Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Local News

ಬಿಜೆಪಿ ವಿರೋಧಿ ಆಡಳಿತವಿರುವ ರಾಜ್ಯಗಳು ಭಯೋತ್ಪಾದಕರ ಅಡಗು ತಾಣವಾಗುತ್ತಿವೆ

ಬಿಜೆಪಿ ವಿರೋಧಿ ಆಡಳಿತವಿರುವ ರಾಜ್ಯಗಳು ಭಯೋತ್ಪಾದಕರ ಅಡಗು ತಾಣವಾಗುತ್ತಿವೆ

ರಾಯಚೂರು. ಬಿಜೆಪಿ ವಿರೋಧಿ ಆಡಳಿತವಿರುವ ರಾಜ್ಯಗಳು ಭಯೋತ್ಪಾದಕರ ಅಡಗು ತಾಣವಾಗುತ್ತಿವೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಪಿ.ರಾಜೀವ ಹೇಳಿದರು.

ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿ,ದೇಶದಲ್ಲಿ ಭಯೋತ್ಪಾದನೆ ಸಂಪೂರ್ಣ ನಿಯಂತ್ರಣಕ್ಕೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ದೇಶದಲ್ಲಿ ಅಧಿಕಾರಕ್ಕೆ ಬರಬೇಕೆಂದರು.
ಬೆಂಗಳೂರಿನ ದಿ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಕಾರಣವಾದವರು ಪಶ್ಚಿಮ ಬಂಗಾಳದಲ್ಲಿ ಸೆರೆ ಸಿಕ್ಕಿದ್ದಾರೆ. ಬಿಜೆಪಿ ವಿರೋಧಿ ಆಡಳಿತವಿರುವ ರಾಜ್ಯಗಳು ಭಯೋತ್ಪಾದಕರ ಅಡಗು ತಾಣವಾಗುತ್ತಿವೆ. ಬಿಜೆಪಿಯನ್ನು ವಿರೋಧಿಸುವ ಭಾವನೆಯಲ್ಲಿ ಉಗ್ರಗಾಮಿ ಗಳನ್ನು ಬ್ರದರ್ಸ್ ಎಂದು ಹೇಳುವ ಮನಸ್ಥಿತಿ ಯಲ್ಲಿ ಕಾಂಗ್ರೆಸ್‌ಯಿದೆ. ರಕ್ಷಣೆ ಕೊಡುವ ಮನಸ್ಥಿತಿ ಬೆಳೆಯುತ್ತಿರುವದಕ್ಕೆ ಘಟನೆಗೆ ನಿದರ್ಶನ. ದೇಶದಲ್ಲಿ ಭಯೋತ್ಪಾದನೆ ಹತ್ತಿಕ್ಕಲು ಜನರು ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ ಎಂದರು.

 

Megha News