Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local News

ಗಿಗಾ ಬೈಟ್ ಎನ್ನುವ ಎಲೆಕ್ಟ್ರಿಕ್ ಬೈಕ್ ಗಳ ಅಂಗಡಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅಪಾರ ಪ್ರಮಾಣದಲ್ಲಿ ನಷ್ಟ

ಗಿಗಾ ಬೈಟ್ ಎನ್ನುವ ಎಲೆಕ್ಟ್ರಿಕ್ ಬೈಕ್ ಗಳ ಅಂಗಡಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅಪಾರ ಪ್ರಮಾಣದಲ್ಲಿ ನಷ್ಟ

ರಾಯಚೂರು. ನಗರದ ಮಹಾವೀರ ವೃತ್ತದಲ್ಲಿರುವ ರಂಜಿತ್ ಡ್ರೆಸೇಸ್‌ ಬಟ್ಟೆ ಅಂಗಡಿ ಹತ್ತಿರವಿರುವ ಗಿಗಾ ಬೈಟ್ ಎನ್ನುವ ಎಲೆಕ್ಟ್ರಿಕ್ ಬೈಕ್ ಗಳ ಅಂಗಡಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹತ್ತಿಕೊಂಡಿರುವ ಘಟನೆ ನಡೆದಿದೆ.

ಅಂಗಡಿ ಮುಂಭಾಗದಲ್ಲಿ ನಿಲ್ಲಿಸಿದ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ ಇದರಿಂದ ಏಕಾಏಕಿಯಾಗಿ ಮುಂಭಾಗದಲ್ಲಿದ್ದ ಮೂರು ಎಲೆಕ್ಟ್ರಿಕ್ ವಾಹನಗಳು, ಎರಡು ಬೈಕ್ ಗಳು ಸುಟ್ಟು ಕರಕಲಾಗಿವೆ. ಎರಡು ಅಂತಸ್ತಿನ ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿದ್ದು
ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ,
ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಹಿತಿ ನೀಡಿದ ನಂತರ ಸ್ಥಳಕ್ಕಾಮಿಸಿ ಬೆಂಕಿಯನ್ನು ನಂದಿಸುವ ಕಾರ್ಯ ನಡೆಸಿದರು.
ಅಗ್ನಿಶಾಮಕ ಶಾಮಕ ದಳ ಸಿಬ್ಬಂದಿಗಳು ಆಗಮಿಸುವಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಗ್ನಿಗೆ ಭಸ್ಮವಾಗಿದೆ.
ಕಟ್ಟಡದಲ್ಲಿನ ಕಾರ್ಮಿಕರು ಸಿಲಿಕಿಕೊಂಡಿದ್ದು, ಶ್ರೀನಿವಾಸ ಎನ್ನುವ ಕಾರ್ಮಿಕ ಮೇಲಿಂದ ಜಿಗಿದಿದ್ದರಿಂದ ಕಾಲಿಗೆ ಪೆಟ್ಟಾಗಿದೆ‌.
ಅಂಗಡಿ ವರುಣ ಎನ್ನುವವರಿಗೆ ಸೇರಿದೆ ಎನ್ನಲಾಗಿದೆ.
ಮಹಾವೀರ ವೃತ್ತದಲ್ಲಿ ಘಟನೆ ನಡೆಯುತ್ತಿದ್ದಂತೆ ಸುತ್ತಮುತ್ತಲಿನ ಜನರು ಚೆಲ್ಲಾಪಿಲ್ಲಿಯಾಗಿ ಹೋಡಿ ಹೋದರು ಹತ್ತಿರದಲ್ಲಿರುವ ಅಂಗಡಿಗಳ ಮಾಲೀಕರ ತಮ್ಮ ಅಂಗಡಿಗಳನ್ನು ಮುಚ್ಚಿ ಸುರಕ್ಷತೆ ಕಾಪಾಡಿಕೊಂಡರು. ವೃತ್ತದಲ್ಲಿ ಸಂಚಾರ ಹೆಚ್ಚಿರುವುದರಿಂದ ಕೆಲ ಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಸಂಚಾರಿ ಪೋಲಿಸರು ವಾಹನಗಳ ಸಂಚಾರ ನಿಯಂತ್ರಣಕ್ಕೆ ಹರಸಾಹಸ ಪಟ್ಟರು.

Megha News