ರಾಯಚೂರು.ಮಲಿಯಾಬಾದ್ ಅರಣ್ಯ ಪ್ರದೇಶದಲ್ಲಿ ಚಿರತೆಯೊಂದು ಪ್ರತ್ಯೇಕ್ಷವಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಲಿಯಾಬಾದ್ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಆಂತಕದಲ್ಲಿದ್ದಾರೆ.
ಇತ್ತೀಚಿಗೆ ಮಲಿಯಾಬಾದ್ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶದಲ್ಲಿ ಚಿರತೆಯೊಂದು ಜಮೀನಿನಲ್ಲಿ ಕಟ್ಟಿ ಹಾಕಿದ್ದ ಜಾನುವಾರುಗಳನ್ನು ಹೊತ್ಯೋಯ್ದಿದೆ ಎಂದು ಸುದ್ದಿ ಹರಡಿದ್ದು, ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಮಲಿಯಾಬಾದ್ ಗುಡ್ಡಗಾಡು ಪ್ರದೇಶದಲ್ಲಿ ಅಲೆದಾಡಿದ್ದು, ಚಿರತೆ ಪ್ರತ್ಯೇಕ್ಷವಾಗಿರುವ ಮಾಹಿತಿ ಲಭ್ಯವಾಗಿಲಿಲ್ಲ, ಯಾವುದೋ ಕಾಡು ಪ್ರಾಣಿ ಜಾನುವಾರುಗಳ ಎಳೆದೊಯ್ದಿರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಜೊತೆಗೆ ಜನರ ಆತಂಕ ದೂರ ಮಾಡಲು ಅರಣ್ಯ ಪ್ರದೇಶದಲ್ಲಿ ಚಿರತೆ ಸೆರೆ ಹಿಡಿಯಲು ಬೋನ್ ಅಳವಡಿಸಿದ್ದರು, ಜನರಿಗೆ ಮಾಹಿತಿ ನೀಡಿ ಆತಂಕ ದೂರ ಮಾಡಿದ್ದರು.
ಇದೀಗ ಗುಡ್ಡದ ಪ್ರದೇಶದಲ್ಲಿ ಚರತೆ ಒಡಾಡಿ ರುವುದು ಕಂಡು ಜನರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ಈ ಕುರಿತು ಅರಣ್ಯ ಇಲಾಖೆ ವಿಡಿಯೋ ಕುರಿತು ಸ್ಪಷ್ಟಪಡಿಸಬೇಕಾಗಿದೆ.