Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ನಾಳೆಯಿಂದ ಮೂರು ದಿನ ಕೃಷಿ ಮೇಳ, ಬರದ ಸಿದ್ದತೆ

ನಾಳೆಯಿಂದ ಮೂರು ದಿನ ಕೃಷಿ ಮೇಳ, ಬರದ ಸಿದ್ದತೆ

ರಾಯಚೂರು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲ ಯದ ಆವರಣದಲ್ಲಿ ನಾಳೆಯಿಂದ ಮೂರು ದಿನಗಳವರೆಗೆ ನಡೆಯುವ ಕೃಷಿ ಮೇಳಕ್ಕೆ ಬರದ ಸಿದ್ದತೆ ನಡೆದಿದೆ.

ಅವರಣದಲ್ಲಿ ಬೃಹತ್ತಾದ ವೇದಿಕೆ ಸಿದ್ದಪಡಿಸು ತ್ತಿದ್ದು, ವೇದಿಕೆ ಎರಡಯ ಬಾಗದಲ್ಲಿ 240ಕ್ಕೂ ಅಧಿಕ ಮಳಿಗೆಗಳನ್ನು ಹಾಕಲಾಗುತ್ತಿದೆ, ವೇದಿಕೆಯಲ್ಲಿ ಶಾಮಿಯಾನ, ಕುರ್ಚಿಗಳು, ಪೆಂಡಾಲ್, ಸೇರಿದಂತೆ ಇತರೆ ಕೆಲಸಗಳಲ್ಲಿ ನಿರತರಾಗಿದ್ದಾರೆ.
ಕೃಷಿ ಮೇಳವನ್ನು ಹವಾಮಾನ ವೈಪರೀತ್ಯಕ್ಕೆ ಸುಸ್ಥಿರ ಕೃಷಿ ಎಂಬ ಶೀರ್ಷಿಕೆಯೊಂದಿಗೆ ಈ ವರ್ಷ ಕೃಷಿ ಮೇಳಕ್ಕೆ ಮೆರಗು ತರಲು
ವೇದಿಕೆಯ ಎಡ ಭಾಗದಲ್ಲಿ ಪ್ರತೇಕ ವೇದಿಕೆ ಮತ್ತು ಮಳಿಗೆಗಳನ್ನು ಹಾಕಲಾಗುತ್ತಿದೆ.
ಕೃಷಿ ಮೇಳೆದಲ್ಲಿ ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು ಹಾಗೂ ಆವಿಷ್ಕಾರಗಳ ಕುರಿತು ರೈತರಿಗೆ ಸಂಪೂರ್ಣ ಮಾಹಿತಿ ನೀಡುವ ಮಳಿಗೆಗಳಿಗೆ ಆಧ್ಯತೆ ನೀಡಿದೆ. ಜೊತೆಗೆ ರೈತ ಬಾಂಧವರಿಗೆ ಸಂಪೂರ್ಣ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಲು ವ್ಯವಸ್ಥೆ ಕಲ್ಪಿಸಿದೆ.
ಕೃಷಿ ಮೇಳದ ಮಳಿಗೆಯಲ್ಲಿ ಹೊಸ ಕೃಷಿ ಪರಿಕರಗಳು, ಫಲಪುಷ್ಟ ಪ್ರದರ್ಶನ, ರೇಷ್ಮೆಕೃಷಿ, ಕುರಿ ಮತ್ತು ಮೇಕೆ ಸಾಕಾಣಿಕೆ, ಕೋಳಿ ಸಾಕಾ ಣಿಕೆ, ಮೊಲ ಸಾಕಾಣಿಕೆ, ಎರೆಗೊಬ್ಬರ ಉತ್ಪಾ ದನೆ, ಜೈವಿಕ ಗೊಬ್ಬರಗಳ ಉತ್ಪಾದನೆ ಹಾಗೂ ಬಳಕೆ, ಸಾವಯವ ಕೃಷಿ ಇತ್ಯಾದಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪ್ರಾತ್ಯಕ್ಷಿಕೆ ಯೊಂದಿಗೆ ರೈತರಿಗೆ ಮಾಹಿತಿ ನೀಡಲಾಗುತ್ತದೆ.
ಈ ಮೇಳದಲ್ಲಿ ಮೀನುಗಾರರಿಗೆ ಪ್ರತೇಕ ವ್ಯವಸ್ಥೆ ಕಲ್ಲಿಸಿದೆ, ಒಳನಾಡು ಮೀನುಗಾರಿಕೆ, ಅಲಂಕಾ ರಿಕ ಮೀನು ಸಾಕಾಣಿಕೆ, ಮೀನಿನ ಖಾದ್ಯ, ಸಂಸ್ಕರಣೆ ಉತ್ತಮ ಮಾಹಿತಿಯನ್ನು ರೈತ ಮೀನುಗಾರರಿಗೆ ನೀಡಲಾಗುತ್ತದೆ,
ಮೊದಲನೇಯ ದಿನ ಗೋಪೂಜೆ ಮೂಲಕ ಚಾಲನೆ ನೀಡಲಾಗುತ್ತದೆ, ಎರಡನೇ ದಿನ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವರು, ಕೃಷಿ ಸಚಿವ, ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವರು, ಸೇರಿದಂತೆ ವಿವಿಧ ಇಲಾಖೆಗಳ ಸಚಿವರು ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಉತ್ತಮ ಕೃಷಿಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

Megha News