Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Local News

ಹೊಸ ವರ್ಷಾಚರಣೆ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆ ಕಂಡು ಬಂದಲ್ಲಿ, ಕಾನೂನು ಉಲ್ಲಂಘನೆ ಮಾಡಿದಲ್ಲಿ ಶಿಸ್ತು ಕ್ರಮ

ಹೊಸ ವರ್ಷಾಚರಣೆ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆ ಕಂಡು ಬಂದಲ್ಲಿ, ಕಾನೂನು ಉಲ್ಲಂಘನೆ ಮಾಡಿದಲ್ಲಿ ಶಿಸ್ತು ಕ್ರಮ

ರಾಯಚೂರು. ಹೊಸ ವರ್ಷಾಚರಣೆ ಹಿನ್ನೆಯಲ್ಲಿ ಸಾರ್ವಜನಿಕರ ಸುರಕ್ಷತಾ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಕಾನೂನು ಉಲ್ಲಂಘ ನೆಯಾದಲ್ಲಿ ಕಾನೂನು ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರು ತಿಳಿಸಿದ್ದಾರೆ.

ಸಾರ್ವಜನಿಕರು ಸಾರ್ವಜನಿಕ ರಸ್ತೆ, ಪಾರ್ಕ್, ಬಸ್ ಸ್ಟಾಂಡ್, ವೃತ್ತಗಳಲ್ಲಿ ನಗರ ಹಾಗೂ ಪಟ್ಟಣದ ವೃತ್ತಗಳು ಸೇರಿದಂತೆ ಇತರೆ ಸ್ಥಳಗಳಲ್ಲಿ ಹೊಸ ವರ್ಷ ಆಚರಣೆಯ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವಂತಿಲ್ಲ.
ಹೋಟೆಲ್/ರೆಸಾರ್ಟ್/ರೆಸ್ಟೋರೆಂಟ್/ವೈನ್ ಶಾಪ್‌ನ ಮಾಲೀಕರು ಹೊಸ ವರ್ಷಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದ್ದಲ್ಲಿ, ಸಂಬಂಧಪಟ್ಟ ಇಲಾಖೆಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಸಾರ್ವಜನಿಕರು ಹೊಸ ವರ್ಷ ಆಚರಣೆಯ ಸಂದರ್ಭದಲ್ಲಿ ಯಾವುದೇ ರೀತಿಯ ಆಯುಧ/ಮಾರಕಾಸ್ತ್ರಗಳನ್ನು (ಪಿಸ್ತೂಲ್, ರಿವಾಲ್ವರ್, ತಲ್ವಾರ್ ಇತ್ಯಾದಿ) ಹಾಗೂ ಬೆಂಕಿ ಅವಘಡ ಸಂಭವಿಸುವ ವಸ್ತುಗಳನ್ನು ಬಳಸದಂತೆ ತಿಳಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
ಕಾರ್ಯಕ್ರಮದ ಸ್ಥಳದಲ್ಲಿ ಹೊಟೇಲ್/ರೆಸಾರ್ಟ್/ರೆಸ್ಟೋರೆಂಟ್/ವೈನ್ ಶಾಪ್ ಮಾಲೀಕರು ತಮ್ಮದೇ ಆದ ಸ್ವಂತ ಸೆಕ್ಯೂರಿಟಿ ವ್ಯವಸ್ಥೆ ಮಾಡಿಕೊಳ್ಳಬೇಕು. ಕರ್ನಾಟಕ ಪಬ್ಲಿಕ್ ಸೇಫ್ಟಿ ಆಕ್ಟ್ ಪ್ರಕಾರ ಹೋಟೆಲ್/ರೆಸಾರ್ಟ/ರೆಸ್ಟೋರೆಂಟ್/ವೈನ್ ಶಾಪ್ ಮಾಲೀಕರು ಹೊಸ ವರ್ಷ ಆಚರಣೆ ಸ್ಥಳದಲ್ಲಿ ಸಿಸಿ ಟಿವಿ ಕ್ಯಾಮರಾ ಗಳನ್ನು ಅಳವಡಿಸಬೇಕು, ಸಿಸಿ ಟಿವಿ ರೆಕಾರ್ಡ್ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ 01.01.2024ರ ಸಾಯಂಕಾಲ ಒದಗಿಸಬೇಕು.
