Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ರಾಯಚೂರು ನಗರಸಭೆ ವಾರ್ಡ ೩೧ ಉಪ ಚುನಾವಣೆ ಕಾಂಗ್ರೆಸ್ಅಭ್ಯರ್ಥಿ ಆಂಜಿನಮ್ಮರಿಗೆ ಗೆಲವು

ರಾಯಚೂರು ನಗರಸಭೆ ವಾರ್ಡ ೩೧ ಉಪ ಚುನಾವಣೆ ಕಾಂಗ್ರೆಸ್ಅಭ್ಯರ್ಥಿ ಆಂಜಿನಮ್ಮರಿಗೆ  ಗೆಲವು

ರಾಯಚೂರು,ನ.26,- ರಾಯಚೂರಿನ ನಗರಸಭೆಯ ವಾಡ್೯ ನಂಬರ್ 31ರ ಉಪ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಅಂಜನಮ್ಮ ಶ್ಯಾಮ್ ಸುಂದರ್ ಅವರು ಗೆಲುವು ಸಾಧಿಸಿದ್ದಾರೆ.

ಇಂದು ರಾಯಚೂರು ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಮತ ಎಣಿಕೆ ಮುಕ್ತಾಯದ ನಂತರ ಚುನಾವಣಾಧಿಕಾರಿಗಳಾ ಬಿ.ವೈ.ವಾಲ್ಮೀಕಿ ಅವರು ಹಾಗೂ ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಅವರ ಸಮ್ಮುಖದಲ್ಲಿ ರಾಯಚೂರು ನಗರಸಭೆಯ ವಾಡ್೯ ನಂಬರ್ 31ರ ಫಲಿತಾಂಶ ಪ್ರಕಟಿಸಿದರು. ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಂಜನಮ್ಮ ಶ್ಯಾಮ್ ಸುಂದರ್ ಅವರಿಗೆ ಇದೆ ವೇಳೆ ಪ್ರಮಾಣ ಪತ್ರ ನೀಡಿದರು.

282 ಮತಗಳ ಅಂತರದಿಂದ ಗೆಲುವು*: ಇವಿಎಂ ಮತಗಳ ಮತಪತ್ರ ಎಣಿಕೆ ಕಾರ್ಯ ಮುಕ್ತಾಯದ ನಂತರ ಅಭ್ಯರ್ಥಿ ಅಂಜನಮ್ಮ  ಶ್ಯಾಮ್ ಸುಂದರ್ ಅವರು 1268 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ 986 ಮತಗಳನ್ನು ದಾಖಲಿಸಿದರು. ಒಟ್ಟು 2274 ಮತಗಳ ಪೈಕಿ ಕಾಂಗ್ರೆಸ್ 1268, ಬಿಜೆಪಿಗೆ 986 ಹಾಗೂ ಇತರೆ ಪಕ್ಷಕ್ಕೆ 20 ಹಂಚಿಕೆಯಾದವು.ಎಸ್

Megha News