Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local News

ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ-ಜಯಣ್ಣ

ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ-ಜಯಣ್ಣ

ರಾಯಚೂರು.ಒಂದು ಗಿಡವನ್ನು ನೆಟ್ಟು ಪೋಷಿಸುವ ಮೂಲಕ ಪರಿಸರಕ್ಕೆ ಕೊಡುಗೆ ನೀಡುವುದು ಇಂದಿನ ದಿನಗಳಲ್ಲಿ ಅವಶ್ಯಕತೆ ಇದೆ ಎಂದು ನಗರಸಭೆ ಹಿರಿಯ ಸದಸ್ಯ ಜಯಣ್ಣ ಹೇಳಿದರು.

ನಗರದ ಆಶಾಪುರ ರಸ್ತೆಯಲ್ಲಿರುವ ಆಫೀಸರ್ಸ್ ಕಾಲೋನಿಯಲ್ಲಿ ಅರಣ್ಯ ಇಲಾಖೆ, ನಗರಸಭೆ, ಹಸಿರು ಬಳಗ, ಆಫೀಸರ್ಸ್ ಕಾಲೋನಿ ನಿವಾಸಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ
ಸಸಿ ನೆಡೆಯುವ ಅಭಿಯಾನದ ಮುಂದುವರೆದ ಭಾಗವಾಗಿ ಆಫೀಸರ್ಸ್ ಕಾಲೋನಿಯಲ್ಲಿ ಗಿಡ ನೆಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು,
ಇಂದು ಜಾಗತಿಕ ತಾಪಮಾನದ ಬಗ್ಗೆ ನಾವು ಮಾತನಾಡುತ್ತೇವೆ, ನಮ್ಮ ಭಾಗದಲ್ಲಿ ಬಿಸಿಲಿನ ಬಗ್ಗೆ ಮಾತನಾಡುತ್ತೇವೆ, ಆದರೆ ಪರಿಸರಕ್ಕೆ ಪೂರಕವಾದ ಅಂತಹ ಕೆಲಸಗಳನ್ನು ಮಾಡು ವುದು ಬಹಳ ಅವಶ್ಯಕತೆ ಇದೆ ಎಂದರು.
ರಾಯಚೂರು ನಗರ ಸ್ವಚ್ಛವಾಗಿ ಹಸಿರಾಗಿ ಇರಬೇಕೆಂಬುದು ನಾವೆಲ್ಲರೂ ಆಸೆ ಪಡುತ್ತೇವೆ ಅದು ಇಂದಿನ ದಿನಗಳಲ್ಲಿ ಅವಶ್ಯಕ, ಆದರೆ ಇದಕ್ಕೆ ನಾವು ಪೂರಕವಾದಂತ ಕೆಲಸ ಸಮುದಾ ಯದಿಂದ ಆಗಬೇಕಾಗಿದೆ ಸಮುದಾಯ ಪಾಲ್ಗೊ ಳ್ಳುವುದರಿಂದ ಉತ್ತಮ ಪರಿಸರ ನಿರ್ಮಾಣ ಮಾಡಲು ಸಾಧ್ಯ ಎನ್ನುವುದಕ್ಕೆ ವಾರ್ಡ್ ನಂಬರ್
2 ರಲ್ಲಿರುವ ಸಸ್ಯಗಳನ್ನು ಇಂದು ಮರವಾಗಿ ಬೆಳೆಯಲು ಸಹಕರಿಸಿದ ವಾರ್ಡಿನ ಸಮಸ್ತ ಜನರಿಗೆ ಧನ್ಯವಾದ ತಿಳಿಸಿದರು.
ವಲಯ ಅರಣ್ಯ ಅಧಿಕಾರಿ ರಾಜೇಶ್ ನಾಯಕ್ ಮಾತನಾಡಿ, ಅರಣ್ಯ ಇಲಾಖೆ ಜೊತೆಗೆ ಸಮುದಾ ಯ ಭಾಗವಹಿಸುವ ಮೂಲಕ ಹಸಿರುಕರಣಕ್ಕೆ ಮುಂದಾಗಬೇಕು ಮುಂದಿನ ಪೀಳಿಗೆಗೆ ನಾವು ಉತ್ತಮ ಪರಿಸರ ಕೊಡದೆ ಇದ್ದರೆ ಮುಂದಿನ ಪೀಳಿಗೆ ನಮಗೆ ಕ್ಷಮಿಸುವುದಿಲ್ಲ ಎಂದರು.
ಎಲ್ಲರೂ ಪರಿಸರ ಬೆಳೆಸುವಲ್ಲಿ ಸಹಕಾರ ನೀಡಿ ನಿಮ್ಮ ಮಕ್ಕಳಂತೆ ಗಿಡಗಳನ್ನು ಸಂರಕ್ಷಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಆಫೀಸಸ್ ಕಾಲೋನಿಯ ನಿವಾಸಿಗಳಾದ ಪದ್ಮಹಿರ ವಿಶ್ವನಾಥ್ ರೆಡ್ಡಿ, ಪೀರ್ ಜಾದೆ, ಸಂತೋಷ್, ಮಲ್ಲಿಕಾರ್ಜುನ ಸ್ವಾಮಿ, ಮಟಮಾರಿ ನಾಗಪ್ಪ, ಹಸನ್ ಸಾಬ್, ಶ್ರೀನಿವಾಸ್, ನರಸಪ್ಪ, ಶಿಕ್ಷಕ ಸರೋಜಾ ಪಂಚ್ರಾಮ್, ಅಯ್ಯಪ್ಪ ರೆಡ್ಡಿ, ಚನ್ನಬಸಯ್ಯ, ನಿವೃತ್ತಿ ಉಪನ್ಯಾಸಕರು ಸೇರಿದಂತೆ ವಾರ್ಡಿನ ಮುಖಂಡರು ಭಾಗವಹಿಸಿದರು.

Megha News