ಎನ್ಡಿಪಿಎಸ್ ಕಾಯ್ದೆಗೆ ಒಳಪಡುವ ಮಾದಕ ವಸ್ತುಗಳ ಬಳಕೆ ನಿಷೇಧಿಸಿದೆ. ಮಾದಕ ವಸ್ತು ಗಳನ್ನು ಬಳಸುವುದು ಕಂಡು ಬಂದಲ್ಲಿ, ಹೋ ಟೆಲ್/ರೆಸಾರ್ಟ್/ರೆಸ್ಟೋರೆಂಟ್/ವೈನ್ ಶಾಪ್ ಮಾಲೀಕರು ಮತ್ತು ಮಾದಕ ವಸ್ತುಗಳನ್ನು ಬಳಸುವವರ ಹಾಗೂ ಮಾರಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳ ಲಾಗುವುದು.
ಅಬಕಾರಿ ಇಲಾಖೆಯ ಪರವಾನಿಗೆಯಲ್ಲಿ ನೀಡಿದ ಸೂಚನೆಯಂತೆಯೇ ಮದ್ಯ ಮಾರಾಟ ಮಾಡು ವುದು ಮತ್ತು ಸಮಯ ಪಾಲನೆ ಕಡ್ಡಾಯವಾಗಿ ಪಾಲಿಸುವುದು., ಹೋಟೆಲ್/ರೆಸಾರ್ಟ/ರೆಸ್ಟೋರೆಂಟ್/ವೈನ್ ಶಾಪ್/ಇತರೆ ಅಂಗಡಿ ಮಾಲೀಕರು ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗದಂತೆ ಸಾರ್ವಜನಿಕರ ವಾಹನಗಳ ನಿಲುಗಡೆಗಾಗಿ ಪ್ರತ್ಯೇಕವಾದ ಸ್ಥಳಾವಕಾಶ ಮಾಡಿಕೊಳ್ಳಬೇಕು.
ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಸಾರ್ವ ಜನಿಕ ಸ್ಥಳ ಸೇರಿದಂತೆ ಖಾಸಗಿ ಸ್ಥಳಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಷೇ ಧಿಸಿದೆ. ಕಾರ್ಯಕ್ರಮದಲ್ಲಿ ಡಿಜೆ ಸೌಂಡ್‌ನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸಾಮಾನ್ಯ ಸೌಂಡ್ ಸಿಸ್ಟಂ ಬಳಸಬೇಕಾದಲ್ಲಿ ಪರಿಸರ ಮತ್ತು ಶಬ್ದ ಮಾಲಿನ್ಯ ಕಾಯ್ದೆಯನ್ವಯ ಕನಿಷ್ಠ 40-70 ಡೆಸಿಬಲ್ ಮೀರುವಂತಿಲ್ಲ ಹಾಗೂ ರಾತ್ರಿ 10
ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ಸೌಂಡ್ ಸಿಸ್ಟಂ ಬಳಸುವಂತಿಲ್ಲ ಎಂಬ ನಿಯಮ ಇರುವುದರಿಂದ ಹೋಟೆಲ್/ರೆಸಾರ್ಟ/ರೆಸ್ಟೋ ರೆಂಟ್/ವೈನ್ ಶಾಪ್/ಇತರೆ ಅಂಗಡಿ ಮಾಲೀ ಕರು ಹಾಗೂ ಸಾರ್ವಜನಿಕರು ಸಂಬಂಧಪಟ್ಟ ಠಾಣೆಯಿಂದ/ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಲು ತಿಳಿಸಲಾಗಿದೆ. ನಿಮಯ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳ ಲಾಗುವುದು.
ಮದ್ಯಪಾನ ಮಾಡಿ ವಾಹನ ಚಲಾಯಿ ಸುವಂತಿಲ್ಲ, ಮದ್ಯಪಾನ ಮಾಡಿ ವಾಹನಗಳನ್ನು ಚಾಲನೆ ಮಾಡಿದಲ್ಲಿ ಐಎಂವಿ ಕಾಯ್ದೆ ಕಲಂ: 185 ರನ್ವಯ ₹10,000 ವರೆಗಿನ ದಂಡ ಅಥವಾ 6 ತಿಂಗಳ ಕಾಲದವರೆಗಿನ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿರುತ್ತದೆ. ಅಲ್ಲದೇ ಚಾ ಲಕನ ಡಿ.ಎಲ್.ನ್ನು ಸಕ್ಷಮ ಪ್ರಾಧಿಕಾರ ರದ್ದುಗೊ ಳಿಸುವ ಅಧಿಕಾರ ಇರುತ್ತದೆ. ಆದ್ದರಿಂದ ನಿಯ ಮಗಳನ್ನು ಪಾಲಿಸಲು ಕೋರಲಾಗಿದೆ. ಒಂದು ವೇಳೆ ಉಲ್ಲಂಘಿಸಿದಲ್ಲಿ ನಿಯಮಗ ಳನ್ವಯ ಕ್ರಮ ಕೈಗೊಳ್ಳಲಾಗುವುದು.
