Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Local News

ಗ್ರಾಪಂ ಪರಿಚಾರಕನಿಗೆ ನಿಂದಿಸಿದ ಪಿಡಿಒ ರಾಮಪ್ಪ ನಡಗೇರಿ ಅಮಾನತು

ಗ್ರಾಪಂ ಪರಿಚಾರಕನಿಗೆ ನಿಂದಿಸಿದ ಪಿಡಿಒ ರಾಮಪ್ಪ ನಡಗೇರಿ ಅಮಾನತು

ರಾಯಚೂರು. ಗ್ರಾಪಂನಲ್ಲಿ ಕೆಲಸ ಮಾಡುತ್ತಿರು ವ ಪರಿಚಾರಕ ಸೂಗಪ್ಪನಿಗೆ ಅವಾಚ್ಯ ಶಬ್ದ ಗಳಿಂದ ನಿಂದಿಸಿದ ಮಸ್ಕಿ ತಾಲೂಕಿನ ಪಾಮನ ಕಲ್ಲೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿ ಕಾರಿ ರಾಮಪ್ಪ ನಡಗೇರಿ ವಿರುದ್ಧದ ಶಿಸ್ತುಕ್ರಮ ಕ್ಕಾಗಿ ಸೇವೆಯಿಂದ ಅಮಾನತ್ತುಗೊಳಿಸಿ ಜಿಪಂ ಸಿಇಒ ರಾಹುಲ್ ತುಕಾರಾಂ ಪಾಡ್ವೆ ಅವರು ಆದೇಶ ಹೊರಡಿಸಿದ್ದಾರೆ‌.

ರಾಮಪ್ಪ ನಡಗೇರಿ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಗ್ರಾಮ ಪಂಚಾಯತ್ ಮಸ್ಕಿ ತಾಲೂಕಿನ ಪಾಮನಕಲ್ಲೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವಧಿಯಲ್ಲಿ ಗ್ರಾಮ ಪಂಚಾಯತಿಯ ಪರಿಚಾರಕ ಸೂಗಪ್ಪ ಅವರು ಹಿಂದಿನ ತಿಂಗಳ ವೇತನ ಕೇಳಲು ಹೋದಾಗ ಪರಿಚಾರಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಬೈದಿದ್ದಾರೆ‌. ಈ ಕುರಿತು ಫೋನ್ ಸಂಭಾ ಷಣೆಯ ಆಡಿಯೋ ವೈರಲ್ ಆಗಿದೆ, ಧ್ವನಿ ಸುರುಳಿಯನ್ನು ಆಲಿಸಿದಾಗ ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಅಮಪ್ಪ ನಡಗೇರಿ ರವರು ನನಗೆ ಕಳುಹಿಸುವ ವಾಟ್ಸಾಪ್ ಸಂದೇಶದಲ್ಲಿ ಅವರು ಪರಿಚಾರಕನಿಗೆ ನಿಂದಿಸಿರುವ ಸಂದೇಶ ಕಳುಹಿಸಿದ್ದು ಸತ್ಯವಾಗಿದೆ.
ವರದಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ ಸಿಬ್ಬಂಧಿಯೊಂದಿಗೆ ಸೌಜನ್ಯ ಹಾಗೂ ವಿನಯ ದಿಂದ ನಡೆದುಕೊಳ್ಳದಿರುವ ಬಗ್ಗೆ ಲಿಖಿತ ವಿವ ರಣೆ ಸಲ್ಲಿಸುವಂತೆ ಕಛೇರಿ ಕಾರಣ ಕೇಳಿ ನೋಟೀಸ್‌ನ್ನು ಪಿಡಿಒ ರಾಮಪ್ಪ ನಡಿಗೇರಿಗೆ ಜಾರಿ ಮಾಡಿದೆ. ಲಿಖಿತ ವಿವರಣೆಯನ್ನು ಸಲ್ಲಿಸಿದ್ದು, ವಿವರಣೆಯಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿಯೊಂದಿಗೆ ಅನುಚಿತವಾಗಿ ಮಾತನಾಡಿದ್ದರ ಬಗ್ಗೆ ಯಾವುದೇ ಪಶ್ಚತ್ತಾಪ ಇಲ್ಲದಂತೆ ಕೆಲಸದ ಒತ್ತಡದಲ್ಲಿ ಯಾವುದೋ ಒಂದು ಮಾತನಾಡಿರಬಹುದು ಎಂದು ಹಾರಿಕೆ ವಿವರಣೆಯನ್ನು ಸಲ್ಲಿಸಿದ್ದಾರೆ.
ಡಿ.19, 2023 ರಂದು ಗ್ರಾಮ ಪಂಚಾಯತಿ ನೌಕರನ ವಿರುದ್ಧ ಕವಿತಾಳ ಪೊಲೀಸ್ ಠಾಣೆ ಯಲ್ಲಿ ಜಾತಿ ನಿಂದನೆ ದೂರನ್ನು ದಾಖಲಾಗಿದೆ.
ರಾಮಪ್ಪ ನಡಗೇರಿ ರವರ ವಿರುದ್ಧ ಆರೋಪ ಗಳು ಮೇಲ್ನೋಟಕ್ಕೆ ದೃಡಪಟ್ಟಿರುವ ಹಿನ್ನಲೆ ಯಲ್ಲಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.

Megha News