Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Local News

ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸರ್ಕಾರಗಳು ಮಾತ್ರವಲ್ಲ ಸುಪ್ರೀಂಕೋರ್ಟ್ ಸಹ ನಡೆದುಕೊಳ್ಳುತಿದೆ

ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸರ್ಕಾರಗಳು ಮಾತ್ರವಲ್ಲ ಸುಪ್ರೀಂಕೋರ್ಟ್ ಸಹ ನಡೆದುಕೊಳ್ಳುತಿದೆ

ರಾಯಚೂರು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸರ್ಕಾರಗಳು ಮಾತ್ರವಲ್ಲ ಸುಪ್ರೀಂಕೋರ್ಟ್ ಸಹ ನಡೆದುಕೊಳ್ಳುತ್ತಿ ರುವುದು ಕಳವಳಕಾರಿ ಬೆಳವಣಿಗೆ ಎಂದು ಖ್ಯಾತ ವಿಚಾರವಾದಿ ಶಿವ ಸುಂದರ್ ಅವರು ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣ ಹತ್ತಿರ ದಲಿತ ಸಂಘರ್ಷ ಸಮಿತಿ ಹಾಗೂ ಜನಶಕ್ತಿ ರಾಯಚೂರು ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಅಂಬೇಡ್ಕರ್ ಅವರ ಮಹಾ ಪರಿ ನಿರ್ವಾಣ ದಿನ ಅಂಗವಾಗಿ ಹಮ್ಮಿಕೊಂಡ ಸಂವಿಧಾನಕ್ಕಿರುವ ಅಪಾಯಗಳು ಹಾಗೂ ಆಶಯಗಳು ಮತ್ತು ಪರಿಣಾಮಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 1992 ರಲ್ಲಿ ಬಾಬ್ರಿ ಮಸೀದಿ ಕೆಡವಿದ ಪ್ರಕರಣದಲ್ಲಿ ಬಾಬ್ರಿ ಮಸೀದಿ ಕೆಳಗೆ ಯಾವ ಮಂದಿರವು ಇರಲಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಅಲ್ಲದೆ ಮಸೀದಿ ಕೆಡವಿರುವುದು ಘನ ಗೋರ ಅಪರಾಧವೆಂದು ಅಭಿಪ್ರಾಯ ಪಟ್ಟಿತು‌. ಆದರೆ ಭಾವನೆಗಳನ್ನು ಗೌರವಿಸಲು ಯಾರು ಬಾಬ್ರಿ ಮಸೀದಿ ಕೆಡುವಿದರು ಅವರಿಗೆ ರಾಮಮಂದಿರ ಕಟ್ಟಲು ಅವಕಾಶ ನೀಡಿರುವುದು ಕಳವಳಕಾರಿ ಸಂವಿಧಾನವನ್ನು ಉಳಿಸಬೇಕಾಗಿರುವ ಸುಪ್ರೀಂಕೋರ್ಟ್ ಕೈ ಚೆಲ್ಲಿಸಿದರೆ ಸಂವಿಧಾನ ಉಳಿಸಲು ಸಾಧ್ಯವೇ ಎನ್ನುವ ಅನುಮಾನ ಮೂಡಿದೆ ಎಂದರು.