ಹೊಸ ವರ್ಷ ಆಚರಣೆಯ ನೆಪದಲ್ಲಿ ಯುವಕರು ನಗರ/ಪಟ್ಟಣಗಳಲ್ಲಿ ಕರ್ಕಶ ಶಬ್ದ ಸೂಸುವ/ಸೈಲನ್ಸರ್ ಬಳಸಿ ಬೈಕ್‌ನಲ್ಲಿ ಅತೀವೇಗವಾಗಿ, ಅಜಾಗರೂಕತೆಯಿಂದ ತಿರುಗಾಡುವಂತಿಲ್ಲ ಹಾ ಗೂ ದ್ವಿಚಕ್ರವಾಹನಗಳ ಮೇಲೆ ಶಬ್ದ ಮಾಲಿನ್ಯ ಮಾಡುತ್ತಾ, ರಸ್ತೆಗಳಲ್ಲಿ ರೇಸಿಂಗ್ ಮಾಡಿದಲ್ಲಿ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಲಾಗುತ್ತದೆ. ಚಾಲಕನ ಡಿ.ಎಲ್, ಆ‌ರ್.ಸಿ. ಇನ್ಸೂರೆನ್ಸ್ ಇತ್ಯಾದಿ ದಾಖಲೆಗಳನ್ನು ಹಾಜರು ಪಡಿಸಿದ ನಂತರ ವಾಹನವನ್ನು ಠಾಣೆಯಿಂದ ಬಿಡುಗಡೆಗೊಳಿಸಲಾಗುತ್ತದೆ. ಇಲ್ಲದಿದ್ದಲ್ಲಿ ವಾಹನವನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಗ್ರಾಮೀಣ ಭಾಗದ/ನಗರ/ಪಟ್ಟಣ/ಹೊರವ ಲಯ/ಬಡಾವಣೆಗಳಲ್ಲಿ ಸಾರ್ವಜನಿಕರಿಗೆ ತೊಂ ದರೆಯಾಗದಂತೆ ಗುಂಪು ಗುಂಪಾಗಿ ಪಾರ್ಟಿಗ ಳನ್ನು ಮಾಡುವುದನ್ನು ನಿಷೇಧಿಸಿದೆ.
ರೇವ್ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮಾಡು ವುದನ್ನು ನಿಷೇಧಿಸಿದೆ.ಮಧ್ಯರಾತ್ರಿ ಶಾಲಾ ಕಾಲೇಜು, ಹಾಸ್ಟೆಲ್‌ ಗಳಲ್ಲಿ ಹೊಸ ವರ್ಷ ಆಚರಣೆಯ ನೆಪದಲ್ಲಿ ನಿಯಮ ಬಾಹಿರ ಚಟುವಟಿಕೆಗಳು ಜರುಗದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು,
ಜಿಲ್ಲೆಯಲ್ಲಿ ಹೊಸ ವರ್ಷ ಆಚರಣೆ ಅವಧಿಯಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ಕಟ್ಟು ನಿಟ್ಟಾಗಿ ಕರ್ತವ್ಯ ನಿರ್ವಹಿಸಲು ವೃತ್ತಗಳಲ್ಲಿ ಪಿಕೆಟಿಂಗ್ ಪಾಯಿಂಟ್, ಗುಡ್ ಮಾರ್ನಿಂಗ್ ಬೀಟ್, ನಗರದ ಪ್ರಮುಖ ಸ್ಥಳಗಳಲ್ಲಿ, ವೃತ್ತಗಳಲ್ಲಿ ಹಾಗೂ ನಗರದ ಪ್ರವೇಶ ಹಾಗೂ ನಿರ್ಗಮನ ಸ್ಥಳಗಳಲ್ಲಿ ಪೊಲೀಸ್ ಚೆಕ್‌ ಪೊಸ್ಟ್ ನೇಮಿಸಿದ್ದು, ಚೀತಾ, ನಿರ್ಭಯಾ, ಪಿಂಕ್, ಹೈವೇ ಮೋಬೈಲ್, ಇಆರ್‌ಎಸ್‌ಎಸ್ ಹಾಗೂ ಜಿಲ್ಲೆ ಯಾದ್ಯಂತ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳು ಹಾಗೂ ಗೃಹರಕ್ಷಕದಳದ ಸಿಬ್ಬಂದಿಗಳನ್ನು ಬಳಸಿಕೊಂಡು ರಾತ್ರಿಯಿಡಿ ಬಂದೋಬಸ್ತ್ ಕರ್ತವ್ಯ ಮಾಡುವಂತೆ ನಿಯೋಜನೆ ಮಾಡಲಾಗಿದೆ.
ಹೊಸ ವರ್ಷಾಚರಣೆಯನ್ನು ಸಾರ್ವಜನಿಕರು ಸ್ಪೂರ್ತಿದಾಯಕ ರೀತಿಯಲ್ಲಿ, ಶಾಂತಯುತವಾಗಿ ಹಾಗೂ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೇ ಆಚರಿಸಲಿ ತಿಳಿಸಿದ್ದಾರೆ.

Megha News