ರಾಯಚೂರು,ನ.೧೮-ಕರ್ನಾಟಕ ರಾಜ್ಯ ವಕ್ಫ ಮಂಡಳಿಗೆ ಮುತವಲ್ಲಿಗಳ ಕೋಟಾದಡಿಯಲ್ಲಿ ಚುನಾವಣೆ ನಡೆಯುತ್ತಿದ್ದು, ರಾಯಚೂರು ಜಿಲ್ಲೆಯ ವಕ್ಫ ಸಲಹಾ ಸಮಿತಿ ಅಧ್ಯಕ್ಷ ಮೌಲಾನಾ ಫರೀದ ಖಾನ ಅವರು ಮುತವಲ್ಲಿಗಳನ್ನು ಫೋನ್ ಮಾಡಿ ಅನ್ವರ ಭಾಷಾ ಮತ್ತು ಸರವರ್ ಬೇಗ್ ಅವರಿಗೆ ಮತದಾನ ಮಾಡಬೇಕೆಂದು ಹೆದರಿಸುತ್ತಿದ್ದಾರೆ, ಇದರಿಂದ ಪಾರದರ್ಶಕ ಚುನವಾಣಾ ಉದ್ದೇಶಕ್ಕೆ ದಕ್ಕೆಯಾಗುತ್ತಿದೆ ಎಂದು ಮಾಜಿ ಸಂಸದ ದಿ.ಅಬ್ದುಲ್ ಸಮದ್ ಸಿದ್ದೀಖಿ ಇವರ ಮಗ ಹಾರಿಸ್ ಸಿದ್ದೀಖಿ ಇವರು ಚುನಾವಣಾಧಿಕಾರಿ ಆದಿತ್ಯ ಆಮ್ಲಾನ ಬಿಸ್ವಾಸ ರವರಿಗೆ ದೂರಿನ ಮೇರೆಗೆ ಇಬ್ಬರು ಅಭ್ಯರ್ಥಿಗಳಿಗೆ ನೋಟಿಸ್ ಜಾರಿಮಾಡಲಾಗಿದೆ.
ಚುನಾವಣಾ ಧಿಕಾರಿ ಅದಿತ್ಯ ಅಮ್ಲಾನ ಬಿಸ್ವಾ್ ಇವರು ಅಭ್ಯರ್ಥಿಗಳಾದ ಅನ್ವರ ವಾಷಾ ಮತ್ತು ಸರವರ್ ಬೇಗ್ ಇವರಿಗೆ ಶೋಕಾಸ್ ನೋಟಿಸ್ ನೀಡಿ 24 ಗಂಟೆಗಳಲ್ಲಿ ಉತ್ತರಿಸುವಂತೆ ಸೂಚಿಸಿದ್ದಾರೆ, ಇಲ್ಲದಿದ್ದಲ್ಲಿ ನಿಯಮದಂತೆ ಕ್ರಮ ಜರುಗಿಸುವದಾಗಿ ನೋಟಿಸ್ ನಲ್ಲಿ ತಿಳಿಸಿದ್ದಾರೆ.
Megha News > Local News > ರಾಯಚೂರು ವಕ್ಫ ಸಮಿತಿ ಅಧ್ಯಕ್ಷ ಫರೀದ ಖಾನರಿಂದ ಮತದಾರರಿಗೆ ಬೆದರಿಕೆ ಆರೋಪ: ವಕ್ಫ ಚುನಾವಣೆ ಸ್ಪರ್ಧಿಸಿದ ಇಬ್ಬರು ಅಭ್ಯರ್ಥಿಗಳಿಗೆ ನೋಟಿಸ್
ರಾಯಚೂರು ವಕ್ಫ ಸಮಿತಿ ಅಧ್ಯಕ್ಷ ಫರೀದ ಖಾನರಿಂದ ಮತದಾರರಿಗೆ ಬೆದರಿಕೆ ಆರೋಪ: ವಕ್ಫ ಚುನಾವಣೆ ಸ್ಪರ್ಧಿಸಿದ ಇಬ್ಬರು ಅಭ್ಯರ್ಥಿಗಳಿಗೆ ನೋಟಿಸ್
Tayappa - Raichur18/11/2024
posted on
Leave a reply