ಬಿಜೆಪಿಯವರ ನಿರ್ಧಾರವನ್ನು ವಿರೋಧಿಸುವ ಒಂದೇ ಒಂದು ಪಕ್ಷ ವಿರಲಿಲ್ಲ ಸುಪ್ರೀಂ ಕೋರ್ಟ್ ಆದೇಶ ವಿರುದ್ಧವಾಗಿ ರಾಮಮಂದಿರ ನಿರ್ಮಾಣ ವಾದರೂ ಯಾವ ರಾಜಕೀಯ ಪಕ್ಷವು ವಿರೋಧವಿಲ್ಲ, ದೇಶದಲ್ಲಿ ಸಂವಿಧಾನ ಆಶಯ ಗಳು ಈಡೇರಿಸುವ ಆಶಾಭಾವನೆ ಇಲ್ಲದೆ ಹೋಗುವ ಬೆಳವಣಿಗೆಗಳು ನಡೆಯುತ್ತಿವೆ ಎಂದರು.
ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗಿ ಸಮಾನತೆ ಮೂಡಿಸಬೇಕು, ಆದರೆ ಅಂಬಾನಿಯ ಆದಾಯ ನಿಮಿಷಕ್ಕೆ 9 ಕೋಟಿಗಳಿಗೆದ್ದರೆ, ರೈತ ವರ್ಷವಜಡಿ ದುಡಿದರು ವರ್ಷಕ್ಕೆ ಲಕ್ಷ ರೂ, ಮೀರುತ್ತಿಲ್ಲ, ದುಡಿಯುವ ಜನರಿಗೆ ಕೆಲಸ ಸಿಗುತ್ತಿಲ್ಲ, ದಲಿತರು, ಕಾರ್ಮಿಕರು, ರೈತ ಮಕ್ಕಳಿಗೆ ಶಿಕ್ಷಣ ದೊರೆಯುತ್ತಿಲ್ಲ ಇಂದು, ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಗಳಾಗುವುದು ಕೆಲವರು, ಆದರೆ ಬಡವರ ಮಕ್ಕಳಿ ಯಾರು ಸಾಫ್ಟ್ವೇರ್ ಗಳಾಗುತ್ತಿಲ್ಲ, ಪ್ರತಿ ವರ್ಷ ಇಂಜಿನಿಯರಿಂಗ್ ಸೀಟುಗಳು ಖಾಲಿಯಾಗಿ ಉಳಿಯುತ್ತದೆ, ಆದರೆ ಬಡವರಿಗೆ ಸೀಟು ದೊರೆಯದಂತಾಗಿದೆ, ಅಸಮಾನತೆಯ ಹೆಚ್ಚಿಸಲು ಕಾರಣವಾಗುತ್ತದೆ ಎಂದರು.
ಕಳೆದ ಹತ್ತು ವರ್ಷಗಳಲ್ಲಿ ಮತ್ತಷ್ಟು ಅಸಮಾನತೆ ಹೆಚ್ಚಳವಾಗುತ್ತದೆ, ಸಂವಿಧಾನ ಆಶಯಗಳ ವಿರುದ್ಧವಾಗಿ ಸರ್ಕಾರಗಳು ನಡೆದುಕೊಳ್ಳುತ್ತಿವೆ, ಪ್ರಜಾಪ್ರಭುತ್ವ ಉಳಿಸುವುದಾಗಿ ಹೇಳುವ ರಾಜಕೀಯ ಪಕ್ಷಗಳು ಬಡವರ ವಿರೋಧಿಯಾಗಿ ಬಂಡವಾಳಗರ ಕಾರ್ಪೊರೇಟ್ ಪರವಾದ ನಿಲುವುಗಳನ್ನು ತೆಗೆದುಕೊಂಡರು ಜನಪರವಾಗಿ ಎಂದು ಬಿಂಬಿಸಿಕೊಳ್ಳುತ್ತಿರುವೆ ಜನರು ಸಂಘಟಿತ ಜನತೆಯಲ್ಲಿ ಪ್ರಶ್ನಿಸದೆ ಹೋದರೆ ಸಂವಿಧಾನಕ್ಕೆ ಮತ್ತಷ್ಟು ಅಪಾಯಗಳು ಬರುವ ದಿನಗಳು ಹತ್ತಿರವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರ ಎಂ ನರಸಪ್ಪ ಎಸ್ ಮಾರಪ್ಪ ವಕೀಲ ರಾಜ ಸಮರ್ಪಶ ತಾಯಪ್ಪ ಭಂಡಾರಿ ಅನಿತಾ ಬಸವರಾಜ ಸೇರಿದಂತೆ ಅನೇಕರು ಇದ್ದರು.

Megha News