ಶಾಲಂ, ಹಿರಿಯರಾದ ಜಯಣ್ಣ, ಕೆ ಶಾಂತಪ್ಪ, ಶಿವಮೂರ್ತಿ, ಶ್ರೀನಿವಾಸ ರಡ್ಡಿ, ಮಹಾನಗರ ಪಾಲಿಕೆಯ ವಲಯ ಆಯುಕ್ತರಾದ ಮೊಹ್ಮದ್ ಜಿಲಾನಿ, ನಗರಸಭೆ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ,‌ ಸದಸ್ಯರಾದ ಬಿ ರಮೇಶ, ಶ್ರೀನಿವಾಸ ರಡ್ಡಿ, ಉಪಾಧ್ಯಕ್ಷರಾದ ಸಾಹಜಿದ್ ಸಮೀರ್, ಹರಿಬಾಬು ರಾಂಪೂರು, ನರಸಿಂಹಲು ಮಾಡಿಗಿರಿ, ನೀರಾವರಿ‌ ಇಲಾಖೆಯ ಲೋಕೆಶ, ಎಡಿಎಲ್ ಆರ್, ಡಿಡಿಎಲ್ ಆರ್ ಭೀಮರಾಯ್ ಸೇರಿದಂತೆ ಅನೇಕರು ಇದ್ದರು‌‌.

Megha News