Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ರಿಮ್ಸ್ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಹರಿಯುತ್ತಿದೆ ಚರಂಡಿ ನೀರು ಸಾರ್ವಜನಿಕರ ಸಂಚಾರಕ್ಕೆ ಸಂಕಷ್ಟ

ರಿಮ್ಸ್ ಆಸ್ಪತ್ರೆಯ ಮುಂಭಾಗದ ರಸ್ತೆಯಲ್ಲಿ ಹರಿಯುತ್ತಿದೆ ಚರಂಡಿ ನೀರು ಸಾರ್ವಜನಿಕರ ಸಂಚಾರಕ್ಕೆ ಸಂಕಷ್ಟ

ರಾಯಚೂರು. ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ರಿಮ್ಸ್ ಆಸ್ಪತ್ರೆಯ ಎದುರು ಕಳೆದ ಎರಡು ಮೂರು ದಿನಗಳಿಂದ ಚರಂಡಿಯ ಕಾಲುವೆ ನೀರು ಚರಂಡಿಯಲ್ಲಿ ಹರಿದು ಹೋಗುವ ಬದಲಾಗಿ ರಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ  ಹಾಗೂ ರಸ್ತೆ ಮೇಲೆ ಹರಿಯುತ್ತಿದ್ದು ಕೊಳಚೆ ಯಾಗಿ ಪರಿಣಮಿಸಿದೆ, ಇದರಿಂದ ಸಂಚರಿಸುವ ಸಾರ್ವಜನಿಕರಿಗೆ  ಒಂದು ರೀತಿಯ ಕಿರಿಕಿರಿ  ಉಂಟಾಗಿದೆ.

ರಾಯಚೂರು ಹೈದರಾಬಾದ್ ರಾಜ್ಯ ಹೆದ್ದಾರಿಯಾಗಿದ್ದು, ರಿಮ್ಸ್ ಆಸ್ಪತ್ರೆಯ ಗೇಟ್‌ನ ಮುಂಭಾಗದಲ್ಲಿ ಚರಂಡಿ ಕಾಲುವೆ ಹಾದು ಹೋಗಿದೆ, ಚರಂಡಿ ಕಾಲುವೆಯಲ್ಲಿ ಹೂಳು ತುಂಬಿದ್ದು, ಚರಂಡಿ ಹರಿದು ಹೋಗುವಂತೆ ತಡೆ ಹಿಡಿದಿದೆ. ಇದರಿಂದ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ, ರಿಮ್ಸ್ ಆಸ್ಪತ್ರೆಯ ಗೇಟ್‌ ಮುಂದೆಯೇ ಚರಂಡಿ ನೀರು ಹರಿಯುತ್ತಿದ್ದು ಸಾರ್ವಜನಿಕರು ಚರಂಡಿ ನೀರಿನಲ್ಲಿ ಹೋಗುವ ಪರಸ್ಥಿತಿ ನಿರ್ಮಾಣವಾಗಿದೆ, ಚರಂಡಿ ನೀರು ದುರ್ವಾಸನೆಯಿಂದ ಒಡಾಡುವ ಸಾರ್ವಜನಿಕ ರಿಗೆ ಕಿರಿಕಿರಿ ಉಂಟಾಗಿದೆ, ಆಸ್ಪತ್ರೆಗೆ ಹೋಗುವ ದಾರಿಯೇ ಈಗಿರುವಾಗ ಆಸ್ಪತ್ರೆಯಲ್ಲಿ ಸ್ವಚ್ಚತೆ ಹೇರಿರುತ್ತೆ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ. ರಸ್ತೆ ಮೇಲೆ ಹರಿಯುವ ಚರಂಡಿ ನೀರು ಹಲವು ರೋಗ, ರುಜಿಗಳಿಗೆ ರಹದಾರಿಯಾಗಿದೆ. ಕೊಳಚೆ ನೀರಿನ ಮೇಲೆಯೇ ಮಕ್ಕಳು, ಮಹಿಳೆಯರು, ವಯೋವೃದ್ಧರು ನಿತ್ಯ ಓಡಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆಯಲ್ಲಿ ಚರಂಡಿ ತುಂಬಿ ರಸ್ತೆ ಮೇಲೆ ಸದಾ ಹರಿಯುತ್ತಿದೆ. ಚರಂಡಿ ತುಂಬಿದ ನೀರು ಸುಲಭವಾಗಿ ಹೋಗುವಂತೆ ಯಾವುದೇ ವ್ಯವಸ್ಥೆ ಮಾಡಿಲ್ಲ. ರಸ್ತೆ ಮೇಲೆ ನಿಂತು ಗಬ್ಬೆದ್ದು ನಾರು ತ್ತಿದೆ. ರಸ್ತೆಯಲ್ಲಿ ಕೊಳಚೆ ನೀರು ಸದಾ ಹರಿಯುತ್ತಿದ್ದು, ಇರುವದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ರಸ್ತೆಯಲ್ಲಿ ಸಂಚಾರಕ್ಕೂ ತೊಂದರೆ ಉಂಟಾಗಿದೆ ಈ ರಸ್ತೆ ದಾಟಲು ಜನರು ಪರದಾ ಡುವ ಸ್ಥಿತಿ ಉಂಟಾಗಿದೆ.

ರಿಮ್ಸ್ ಆಸ್ಪತ್ರೆಯ ಆಡಳಿತಾಧಿಕಾರಿಗಳು ನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಕಂಡು ಕಾಣದಂತೆ ಇದ್ದಾರೆ, ಇಂದರಿಂದ ಆಸ್ಪತ್ರೆಗೆ ಬರುವ ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ.
ನಗರಸಭೆ ಹಾಗೂ ರಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಚರಂಡಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ವಹಿಸಬೇಕು ಎಂದು ಮಲ್ಲಿಕಾರ್ಜುನ ಜೆ.ಮಲ್ಲಾಪೂರ ಒತ್ತಾಯಿಸಿದ್ದಾರೆ.

Megha News