ರಾಯಚೂರು.ಜೆಡಿಎಸ್, ಬಿಜೆಪಿ ಪಕ್ಷಗಳು ಮೊದಲು ಅವರ ತಟ್ಟೆಯಲ್ಲಿ ಏನು ಬಿದ್ದಿದೆ ಎಂದು ನೋಡಿಕೊಳ್ಳಲಿ, ಹಿಂದಿನ ಸರ್ಕಾರ ಹೇಗಿತ್ತು ಎಂಬುದು ಜೆಡಿಎಸ್ ನವರಿಗೆ ಗೊತ್ತಿದೆ ಎಂದು ಸಚಿವ ಶರಣ ಪ್ರಕಾಶ ಪಾಟೀಲ್ ಹೇಳಿದರು.
ಮಾದ್ಯಮಗೋಷ್ಠಿಯಲ್ಲಿಂದು ಮಾತನಾಡಿ,
ಜೆಡಿಎಸ್ ಪಕ್ಷದಲ್ಲಿ ಕೆಲವೇ ಸಿಟ್ ಇದ್ದರೂ ಸಿಎಂ ಮಾಡಿದ್ದು ಕಾಂಗ್ರೆಸ್ ಆದರೆ ಕಾಂಗ್ರೆಸ್ ವಿರುದ್ಧವಾಗಿ ಬಿಜೆಪಿ ಜೊತೆಗೆ ಕೈಜೋಡಿಸಿದ್ದಾರೆ, ಅವರಿಗೆ ಮಾನ ಮರ್ಯಾದೆ ಇದೆನಾ ? ಜನರು ಆಶೀರ್ವಾದ ಮಾಡಿಲ್ಲ, ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅವರ ಸರ್ಕಾರ ಮಾಡಲು ಜೆಡಿಎಸ್ ಕೈ ಜೋಡಿಸಿದ್ದಾರೆ, ಜೆಡಿಎಸ್ ನವರು ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ನಾವು ಹೇಳುತ್ತಿಲ್ಲ ಜನರೇ ಅರ್ಥ ಮಾಡಿಕೊಂಡಿದ್ದಾರೆ.
ವಾಲ್ಮೀಕಿ ಹಗರಣದ ವಿರುದ್ದ ತನಿಖೆ ನಡೆದಿದೆ, ಎಸ್ಐಟಿ ಚಾರ್ಜ್ ಶೀಟ್ ಮಾಡಿದೆ, ಇಡಿ ತನಿಖೆ ನಡೆದಿದೆ. ಅವರ ಪಾದಯಾತ್ರೆ ಮಾಡಲು ರಾಜಕಾರಣ ಮಾಡಲು ಹೊರಟಿದ್ದಾರೆ, ಅದರಿಂದ ಯಾವುದು ಉಪಯೋಗವಿಲ್ಲ,
ಪಾದಯಾತ್ರೆ ಮಾಡಿಕೊಳ್ಳಲಿ ಅಡ್ಡಿಯಿಲ್ಲ, ಮಾಡಲು ಆದರೆ ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಎಂದು ನೆನಪು ಮಾಡಿಕೊಳ್ಳಲಿ ಎಂದರು.